ರಾಣೇಬೆನ್ನೂರಲ್ಲಿ 14 ರಂದು ರಾಷ್ಟ್ರಭಕ್ತಿ ಪುನರ್ ಜಾಗೃತಿ ಸಮಾರಂಭ
Patriotism revival ceremony to be held in Ranebennur on the 14th
ರಾಣೇಬೆನ್ನೂರಲ್ಲಿ 14 ರಂದು ರಾಷ್ಟ್ರಭಕ್ತಿ ಪುನರ್ ಜಾಗೃತಿ ಸಮಾರಂಭ
ರಾಣೇಬೆನ್ನೂರು 06: ಅಗಸ್ಟ್ 15ರಂದು ನಡೆಯಲಿರುವ 79 ನೇ ಭಾರತ ಸ್ವಾತಂತ್ರ್ಯೋತ್ಸವದ ಮುನ್ನ ದಿನವಾದ ಗುರುವಾರ 14ರಂದು ಸಂಜೆ, ಭಾರತ ಮಾತಾ ಉತ್ಸವ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಭಾರತ ಮಾತಾ ಮೆರವಣಿಗೆ ಮತ್ತು ರಾಷ್ಟ್ರಭಕ್ತಿ ಪುನರ್ ಜಾಗೃತಿ ಸಮಾರಂಭವು ಮಾರುತಿ ನಗರದ ಭಾರತ ಮಾತಾ ಮಂದಿರದ ಆವರಣದಲ್ಲಿ ಜರುಗಲಿದೆ ಎಂದು ಸಮಿತಿಯ ಅಧ್ಯಕ್ಷ ಎಸ್. ಜಿ. ಮಹಾನುಭಾವಿಮಠ ಹೇಳಿದರು.
ಸ್ವಾತಂತ್ರ್ಯ ಮುನ್ನಾದಿನ ಅಂದು ದೇಶ ಭಕ್ತಿ ಬಿಂಬಿತ ಸಾಂಸ್ಕೃತಿಕ ಕಾರ್ಯಕ್ರಮಗಳು. ದೇಶ ಮತ್ತು ದೇಶಾಭಿಮಾನ ಮತ್ತು ಇತಿಹಾಸದ ಪರಿಕಲ್ಪನೆ ಕುರಿತು "ಸ್ವಾತಂತ್ರ್ಯೋತ್ಸವ " ಸಂಭ್ರಮಾಚರಣೆ ಏರಿ್ಡಸಲಾಗಿದೆ. ಶ್ರೀ ಪ್ರಕಾಶಾನಂದಜಿ ಮಹಾರಾಜ್ ದಿವ್ಯ ಸಾನಿಧ್ಯ ವಹಿಸುವರು. ಎಸ್. ಬಿ ಮಠದ ಅಧ್ಯಕ್ಷತೆ ವಹಿಸುವರು. ಶಾಸಕ ಪ್ರಕಾಶ ಕೋಳಿವಾಡ ಅವರು, ಉದ್ಘಾಟಿಸುವರು. ನಗರಸಭೆ ಅಧ್ಯಕ್ಷ ಚಂಪಕ ಬಿಸಲಹಳ್ಳಿ , ತಹಸಿಲ್ದಾರ್ ಆರ್.ಎಚ್. ಭಾಗವಾನ, ಪೌರಾಯುಕ್ತ ಎಫ್. ಐ. ಇಂಗಳಗಿ, ಮಾಜಿ ಅಧ್ಯಕ್ಷ ಶೇಖಣ್ಣ ಹೊಸಗೌಡ್ರ, ವರ್ತಕ ಮಲ್ಲೇಶಪ್ಪ ಅರಕೇರಿ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು. ಗಣ್ಯರು, ಸದಸ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 