ಶಿವಾಜಿ ಮಹಾರಾಜ ಉದ್ಯಾನವನದ ಅಭಿವೃದ್ಧಿಗೆ ಪಾಟೀಲ ಚಾಲನೆ
ಲೋಕದರ್ಶನ ವರದಿ
ಬೆಳಗಾವಿ 27: ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಈಗ ಅಭಿವೃದ್ಧಿಯ ಪರ್ವ ಆರಂಭವಾಗಿದ್ದು ಶಾಸಕ ಅಭಯ ಪಾಟೀಲ ಇಂದು ಬೆಳಗಿನ ಜಾವ 7. ಘಂಟೆಗೆ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನವನದ ಅಭಿವೃದ್ಧಿಗೆ ಚಾಲನೆ ನೀಡಿದರು. ಒಂದು ಕೋಟಿ ಮೂವತ್ತು ಲಕ್ಷ ರೂ ವೆಚ್ಚದಲ್ಲಿ ಉದ್ಯಾನವನದ ಅಭಿವೃದ್ಧಿ ಆಕರ್ಷಕ ಮಕ್ಕಳ ಆಟಕೀಯ ಸಾಮುಗ್ರಿಗಳ ಅಳವಡಿಕೆ, ಪುಟ್ ಪಾತ್ ಅಗಲೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಭಯ ಪಾಟೀಲ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಬೆಳಗಾವಿ ದಕ್ಷಿಣ ಮತಕ್ಷೇತ್ರದ ರಸ್ತೆಗಳ ಸುಧಾರಣೆಗೆ ಯೋಜನೆ ರೂಪಿಸಲಾಗಿದೆ ಜನೆವರಿ ತಿಂಗಳಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗುತ್ತವೆ. ಮೊದಲನೇಯ ರೆಲ್ವೇ ಗೇಟ್ನಿಂದ ಬಸವೇಶ್ವರ ವೃತ್ತದವರೆಗಿನ ರಸ್ತೆ, ಶಿವಾಜಿ ಗಾರ್ಡನ್ ಪಕ್ಕದಲ್ಲಿರುವ ಭಾತಖಾಂಡೆ ಶಾಲೆಯಿಂದ ಎಂ ಆರ್ ಎಫ್ ಶೋ ರೂಂ ವರೆಗಿನ ರಸ್ತೆ, ರೂಪಾಲಿ ಕಲ್ಯಾಣ ಮಂಟಪದಿಂದ ವಿಆರ್ಎಲ್ ಗೋಡಾವನ್ ವರೆಗಿನ ರಸ್ತೆ, ಆರ್ ಪಿ ಡಿ ಸರ್ಕಲ್ ದಿಂದ ಜೈಲ್ ಶಾಲೆವರೆಗಿನ ರಸ್ತೆ, ಮಹಾವೀರ ಭವನದಿಂದ ಭಗತಸಿಂಗ್ ಉದ್ಯಾನದಿಂದ ಮೇಗದೂತ ಹೌಸಿಂಗ್ ಸೊಸಾಯಿಟಿ ಮುಖಾಂತಾರ ಶಹಾಪೂರ ಪೊಲಿಸ್ ಠಾಣೆಯ ವಡಗಾವಿ ಮುಖ್ಯ ರಸ್ತೆಗೆ ಜೋಡನೆ, ಬ್ಯಾಂಕ್ ಆಫ್ ಇಂಡಿಯಾದಿಂದ ನಾಥ ಫೈ ಸರ್ಕಲ್ ವರೆಗಿನ ರಸ್ತೆ ಅನಗೋಳ ನಾಕಾ (ಅನಗೋಳ ಮುಖ್ಯ ರಸ್ತೆ) ದಿಂದ, ಹರಿ ಮಂದಿರ ಎದುರುಗಿನ ರಸ್ತೆ ಮುಖಾಂತರ ಛತ್ರಪತಿ ಸಂಭಾಜಿ ಮಹಾರಾಜರ ವೃತ್ತದ ವೆರೆಗ , ಮಹಾತ್ಮಾ ಪುಲೆ ರಸ್ತೆ, ಶಾಸ್ತ್ರೀನಗರದ ಎಲ್ಲ ಒಳರಸ್ತೆಗಳು, ಹುಲಬತ್ತಿ ಕಾಲೋನಿಯ ಎಲ್ಲ ಒಳರಸ್ತೆಗಳು, ಗೂಡ್ಸೆಡ ರೋಡನ ಎಲ್ಲ ಒಳರಸ್ತೆಗಳು, ಕಪೀಲ ಕಾಲೋನಿಯ ಎಲ್ಲ ಒಳರಸ್ತೆಗಳು, ಮಹಾದ್ವಾರ ರೋಡ ಎಲ್ಲ ಕ್ರಾಸ ರಸ್ತೆಗಳು, ನಾಥ ಪೈ ಸರ್ಕಲ್ ದಿಂದ ಜೈಲ್ ಶಾಲೆಯ ರಸ್ತೆಗಳ
ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಲಿದ್ದು ಕಾಮಗಾರಿಗಳು ನಡೆಯುವ ಸಂಧರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಅಭಯ ಪಾಟೀಲ ಮನವಿ ಮಾಡಿಕೊಂಡರು. ಜೊತೆಗೆ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಬರುವ ಪೀರನವಾಡಿ, ಮಚ್ಛೆ, ಹುಂಚ್ಯಾನಟ್ಟಿ ಸೇರುದಂತೆ ನಾಲ್ಕು ಗ್ರಾಮ ಪಂಚಾಯ್ತಿಗಳ ವ್ತಾಪ್ತಿಯಲ್ಲಿ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಜನೇವರಿ ತಿಂಗಳಲ್ಲಿ ಆರಂಭಗೊಂಡು ಮೇ ತಿಂಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಅಭಯ ಪಾಟೀಲ ಹೇಳಿದರು.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಎಲ್ಲ ಪ್ರಮುಖ ರಸ್ತೆಗಳ ಸುಧಾರಣೆ,ಚರಂಡಿ,ಡ್ರಿನೇಜ್ ನಿಮರ್ಾಣದ ಕಾಮಗಾರಿಗಳನ್ನು ಪೂರ್ಣಗೊಳಿಸಿ ನಂತರ ಪಾರ್ಕಗಳ ಅಭಿವೃದ್ಧಿ ಮತ್ತು ಇತರ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಶಾಸಕ ಅಭಯ ಪಾಟೀಲ ಹೇಳಿದರು.
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ 