ಪಠಾಣ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು : ಜಯಕುಮಾರ

Pathan problems should be responded to and worked on: Jayakumar

ಪಠಾಣ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು :  ಜಯಕುಮಾರ

ಶಿಗ್ಗಾವಿ 22  :ಉಪಚುನಾವಣೆಯಲ್ಲಿ ತಮ್ಮ ಪ್ರಾಣವನ್ನು ಪಣವಿಟ್ಟು ಜೀವನದ ಹಂಗು ತೊರೆದು ರಕ್ತವನ್ನು ಬೆವರಾಗಿ ಹರಿಸಿ ಶ್ರಮವಹಿಸಿದ ನಿಮಿತ್ಯ ಜಯಶಾಲಿಯಾಗಲು ಕಾರಣವಾಯಿತು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ ಜಯಕುಮಾರ ಹೇಳಿದರು. 

   ಪಟ್ಟಣದ ಗುಜರಾತ ಮಹಲನಲ್ಲಿ ಬೆಳಗಾವಿ ಸಮಾವೇಶ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಿರಂತರವಾಗಿ 4 ತಿಂಗಳುಗಳ ಕಾಲ ಭೂತ ಬಲಗೋಳಿಸಿದರ ಪರಿಣಾಮ ಹಾಗೂ ಕಾರ್ಯಕರ್ತರಿಂದ ಮಾತ್ರ ಪಕ್ಷ ಗೆಲ್ಲಲು ಸಾದ್ಯ ಅಲ್ಲದೇ ಕ್ಷೇತ್ರ ವಿಜಯಶಾಲಿಯಾಗಲು ರಾಷ್ಟ್ರದ ನಾಯಕರ ಆದೇಶದ ಮೇರೆಗೆ ಮತ್ತು ಸಿ.ಎಂ. ಸಿದ್ದರಾಮಯ್ಯ, ಕೆ.ಪಿ.ಸಿ.ಸಿ ರಾಜ್ಯಾಧ್ಯಕ್ಷ ಹಾಗೂ ಡಿ.ಸಿ.ಎಂ ಡಿ.ಕೆ.ಶಿವಕುಮಾರ, ಸಚಿವರು, ರಾಜ್ಯ ಮುಖಂಡರು, ನಾಯಕರು ಹೆಚ್ಚು ಶ್ರಮವಹಿಸಿ ಕಾರ್ಯನಿರ್ಹಿಸಿದ್ದಾರೆ. ಜಿಲ್ಲಾ ಅದ್ಯಕ್ಷ ಸೇರಿದಂತೆ ಕ್ಷೇತ್ರದ ಆಕಾಂಕ್ಷಿಗಳು ಹಾಗೂ ಬ್ಲಾಕ್ ಅದ್ಯಕ್ಷರು ಹೆಚ್ಚು ಕೆಲಸ ನಿರ್ವಹಿಸಿದರು. ಕ್ಷೇತ್ರದ ಮತದಾರರಿಗೆ ಚೀರ ಋಣಿಯಾಗಿರಬೇಕು ಅಲ್ಲದೇ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಯಾಶೀರಖಾನ ಪಠಾಣ ಮಾಡಬೇಕು. ಕ್ಷೇತ್ರದ ಅಭಿವೃದ್ದಿಗೆ ಶಾಸಕರು ಕಂಕಣ ಬದ್ದರಾಗಬೇಕು.     ಬೆಳಗಾವಿಯಲ್ಲಿ ನಡೆಯುವ ಮಹಾತ್ಮ ಗಾಂದೀಜಿ ಶತಮಾನೋತ್ಸವ ಕಾರ್ಯಕ್ರಮಕ್ಕೆ ಕ್ಷೇತ್ರದಿಂದ 5 ಸಾವಿರ ಕಾರ್ಯಕರ್ತರನ್ನು ಕರೆದುಕೊಂಡು ಬರುತ್ತೇನೆ ಎಂದು ಶಾಸಕ ಯಾಸೀರಖಾನ ಪಠಾಣ ಮಯೂರ ಜಯಕುಮಾರಗೆ ವಾಗ್ದಾನ ಮಾಡಿದರು.     ಶಾಸಕ ಯಾಸೀರಖಾನ ಪಠಾಣ, ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಮಹಿಳಾ ಜಿಲ್ಲಾದ್ಯಕ್ಷೆ ಪ್ರೇಮಾ ಪಾಟೀಲ,ಬ್ಲಾಕ ಅಧ್ಯಕ್ಷರಾದ ಬಿ.ಸಿ.ಪಾಟೀಲ, ಎಂ.ಜೆ.ಮುಲ್ಲಾ, ಹನುಮಂತ ಬಂಡಿವಡ್ಡರ, ಗುಡ್ಡಪ್ಪಾ ಜಲದಿ, ಶೇಖಪ್ಪ ಮಣಕಟ್ಟಿ, ಗೌಸಖಾನ ಮುನಶಿ, ಅತ್ತಾವುಲ್ಲಾ ಖಾಜೇಖಾನವರ, ಮಲ್ಲಮ್ಮ ಸೋಮನಕಟ್ಟಿ, ಶಂಭುಲಿಂಗಪ್ಪ ಆಜೂರ, ಅಬ್ದುಲಕರೀಂ ಮೊಗಲಲ್ಲಿ, ಬಾಬರ ಬೊವಾಜಿ, ಅಣ್ಣಪ್ಪ ಲಮಾಣಿ, ಚಂದ್ರು ಕೊಡ್ಲಿವಾಡ, ಎಂ.ಹೆಚ್‌.ಪಠಾಣ, ಮಜೀದ ಮಾಳಗಿಮನಿ, ಮುನ್ನಾ ಲಕ್ಷ್ಮೇಶ್ವರ, ಮುನ್ನಾ ಮಾಲದಾರ, ಮಹಾಂತೇಶ ಸಾಲಿ ಸ್ವಾಗತಿಸಿದರು. ಸುಧೀರ ಲಮಾಣಿ ನಿರೂಪಿಸಿದರು.