ಪತಂಜಲಿ ವತಿಯಿಂದ ಶ್ರೀ ಸಿದ್ಧಾರೂಢ ಸ್ವಾಮೀಜಿ ಮಠದಲ್ಲಿ ವಿಶ್ವ ಧ್ಯಾನ ದಿನ ವಿಜೃಂಭಣೆಯಿಂದ ಆಚರಣೆ
Patanjali celebrates World Meditation Day with great enthusiasm at Sri Siddharth Swamiji Math
ಹುಬ್ಬಳ್ಳಿ 21: ಇಂದು ಪತಂಜಲಿ ಯೋಗ ಪೀಠ, ಕರ್ನಾಟಕ ವತಿಯಿಂದ ಹುಬ್ಬಳ್ಳಿಯ ವಿಶ್ವ ಪ್ರಸಿದ್ಧ ಸಿದ್ಧಾರೂಢ ಮಠದಲ್ಲಿ ವಿಶ್ವ ಧ್ಯಾನ ದಿನಾಚರಣೆ ಅಂಗವಾಗಿ ಸಾಮೂಹಿಕ ಸತ್ಸಂಗ ಸಿದ್ದಾರೂಢ ಸ್ವಾಮಿಗಳ ಆರತಿಯಲ್ಲಿ ಭಾಗಿಯಾಗಿ ಸತ್ಸಂಗ ಮಾಡಿದ ಮೇಲೆ ಯೋಗ ಪ್ರಾಣಾಯಾಮ ಮಾಡಲಾಯಿತು. ನಂತರ ಸಾಮೂಹಿಕವಾಗಿ ವಿಶೇಷ ಓಂಕಾರ ಧ್ಯಾನ ಮಾಡಲಾಯಿತು. ಪತಂಜಲಿ ಯೋಗ ಪೀಠ, ಕರ್ನಾಟಕ ದ ವರಿಷ್ಠ ರಾಜ್ಯ ಪ್ರಭಾರಿ ಅಂತರರಾಷ್ಟ್ರೀಯ ಯೋಗ ಗುರು ಭವರಲಾಲ್ ಆರ್ಯ ಅವರು ವಿಶೇಷ ಯೋಗ ಧ್ಯಾನ ಮಾರ್ಗದರ್ಶನ ಮಾಡಿ ಮಾತನಾಡಿದ ಅವರು, " ನಾವು ಇಂದು ಓಂಕಾರ ಧ್ಯಾನದಿಂದ ಅಷ್ಟ ಚಕ್ರಗಳ ಮೇಲೆ ಅಭ್ಯಾಸ ಮಾಡಿದೇವು. ಇದರಿಂದ ಒತ್ತಡ ನಿವಾರಣೆ ಆಗುತ್ತದೆ.
ಓಂಕಾರವು ಆ ಉಮಕಾರ ಸೇರಿದರೆ ಓಂಕಾರ ಆಗುತ್ತದೆ. ಇದು ಒಂದು ಡಿವೈನ್ ಎನರ್ಜಿ. ಭಗವಂತನ ಹಲವು ನಾಮಗಳಲ್ಲಿ ಶ್ರೇಷ್ಠನಾಮ ಓಂಕಾರ. ಬೇರೆ ಎಲ್ಲಾ ನಾಮ ಉಚ್ಚಾರಣೆ ಮಾಡುವಾಗ ನಾಲಿಗೆಯನ್ನು ಉಪಯೋಗ ಮಾಡುತ್ತೇವೆ. ಉದಾಹರಣೆಗೆ ಶಿವ ಕೃಷ್ಣ ರಾಮ ಉಚ್ಚಾರಣೆ ಮಾಡುವಾಗ ನಾಲಿಗೆ ಉಪಯೋಗಿಸುತ್ತೇವೆ. ಆದರೆ ನಾವು ಓಂಕಾರ ಉಚ್ಚಾರಣೆ ಮಾಡುವಾಗ ನಾವು ನಾಲಿಗೆ ಉಪಯೋಗ ಮಾಡುವುದಿಲ್ಲ. ಓಂಕಾರದ ಅಭ್ಯಾಸ ಮಾಡುವುದರಿಂದ ಎಲ್ಲಾ ಮಾನಸಿಕ ತೊಂದರೆಗಳು ಕಡಿಮೆಯಾಗುತ್ತದೆ. ನೆನಪಿನ ಶಕ್ತಿ ಮೆಮೊರಿ ಪವರ್ ತುಂಬಾ ಹೆಚ್ಚಾಗುತ್ತದೆ. ಜೊತೆಗೆ ಒಂದು ಸಕಾರಾತ್ಮಕ ಎನರ್ಜಿಯು ಉತ್ಪತ್ತಿಯಾಗುತ್ತದೆ. ನಾವು ಇಂದು ಓಂಕಾರ ಧ್ಯಾನದಿಂದ ದೇಹದ ಎಂಟು ಚಕ್ರಗಳಾದ ಮೂಲಾಧಾರ, ಸ್ವಾಧಿಷ್ಠಾನ, ಮಣಿಪುರ, ಅನಾಹತ (ಹೃದಯ), ವಿಶುದ್ಧಿ, ಆಜ್ಞಾ, ಸಹಸ್ರಾರ ಚಕ್ರಗಳ ಮೇಲೆ ಧ್ಯಾನ ಅಭ್ಯಾಸ ಮಾಡಿದ್ದೇವೆ.
ಜೊತೆಗೆ ಶರೀರದ ಶುದ್ಧಿ ಮಾಡುವಂತ ಆಂತರಿಕ ಅಂತರಂಗದ ಯಾತ್ರೆ ಮಾಡುತ್ತೇವೆ. ಧ್ಯಾನ ಮಾಡುವುದರಿಂದ ನಾವು ಪರಿಪೂರ್ಣತೆ ಕಡೆ ಸಾಗುತ್ತೇವೆ. ಓಂಕಾರ ಉಚ್ಚಾರಣೆಯಿಂದ ನಮ್ಮ ಶರೀರದಲ್ಲಿ ಎಂಡೋಫಿನ್, ಡೋಪಮಿನ್ ಹಾರ್ಮೋನ್ಸ್ ಉತ್ಪತ್ತಿಯಾಗುತ್ತದೆ. ಈ ಹಾರ್ಮೋನ್ ಗಳು ನಮಗೆ ತುಂಬಾ ಆನಂದ ಸಂತೋಷ ನೀಡುತ್ತವೆ. 5 ರಿಂದ 10 ನಿಮಿಷ ಧ್ಯಾನ ಮಾಡ್ತಾ ಇದ್ರೆ ನೂರು ವರ್ಷ ನಿರೋಗಿ ಆಗಿರಬಹುದು. ಅಷ್ಟೇ ಅಲ್ಲ 108 ಬಾರಿ ಓಂ ಕಾರದ ನಿರಂತರ ಉಚ್ಚಾರಣೆ ಮಾಡಿದರೆ, ನಾವು ಮಾಡಿದ ಎಲ್ಲ ಸಂಕಲ್ಪಗಳು ಸಿದ್ಧಿಸುತ್ತವೆ. ಇಂತಹ ಒಂದು ಅದ್ಭುತವಾದ ಧ್ಯಾನ ವಿದ್ಯೆಯನ್ನು ಸಾಮಾನ್ಯ ಗೃಹಸ್ಥ ವ್ಯಕ್ತಿ ಅಭ್ಯಾಸ ಮಾಡಬಹುದು. ಇದು ತುಂಬಾ ಸರಳವಾಗಿದೆ. ರೋಗಿಗಳ ಮೇಲೆ ಪ್ರಯೋಗ ಮಾಡಿದ್ದಾರೆ, ನಮ್ಮ ದೇಶದ, ವಿಶ್ವದ ಮತ್ತು ಅಮೆರಿಕದ ಬಹಳಷ್ಟು ಈ ವಿಜ್ಞಾನಿಗಳು ಓಂಕಾರದ ಮೇಲೆ ತುಂಬಾ ಅಧ್ಯಯನ ಮಾಡಿದ್ದಾರೆ. ಓಂಕಾರ ಉಚ್ಚಾರಣೆಯಿಂದ ತುಂಬಾ ಅದ್ಭುತ ಮಾನಸಿಕ, ದೈಹಿಕ ಲಾಭ, ಬದಲಾವಣೆ ಅವರೆಲ್ಲ ಕಂಡು ಕೊಂಡಿದ್ದಾರೆ.
ಏಕ ಕಾಲಕ್ಕೆ ಲಕ್ಷಾಂತರ ಜನ ಯೋಗ ಸಾಧಕರು ಧ್ಯಾನದ ಅಭ್ಯಾಸ ಮಾಡಿದ್ದಾರೆ. ಯೋಗ, ಧ್ಯಾನ, ಪ್ರಾಣಾಯಾಮ ಮತ್ತು ಅಗ್ನಿಹೋತ್ರದ ಅಭ್ಯಾಸ ಕರ್ನಾಟಕ ರಾಜ್ಯದ ಎಲ್ಲಾ ಕಡೆ ಸರಳವಾಗಿ ಸರ್ವಸಾಮಾನ್ಯರು, ರೈತರು, ಕಾರ್ಮಿಕರು, ಪ್ರತಿಯೊಬ್ಬರು ಪ್ರತಿದಿನ ಅಭ್ಯಾಸ ಮಾಡಬಹುದು. ಸಂಪೂರ್ಣ ಉಚಿತವಾಗಿ ನಮ್ಮ ಯೋಗ ಶಿಕ್ಷಕರು ಕಲಿಸಿಕೊಡುತ್ತಾರೆ. ಆಸಕ್ತರು ರಾಜ್ಯ ಕಾರ್ಯಾಲಯದ ಸಂಪರ್ಕ ಸಂಖ್ಯೆ 9008100896, 7676728139, 9008100882 ಸಂಪರ್ಕಿಸಿ. ಎಲ್ಲರೂ ಅವರು ಮಾಡುವಂತಹ ಕಾರ್ಯಗಳ ಮಧ್ಯೆ ಧ್ಯಾನದ ಅಭ್ಯಾಸದಿಂದ ಅವರು ಮಾಡುವ ಕೆಲಸ ಶ್ರೇಷ್ಠವಾಗುತ್ತದೆ. ವಿಶೇಷವಾಗಿ ಹೇಳಬೇಕಾದರೆ ನಮ್ಮ ದೇಹದಲ್ಲಿರುವ ಅಪಾರ ಶಕ್ತಿ ನಮ್ಮ ದೇಹದ ಒಳಗಡೆನೆ ಅದು ಸುಪ್ತವಾಗಿದೆ. ಆದರೆ ಓಂಕಾರ ಧ್ಯಾನದ ಅಭ್ಯಾಸದಿಂದ ಆ ಸುಪ್ತ ಶಕ್ತಿಯನ್ನು ನಾವು ಜಾಗೃತಗೊಳಿಸಬಹುದು. ಸರ್ವರಿಗೂ ವಿಶ್ವ ಧ್ಯಾನ ದಿನಾಚರಣೆಯ ಹಾರ್ದಿಕ ಶುಭಾಶಯಗಳು" ಎಂದರು. ಈ ವಿಶೇಷ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡ ಪತಂಜಲಿ ಪರಿವಾರದ ರಾಜಶೇಖರ ಕುದರಿ, ವಾಮನ ಶಾನುಭಾಗ್, ಮಹೇಶ್ ಕೊಟ್ಟಿಗೆರೆ, ಹರ್ಷಿತಾ, ವಿಜಯಲಕ್ಷ್ಮಿ ಟೊಂಗಳಿ, ಬಸವರಾಜ ಹಿರೇಮಠ, ಮನೋಜ್ ಸಾಹು, ಭೀಮರಾವ್ ಪವಾರ್, ಮೌನೇಶ್ ಬಡಿಗೇರ್, ಬಸವರಾಜ ಕೋರಿ, ಮುತ್ತಪ್ಪ ನಲವಾಡಿ, ವೀರೇಶ, ಅಕ್ಷಯ, ದೇವೇಂದ್ರ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 