ಪಾರ್ಥನಹಳ್ಳಿ ಮುಸ್ಲಿಂ ಸಮಾಜ ಬಾಂಧವರಿಂದ ಶಾಸಕ ರಾಜು ಕಾಗೆಗೆ ಸನ್ಮಾನ
Parthanahalli Muslim community members felicitate MLA Raju Kage
ಪಾರ್ಥನಹಳ್ಳಿ ಮುಸ್ಲಿಂ ಸಮಾಜ ಬಾಂಧವರಿಂದ ಶಾಸಕ ರಾಜು ಕಾಗೆಗೆ ಸನ್ಮಾನ.
ಅಥಣಿ : ನಾನು ಸಹಕಾರ ರಂಗದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದೇನೆ, ನಾನು ಯಾವ ಬಣಕ್ಕೂ ಅಂಟಿಕೊಂಡಿಲ್ಲ, ಬೆಳಗಾವಿ ಮಧ್ಯವರ್ತಿ ಬ್ಯಾಂಕಿಗೆ ನಾಮಪತ್ರಸಲ್ಲಿಸಿ ಅವರೋಧವಾಗಿ ಆಯ್ಕೆಗೊಂಡಿರುವುದಾಗಿ ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು. ಅವರು ಉಗಾರ ಖುರ್ದ ಪಟ್ಟಣದಲ್ಲಿ ಮುಸ್ಲಿಂ ಸಮಾಜದ ಮುಖಂಡರು ಹಾಗೂ ಪಾರ್ಥನಳ್ಳಿ ಪಿಕೆಪಿಎಸ್ ಅಧ್ಯಕ್ಷ ರಫೀಕ ಪಟೇಲ ಹಾಗೂ ಸದಸ್ಯರಿಂದ ಸನ್ಮಾನ ಸ್ವೀಕರಿಸಿ ಮಾಧ್ಯಮದೊಂದಿಗೆ ಮಾತನಾಡಿದರು, ನನ್ನ ಹಿರಿತನದ ಆಧಾರದ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ನನ್ನ ವಿರುದ್ಧ ಸ್ಪರ್ಧೆ ಮಾಡಿದ್ದ ಮಾಜಿ ಸಚಿವ ಶ್ರೀಮಂತ ಪಾಟೀಲ ಪುತ್ರ ಶ್ರೀನಿವಾಸ ಪಾಟೀಲ ಅವರ ಮನವೊಲಿಸಿ ನಾಮಪತ್ರ ಹಿಂಪಡಿಸಿ ನನ್ನನ್ನ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.ಅವರ ಸಹಾಯ ಸಹಕಾರದಿಂದ ನಾನು ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿ ಆಯ್ಕೆಯಾಗಿದ್ದು, ಜಿಲ್ಲಾ ಉಸ್ತೂವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ, ಎಲ್ಲ ಸೊಸೈಟಿ ಅಧ್ಯಕ್ಷರು, ಸದಸ್ಯರಿಗೂ ಹಾಗೂ ಕಾಗವಾಡ ಮತಕ್ಷೇತ್ರದ ಜನತೆಗೆ ಕೃತಜ್ಞತೆಗಳನ್ನಸಲ್ಲಿಸುತ್ತೇನೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಅವರು ಹೇಳಿದರು.
ನಮ್ಮಲ್ಲಿ ಯಾವ ಬಣ ಇಲ್ಲ.ನಾನು ಎತ್ತಿಕೊಂಡವರ ಕೂಸು.ಜನತೆಯ ಒತ್ತಾಯದ ಮೇರೆಗೆ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದೆ. ನನ್ನನ್ನು ಅವಿರೋಧವಾಗಿ ಆಯ್ಕೆಗೊಳಿಸಿರುವುದು ಸಂತಸ ತಂದಿದೆ ಎಂದರು. ಲಿಂಗಾಯತರನ್ನೇ ಅಧ್ಯಕ್ಷರನ್ನಾಗಿ ಮಾಡುವವರಿದ್ದಾರೆ,ನೀವೂ ಕೂಡ ಇಚ್ಚುಕರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ರಾಜು ಕಾಗೆ ನಾನು ಡಿಸಿಸಿ ಬ್ಯಾಂಕಿನ ಅಧ್ಯಕ್ಷನಾಗುವ ಆಸೆಯೂ ಇಲ್ಲ ಆಕಾಂಕ್ಷಿಯೂ ಅಲ್ಲ ಎಂದು ಸ್ಪಷ್ಟಪಡಿಸಿದರು. ಲಕ್ಷ್ಮಣ ಸವದಿ, ಸತೀಶ್ ಜಾರಕಿಹೊಳಿ ಮತ್ತು ನಮ್ಮಲ್ಲಿ ಕೆಲವು ರಾಜಕೀಯ ಗೊಂದಲಗಳಾಗಿವೆ ಹೊರತು ನಾವೆಲ್ಲರೂ ಎಲ್ಲರೂ ಒಂದೇ. ಚುನಾವಣೆ ಮುಗಿದ ನಂತರ ಎಲ್ಲರು ಕೂಡಿಕೊಂಡು ಜಿಲ್ಲಾ ಮಧ್ಯವರ್ತಿ ಬ್ಯಾಂಕನ್ನು ಪ್ರಗತಿಯತ್ತ ಸಾಗಿಸುತ್ತಾ ರೈತರ ಹಿತಕಾಪಾಡುತ್ತೇವೆ ಬ್ಯಾಂಕಿನ ಏಳಿಗೆಗಾಗಿ ಶ್ರಮಿಸುತ್ತೇವೆ ಎಂದು ರಾಜು ಕಾಗೆ ಹೇಳಿದರು. ಈ ವೇಳೆ ಕಾಗವಾಡ ತಾಲೂಕಾ ಮುಸ್ಲಿಂ ಸಮಾಜದ ಮುಖಂಡರು ಹಾಗೂ ಪಾರ್ಥನಳ್ಳಿ ಸಾಹಾರಾ ಪಿಕೆಪಿಎಸ್ ಅಧ್ಯಕ್ಷ ರಫೀಕ ಪಟೇಲ.ಗ್ರಾಮ ಪಂಚಾಯತ್ ಅಧ್ಯಕ್ಷ ಶರೀಫ ಮುಲ್ಲಾ,ಮುಖಂಡರಾದ ಶಂಕರ ವಾಘಮೊಡೆ,ಸೌರವ ಪಾಟೀಲ.ಜ್ಯೋತಿಕುಮಾರ ಪಾಟೀಲ,ಬಸನಗೌಡ ಪಾಟೀಲ.ಕಾಮಗೌಡ ಪಾಟೀಲ,ಇಬ್ರಾಹಿಂ ಮೋಳೆ,ಕಾಡಪ್ಪ ಸಿಂಗಾಡೆ,ಸದಾಶಿವ ಬಿರಾದಾರ,ಇಸ್ಮಾಯಿಲ್ ಪಟೇಲ,ಅಮೀರ ಪಟೇಲ,ಬಂಡು ನಾಯಿಕ,ರಮೇಶ ಕಾಂಬಳೆ,ರಫೀಕ ಪಟೇಲ,ಸಿದ್ದು ಅವಳೇಕರ ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 