ಉರ್ದು ಶಾಲೆಗಳಲ್ಲಿ ಶಿಕ್ಷಕರ ಕೊರತೆಹಿ ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಿಗೆ ಆತಂಕ !

ಉರ್ದು ಶಾಲೆಗಳಲ್ಲಿ ಶಿಕ್ಷಕರ ಕೊರತೆಹಿ ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಿಗೆ ಆತಂಕ ! Parents worried about their children's future due to teacher shortage in Urdu schools!

ಉರ್ದು ಶಾಲೆಗಳಲ್ಲಿ ಶಿಕ್ಷಕರ ಕೊರತೆಹಿ ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಿಗೆ ಆತಂಕ ! 

ಕೊಪ್ಪಳ 30: ತಾಲ್ಲೂಕಿನಲ್ಲಿವರ್ಷಗಳಿಂದಮುಂದಾಗುತ್ತಿರುವಉರ್ದುಮಾಧ್ಯಮದ ಶಾಲೆಗಳ ಶಿಕ್ಷಕರ ಕೊರತೆ ಇದೀಗ ಗಂಭೀರರೂಪವನ್ನುತೆಗೆದುಕೊಂಡಿದೆ. ವಿಶೇಷವಾಗಿ ನಗರ ಪ್ರದೇಶ ಮತ್ತು ನಗರಕ್ಕೆ ಹತ್ತಿರವಿರುವ ಶಾಲೆಗಳಲ್ಲಿ ಗಣಿತ ಮತ್ತು ವಿಜ್ಞಾನ  ಹಾಗೂ ಆಂಗ್ಲ ಭಾಷೆ ಭೋದಿಸುವ ಶಿಕ್ಷಕರ ಹುದ್ದೆಗಳು ಹತ್ತಾರು ವರ್ಷಗಳಿಂದ ಖಾಲಿಯೇ ಉಳಿದಿವೆ. ದಿಡ್ಡಿಕೇರಾ, ಕೊಟಗಾರಗೇರ, ಪಲ್ಟಾನ್‌ಗಲ್ಲೀ, ಮಂಗಳಾಪುರ ಮತ್ತು ಬಹದ್ದೂರ್ ಬಂಡಿ ಎಂಬ ಪ್ರದೇಶಗಳ ಸರ್ಕಾರಿಉರ್ದು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ಈ  ಪ್ರಮುಖ ವಿಷಯಗಳಲ್ಲಿ ಸದೃಢ ಮಾರ್ಗದರ್ಶನವಿಲ್ಲದೇಕಲಿಯುತ್ತಿದ್ದಾರೆ. ಈ ಕಳವಳಕಾರಿ ಪರಿಸ್ಥಿತಿಯು ಮಕ್ಕಳನ್ನು ಪಾಠಶಾಲೆಗೆತರುವಆಸಕ್ತಿಯನ್ನುಕುಗ್ಗಿಸುತ್ತಿದ್ದು, ಪೋಷಕರಲ್ಲಿಆತಂಕದಛಾಯೆ ಹರಡಿದೆ. “ಗಣಿತ ಮತ್ತು ವಿಜ್ಞಾನವಿಲ್ಲ ಮತ್ತುಅಂಗ್ಲದ ಶಿಕ್ಷಣ ಎಂದರೆ ದಿಕ್ಕಿಲ್ಲದ ನಾವಿಕನಂತೆಎನ್ನುವಂತೆ, ಆಧುನಿಕ ಶಿಕ್ಷಣದ ಮೂಲ ಅಡಿಪಾಯವಾಗಿರುವ ಈ ವಿಷಯಗಳಿಗೆ ಶಿಕ್ಷಕರೇ ಇಲ್ಲದಿರುವುದು ಶೈಕ್ಷಣಿಕಕ್ಷೇತ್ರದಲ್ಲಿತೀವ್ರಚರ್ಚೆಗೆಕಾರಣವಾಗಿದೆ.ಕಳೆದ ಕೆಲವು ವರ್ಷಗಳಲ್ಲಿ ಕೆಲವೊಮ್ಮೆ ಶಿಕ್ಷಕರನ್ನು ನಿಯೋಜನೆ ಮಾಡಿದರೂ, ಅವರಿಗೆ ಪಾಠದ ಹೊರಗಿನಕಾರ್ಯ ನಿಯೋಜನೆಅಥವಾ ಇಲಾಖಾ ಅಧಿಕಾರಿಗಳ ತಾತ್ಕಾಲಿಕ ಕರ್ತವ್ಯಗಳನ್ನು ನೀಡಲಾಗಿದೆಎಂಬುದು ಸ್ಥಳೀಯರ ಆಕ್ರೋಶ. ಇದರ ಪರಿಣಾಮವಾಗಿ ಶಿಕ್ಷಕರ ಪೂರ್ಣ ಸಮಯ ಮತ್ತು ಶಕ್ತಿ ಮಕ್ಕಳ ಕಲಿಕೆಗೆ ಮೀಸಲಾಗದಂತಾಗಿದೆ.“ಮಕ್ಕಳ ಭವಿಷ್ಯವನ್ನೇಕತ್ತಲಿಗೆ ತಳ್ಳುವ ಈ ನಿರ್ಲಕ್ಷ್ಯವನ್ನು ಸರಿಪಡಿಸದೇಇದ್ದರೆ, ಇಡೀತಲೆಮಾರಿಗೆ ಪ್ರಭಾವ ಬೀರುವ ಸಾಧ್ಯತೆಇದೆ” ಎನ್ನುತ್ತಾರೆ ಈ ಬಗ್ಗೆ ಜವಾಬ್ದಾರಿ ಹೊಂದಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯಉಪನಿರ್ದೇಶಕರಿಗೆ ಮಾನವೀಯ ಮನವಿಯೊಂದು ಸಲ್ಲಿಸಲಾಗಿದ್ದು,  

ಉರ್ದು ಶಾಲೆಗಳಿಗೆ ತ್ವರಿತವಾಗಿಗಣಿತ ಮತ್ತು ವಿಜ್ಞಾನ  ಹಾಗೂ ಇಂಗ್ಲಿಷ್ ಶಿಕ್ಷಕರ ನೇಮಕಾತಿ ಮಾಡಬೇಕೆಂಬ ಆಗ್ರಹದ ಜೊತೆ  ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಪಾಠದ ಹೊರಗಿನ ಕೆಲಸಗಳಿಗೆ ನಿಯೋಜಿಸದಂತೆ ಮನವಿ ಮಾಡಲಾಗಿದೆ. ಹೀಗೆ, ಶಿಕ್ಷಣವನ್ನು ಪ್ರತಿಯೊಬ್ಬ ಮಕ್ಕಳ ಹಕ್ಕಾಗಿ ಪರಿಗಣಿಸಿ, ಅದರ ಸಮಾನ ಹಂಚಿಕೆಗೆ ಶ್ರಮಿಸುವ ಸಮಯ ಬಂದಿದೆ ಎಂಬುದರಲ್ಲಿ ಅನುಮಾನವಿಲ್ಲ. ಉರ್ದು ಶಾಲೆಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಶಿಕ್ಷಕರ ಇಲ್ಲದ ಕಾರಣ ಖಖಐಅ ಎಲ್ಲಿ ಸತತವಾಗಿ 5 ವರ್ಷದಿಂದ ತೀರಕಡಿಮೆ ಮಕ್ಕಳ ಉತ್ತೀರ್ಣರಾಗುತ್ತಾರೆ ಇದಕ್ಕೆ ಕಾರಣ ಇಲಾಖೆಯ ತಪ್ಪು ನಿರ್ಧಾರಗಳು.