ಮಕ್ಕಳ ಬೆಳವಣಿಗೆಯಲ್ಲಿಪಾಲಕರ ಜವಾಬ್ದಾರಿ ಬಹಳಷ್ಟಿದೆ : ಬಿ. ಎಸ್. ಆಲದಕಟ್ಟಿ
Parents have a lot of responsibility in the development of children: B. S. Aladakatti
ಯರಗಟ್ಟಿ 21: ಮಕ್ಕಳ ಬೆಳವಣಿಗೆಯಲ್ಲಿಪಾಲಕರ ಜವಾಬ್ದಾರಿ ಬಹಳಷ್ಟಿದೆ. ಶಾಲೆಗೆ ಕಳಿಸಿದರೆ ಪಾಲಕರ ಜವಾಬ್ದಾರಿ ಮುಗಿದಂತಲ್ಲ, ಪಾಲಕರು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ಮುಖ್ಯ ಶಿಕ್ಷಕ ಬಿ. ಎಸ್. ಆಲದಕಟ್ಟಿ ಹೇಳಿದರು.ಸ್ಥಳೀಯ ಬಸವೇಶ್ವರ ಪ್ರೌಢಶಾಲೆಯಲ್ಲಿನಡೆದ ಒಂಬತ್ತನೇ ತರಗತಿ ವಿದ್ಯಾರ್ಥಿಗಳ ಪಾಲಕರ ಸಭೆ, ಶಾಲಾ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪರೀಕ್ಷಾ ದಿನಗಳು ಸಮೀಪಿಸುತ್ತಿರುವಂತೆ ಎಲ್ಲರ ಚಿತ್ತ ಫಲಿತಾಂಶದ ಪ್ರಗತಿಯತ್ತ ನೆಟ್ಟಿದೆ. ಆದ್ದರಿಂದ ಮಕ್ಕಳು ಮನೆಯಲ್ಲಿಇತರೆ ಕಾರ್ಯಗಳ ಕಡೆಗೆ ಹೆಚ್ಚು ಗಮನ ನೀಡದೆ, ಅಧ್ಯಯನದಲ್ಲಿತೊಡಗುವಂತೆ ಮಾಡಿರಿ ಎಂದ ಅವರು, ಈ ಬಾರಿ ಪ್ರಶ್ನೆ ಪತ್ರಿಕೆಗಳಲ್ಲಿಆದ ಬದಲಾವಣೆಯನ್ನು ಸಭೆಯ ಗಮನಕ್ಕೆ ತಂದರು.ಸಭೆ ಉದ್ದೇಶಿಸಿ ಉಪನ್ಯಾಸ ನೀಡಿದ ಡಾ. ಎಸ್. ಎ. ಜ್ಯೋಶಿ ಅವರು ಮಕ್ಕಳ ಸರ್ವತೋಮುಖ ವಿಕಾಸದಲ್ಲಿ ಶಾಲೆ ಮತ್ತು ಶಿಕ್ಷಕರಷ್ಟೇ ಪಾತ್ರ ಕುಟುಂಬ ಹಾಗೂ ಪಾಲಕರದ್ದು ಎಂಬುದನ್ನು ಮರೆಯಬಾರದು.
ಮಗು ಅತಿಹೆಚ್ಚಿನ ಸಮಯವನ್ನು ಪಾಲಕರೊಂದಿಗೆ ಕಳೆಯುವುದರಿಂದ ಮಗುವಿನ ಬಗ್ಗೆ ಹೆಚ್ಚಿನ ವಿಷಯಗಳನ್ನು ಅವರಿಂದ ಶಿಕ್ಷಕರು ತಿಳಿಯಲು ಅಂತೆಯೇ, ಶೈಕ್ಷಣಿಕ ವಿಷಯಗಳು ಮತ್ತು ತಮ್ಮ ಮಗುವಿನ ತರಗತಿಯಲ್ಲಿನ ವರ್ತನೆಯನ್ನು ತಿಳಿಯಲು ಪೋಷಕರಿಗೆ ಇದೊಂದು ಸದಾವಕಾಶ. ಇದು ಶಿಕ್ಷಿಸಲು ವಿಷಯ ತಿಳಿದುಕೊಳ್ಳುವ ಸಂದರ್ಭವಲ್ಲ ಎಂಬುದನ್ನು ಶಿಕ್ಷಕರು ಹಾಗೂ ಪೋಷಕರು ಮನಗಾಣಬೇಕು.ಪೋಷಕರು ಶಿಕ್ಷಕರಿಗಿಂತ ಹೆಚ್ಚಿನ ವಿದ್ಯಾವಂತರು ಆರ್ಥಿಕವಾಗಿ ಸಧೃಡರು ಆಗಿರಬಹುದು. ಆದರೆ ಪೋಷಕರ ಸಭೆಯಲ್ಲಿ ಅವರು ತಮ್ಮ ಪಾಂಡಿತ್ಯಪ್ರದರ್ಶನವನ್ನು ಮಾಡದೇ, ಶಿಕ್ಷಕರಿಗೆ ಸಲಹೆಹಿಸೂಚನೆಗಳನ್ನು ನೀಡುವ ಬದಲಾಗಿ ಮಕ್ಕಳ ಶೈಕ್ಷಣಿಕತೆಗೆ ಸಂಬಂಧಿಸಿದ ಅವರ ಸಂದೇಹಗಳನ್ನು ಪರಿಹರಿಸಿಕೊಳ್ಳಬೇಕು.
ಶಿಕ್ಷಕರೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು. ಪೋಷಕರ ಸಭೆಯಲ್ಲಿ ಸಮಯಾಭಾವವಿದ್ದಲ್ಲಿ ಮುಖ್ಯವಾದ ವಿಷಯವನ್ನು ಮಾತ್ರ ಚರ್ಚಿಸುವುದು ಒಳಿತು. ಪ್ರತಿಬಾರಿ ಪೋಷಕರ ಸಭೆಯಲ್ಲಿನ ಪೋಷಕರ ಭಾಗವಹಿಸುವಿಕೆ ಮಗುವಿನ ಶೈಕ್ಷಣಿಕತೆಯ ಬಗ್ಗೆ ಅವರು ಹೊಂದಿರುವ ಆಸಕ್ತಿಯನ್ನು ಸೂಚಿಸುತ್ತದೆ. ಮಗುವಿನ ನಡವಳಿಕೆಗಳ ಬಗ್ಗೆ ಶಿಕ್ಷಕರು ಮಾತನಾಡುವಾಗ ಜಾಗರೂಕತೆಯಿಂದ ಗಮನಿಸಿ. ಮಗುವಿನ ಓದುಹಿಬರಹಗಳ ಬಗ್ಗೆ ಸಹಕಾರ ನೀಡುವಲ್ಲಿ ಪೋಷಕರ ಸಭೆ ಮಹತ್ವದ ಪರಿಣಾಮವನ್ನು ಬೀರುವುದು ಎಂದು ಹೇಳಿದರು.ಈ ವೇಳೆ ಮುಖ್ಯ ಅತಿಥಿಗಳಾಗಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಶೀದಬಸನ್ನವರ, ಡಾ. ನರಹರಿ ದೇಶಪಾಂಡೆ, ಡಾ. ಎಂ. ಬಿ. ಕಲಶೆಟ್ಟಿ, ಎಂ. ಎಸ್. ಮುನವಳ್ಳಿ, ಶಿಕ್ಷಕರಾದ ಎನ್. ಎಸ್. ಕಾಂಬಳೆ, ಎಸ್. ಜಿ. ಸತ್ತಿಗೇರಿ, ಬಿ. ಎಂ. ಪಾಟೀಲ, ಜಿ. ಆಯ್. ಡಮ್ಮಣಗಿ, ಡಾ. ಕುಮಾರ ದಾಸರ, ಎಂ. ಎಸ್. ಗುಗ್ಗರನಟ್ಟಿ, ಎಂ. ಎನ್. ಚವಡಪ್ಪನವರ, ಎಮ್. ಎಸ್. ಜಾಳಿಹಾಳ, ಪಾಲಕ ಪ್ರತಿನಿಧಿಗಳಾದ ಮಲ್ಲಪ್ಪ ನರಗಟ್ಟಿ, ರಫೀಕ ಡಿ.ಕೆ., ಸಲೀಂಬೇಗ ಜಮಾದಾರ, ಸದಾಶಿವ ಶಟ್ಟಣಶೆಟ್ಟಿ, ರಾಜೇಶ್ವರಿ ಚವಡಪ್ಪನವರ, ದಿಲಾವರಸಾಬ ಮುಗಟಖಾನ, ಅಮೀನ ದಿಲಾವನಾಯ್ಕ, ಲಕ್ಷ್ಮೀ ಸಣ್ಣಮ್ಮನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 