ಧಾರವಾಡ 29: ವಿದ್ಯಾಥರ್ಿಗಳನ್ನು ಫೀ ಹಣ ಕೊಡದಿದ್ದರಿಂದ ಪರೀಕ್ಷೆ ಬರೆಯಲು ಅವಕಾಶ ನೀಡದಿರುವದು ಮತ್ತು ಹೊರಗೆ ನಿಲ್ಲಿಸಿದ್ದರ ಕುರಿತು ಪಾಲಕರಿಂದ ದೂರು ಬಂದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಗಜಾನನ ಮನ್ನಿಕೇರಿ ಅವರು ಇಂದು (29/11/2019), ಧಾರವಾಡದ ರಾಜೀವಗಾಂಧಿ ವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಈ ರೀತಿಯಾಗಿ ಮಕ್ಕಳನ್ನು ಹೊರಗೆ ನಿಲ್ಲಿಸುವುದು, ಫೀ ಹಣಕ್ಕಾಗಿ ಮಕ್ಕಳಿಗೆ ಒತ್ತಾಯ ಮಾಡುವುದು, ದೈಹಿಕ ಮಾನಸಿಕ ಹಿಂಸೆ ನೀಡುವುದು ಶಿಕ್ಷಣ ಹಕ್ಕಿನ ಉಲ್ಲಂಘನೆಯಾಗುತ್ತದೆ. ಇನ್ನು ಮುಂದೆ ಈ ರೀತಿಯಾಗಿ ಯಾವುದೇ ಘಟನೆಗಳು ಘಟಿಸದಂತೆ ಶಾಲಾ ಮುಖ್ಯ ಶಿಕ್ಷಕರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶೈಕ್ಷಣಿಕ ಮೇಲ್ವಿಚಾರಕರು ಈ ಬಗ್ಗೆ ಖುದ್ದಾಗಿ ನಿಗಾವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜೀವಗಾಂಧಿ ವಿದ್ಯಾಲಯದ ಪರಿಶೀಲನೆ ಸಂದರ್ಭದಲ್ಲಿ ಧಾರವಾಡ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎ.ಎ ಖಾಜಿ ಹಾಗೂ ಕೆ.ಎಫ್ ಜಾವೂರ, ಶಾಲೆಯ ಮುಖ್ಯ ಶಿಕ್ಷಕರಾದ ಯಡಾಳ ಮತ್ತು ಹಾದಿಮನಿ, ಆಡಳಿತ ಮಂಡಳಿ ಸದಸ್ಯ ಸಿ ಬಿ ಕನವಳ್ಳಿ ಹಾಜರಿದ್ದರು.