ಸರ್ಕಾರಿ ಆಸ್ಪತ್ರೆಗೆ ನೂತನ ವೈದ್ಯಾಧಿಕಾರಿಯಾಗಿ ಪರಶುರಾಮ ವಡ್ಡರ ನೇಮಕ

ಸರ್ಕಾರಿ ಆಸ್ಪತ್ರೆಗೆ ನೂತನ ವೈದ್ಯಾಧಿಕಾರಿಯಾಗಿ ಪರಶುರಾಮ ವಡ್ಡರ ನೇಮಕ Parashurama Vadd appointed as new medical officer at government hospital

 ಮುದ್ದೇಬಿಹಾಳ 13; ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತಾಲೂಕು ಆಡಳಿತ ವೈದ್ಯಾಧಿಕಾರಿಯಾಗಿ ಪರಶುರಾಮ ವಡ್ಡರ ನೂತನವಾಗಿ ನೇಮಕವಾದ ಹಿನ್ನಲೆಯಲ್ಲಿ ಸನ್ಮಾನ ಮಾಡಲಾಯಿತು.ಪಟ್ಟಣದ ಮಾಜಿ ತಾ.ಪಂ ಸದಸ್ಯ ಮಲ್ಲಿಕಾರ್ಜುನ ತಂಗಡಗಿ, ಸರಕಾರಿ ಆಸ್ಪತ್ರೆ ಸರ್ಕಾರದ ನಾಮನಿರ್ದಶನ ಎಆರ್‌ಎಸ್ ಕಮೀಟಿ ಸದಸ್ಯ ಸಿದ್ದರಾಜು ಹೊಳಿ ಹಾಗೂ ಪತ್ರಕರ್ತ ಪರಶುರಾಮ ಕೊಣ್ಣೂರ ಅವರು ವೈದ್ಯರಿಗೆ ಗೌರವದಿಂದ ಸನ್ಮಾನ ಮಾಡಿ ಗೌರವಿಸಿದರು. 

   ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ತಂಗಡಗಿ ಭಾಗದ ಜನರಿಗೆ ಆರೋಗ್ಯ ಸೇವೆ ಸಕಾಲದಲ್ಲಿ ಸಿಗಲು ವೈದ್ಯರು ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಶ್ರಮ ಶ್ಲಾಘನೀಯ. ಇದೇ ರೀತಿಯಲ್ಲಿ ನೀವು ಮುನ್ನಡೆಯಬೇಕು ಎಂದು ಹಾರೈಸಿದರು.ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ವೈದ್ಯ ಪರಶುರಾಮ ವಡ್ಡರ, ಪ್ರಾಮಾಣಿಕವಾಗಿ ಜನರ ಸೇವೆ ಮಾಡುವುದು ನನ್ನ ಆಶಯ. ಸೇವೆ ಸಲ್ಲಿಸಿದ ಕಡೆಗಳಲ್ಲಿ ರೋಗಿಗಳಿಗೆ ಕೈಲಾದಷ್ಟು ಉತ್ತಮ ಸೇವೆ ಮಾಡಿದ್ದೇನೆ. ಇಲ್ಲೂ ಉತ್ತಮ ಸೇವೆ ದೊರಕಿಸಲು ಪ್ರಯತ್ನ ಮಾಡುತ್ತೇನೆ. ಯಾವುದೇ ಸಮಸ್ಯೆಗಳಿದ್ದರೂ ರೋಗಿಗಳು ನೇರ ಸಂಪರ್ಕ ಮಾಡಬಹುದು. ತಾಲೂಕು ಆಡಳಿತ ವೈದ್ಯಾಧಿಕಾರಿ ನೇಮಕ ಮತ್ತಷ್ಟು ಕೆಲಸ ಮಾಡಬೇಕೆಂಬ ಹುಮ್ಮಸ್ಸು ತಂದಿದೆ ಎಂದರು.