ಶಿರಗುಪ್ಪಿ ಕೆಎಲ್‌ಇ ಸಂಸ್ಥೆಯ ಪಪೂ ಮಹಾವಿದ್ಯಾಲಯಕ್ಕೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

ಶಿರಗುಪ್ಪಿ ಕೆಎಲ್‌ಇ ಸಂಸ್ಥೆಯ ಪಪೂ ಮಹಾವಿದ್ಯಾಲಯಕ್ಕೆ ಸಮಗ್ರ ವೀರಾಗ್ರಣಿ ಪ್ರಶಸ್ತಿ Papu Mahavidyalaya of Shiraguppi KLE Institute receives Samagra Veeragrani Award

ಶಿರಗುಪ್ಪಿ ಕೆಎಲ್‌ಇ ಸಂಸ್ಥೆಯ ಪಪೂ ಮಹಾವಿದ್ಯಾಲಯಕ್ಕೆ ಸಮಗ್ರ ವೀರಾಗ್ರಣಿ ಪ್ರಶಸ್ತಿ 

ಮಾಂಜರಿ 10: ಸನ್ 2025-26ನೇ ಸಾಲಿನ ಕಾಗವಾಡ ತಾಲೂಕ ಮಟ್ಟದ ಕ್ರೀಡಾಕೂಟಗಳು ದಿ. 8ರಿಂದ 9ರವರೆಗೆ ಹಮ್ಮಿಕೊಂಡಿದ್ದು ಸುಮಾರು 9 ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉದ್ಘಾಟಕರಾಗಿ ಸದ್ಗುರು ಡಾ ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಅಧ್ಯಕ್ಷತೆ ಶಿವಾನಂದ ಬಿ ಪಾಟೀಲ ಕಾರ್ಯಧ್ಯಕ್ಷರು ಸ್ಥಾನಿಕ ಆಡಳಿತ ಮಂಡಳಿ ಶಿರಗುಪ್ಪಿ ಉಪಸ್ಥಿತರಿದ್ದರು.  

ಅದರಲ್ಲಿ ಕೆಎಲ್‌ಇ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಎಲ್ಲ ಕ್ರೀಡೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸುಮಾರು 290 ಅಂಕಗಳಿಂದ ಪ್ರಚಂಡ ಗೆಲವು ಸಾಧಿಸುವ ಮೂಲಕ 2025 26ನೇ ಸಾಲಿನಲ್ಲಿ ತಾಲೂಕ ಕ್ರೀಡಾಕೂಟದ ಸಮಗ್ರ ವೀರಾಗ್ರಣಿ ಪ್ರಶಸ್ತಿ ಗಳಿಸುವ ಮೂಲಕ ಸಂಸ್ಥೆಗೆ ಕಾಲೇಜಿಗೆ ಮತ್ತು ಕಾಗವಾಡ ತಾಲೂಕಿಗೆ ಕೀರ್ತಿಯನ್ನು ತಂದಿದ್ದಾರೆ.  

ಗುಂಪು ಆಟದಲ್ಲಿ ಖೋ ಖೋ ಬಾಲಕರು ಮತ್ತು ಬಾಲಕಿಯರು ಪ್ರಥಮ ಥೋಬಾಲ ಬಾಲಕಿಯರು ಪ್ರಥಮ ಬಾಲಕರು ದ್ವಿತೀಯ ಕಬ್ಬಡ್ಡಿ ಬಾಲಕರು ಪ್ರಥಮ ವಾಲಿಬಾಲ್ ಬಾಲಕಿಯರು ಪ್ರಥಮ ಬಾಲಕರು ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  

ಬಾಲಕರಲ್ಲಿ ಮಹೇಶ್ ಕಾಳೆ ಬಾಲಕಿಯರಲ್ಲಿ ರಕ್ಷಿತಾ ಚಿಂಚಲೆ ಮತ್ತು ಸೀತಾ ಕುಡುಚೆ ವೈಯಕ್ತಿಕ ಚಾಂಪಿಯನ್ ಗಿಟ್ಟಿಸಿಕೊಂಡಿರುತ್ತಾರೆ. ಅವರ ಈ ಸಾಧನೆಯನ್ನು ಮೆಚ್ಚಿ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಆಡಳಿತ ಮಂಡಳಿಯ ನಿರ್ದೇಶಕರು, ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಶಿವಾನಂದ ಬಿ ಪಾಟೀಲ ಹಾಗೂ ಸ್ಥಾನಿಕ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ತಾಲೂಕ ಕ್ರೀಡಾ ಸಂಯೋಜಕ ಎಸ್ ಎಸ್ ಸನದಿ ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್ ಬಿ ಪಾಟೀಲ ದೈಹಿಕ ನಿರ್ದೇಶಕ ಎಂ ಎಸ್ ಕೌಲಗುಡ ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿ, ಮುಂಬರುವ ಜಿಲ್ಲಾ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಉನ್ನತ ಪ್ರದರ್ಶನ ನೀಡುವ ಮೂಲಕ ಕೀರ್ತಿ ಪತಾಕೆ ಹಾರಿಸಲೆಂದು ಶುಭ ಹಾರೈಸಿದ್ದಾರೆ.