ಪಾಂಡುರಂಗ ವಿಠ್ಠಲ ರುಕ್ಮೀಣಿ ಜಾತ್ರಾ ಮೋಹತ್ಸವ
Pandurang Vithala Rukmini Jatra Festival
ತಾಂಬಾ: ಗುರುವಿನ ಗುಲಾಮನಾಗುವತನಕ ದೋರೆಯದಣ್ಣ ಮುಕುತಿ ಮನೆಯಲ್ಲಿ ಮೋದಲು ಮಾತಾ-ಪಿತೃ ಗುರು ನಂತರ ವಿದ್ಯಾಗುರು ತದನಂತರ ಅಧ್ಯಾತ್ಮೀಕ ಗುರು ಜೀವನದಲ್ಲಿ ಗುರುವಿನ ಸೇವಕನಾಗಿ ವಿದೇಕನಾಗಿ ನಡೆದುಕೊಂಡರೆ ಪಾಂಡುರಂಗ ವಿಠ್ಠಲ್ ತಮ್ಮ ಸಾಧನೆ ಯಶಸ್ವಿಯಾಗಲು ಅನುಗ್ರಹಿಸುತ್ತಾನೆ ಎಂದು ಶ್ರೀ ರಾಮರಾವ ಮಹಾರಾಜರು ಹೇಳಿದರು. ಗ್ರಾಮದ ವಿಠ್ಠಲ ಪಾಂಡುರಂಗ ರುಕ್ಮೀಣಿ ಜಾತ್ರಾ ಮೊಹತ್ಸವದ ನಿಮಿತ್ಯ ಹಮ್ಮಿಕೊಂಡ ಧರ್ಮಸಭೆಯ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು ಮನುಷ್ಯ ಬೇಕಾದಷ್ಟು ಹಣ ಆಸ್ತಿ, ಅಂತಸ್ಥು ಸಂಪತ್ತು ಗಳಿಸಬಹುದು ಆದರೆ ನೆಮ್ಮದಿಮಾತ್ರ ಸಿಗದು ಮನುಷ್ಯನಿಗೆ ಶಾಂತಿ ನೆಮ್ಮದಿ ದೋರೆಯಬೇಕಾದರೆ ಒಳ್ಳೆಯ ಸಂಸ್ಕಾರದಿಂದ ಮಾತ್ರ ಸಿಗುತ್ತದೆ. ಗುಡಿ-ಗುಂಡಾರಗಳು ಕಟ್ಟುವದು ಸುಲಭ ಆದರೆ ಅವುಗಳನ್ನು ಸ್ವಚ್ಚವಾಗಿ ಇಟ್ಟುಕೋಂಡು ಎಲ್ಲ ಭಕ್ತ ಸಮೂಹವನ್ನು ಒಂದು ಗುಡಿಸಿಕೊಂಡು ತನ್ನ ಸ್ವಂತ ಆಸ್ಥಿಯ 11ಗುಂಟೆ ಜಮೀನನ್ನು ದೇವಸ್ಥಾನಕ್ಕಾಗಿ ಕೊಟ್ಟು ಸ್ವಂತ ಗುಡಿಯನ್ನು ಕಟ್ಟಿದ ಶರಣ ಸೋಮಣ್ಣ ದೇವೂರ ಅವರ ಕಾರ್ಯ ಶ್ಲಾಘನಿಯವಾದದ್ದು ಎಂದರು.
ಮಡಿವಾಳಪ್ಪ ಬಮ್ಮನಜೋಗಿ, ಆರ್.ಎ.ಹೊರ್ತ್ತಿ ಮಾತನಾಡಿದರು, ಗ್ರಾಪಂ ಅಧ್ಯಕ್ಷ ಆಸ್ಮಾ ರಜಾಕ ಚಿಕ್ಕಗಸಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ತಾಪಂ ಸದಸ್ಯ ಪ್ರಕಾಶ ಮುಂಜಿ, ಪಿಕೆಪಿಎಸ್ ಅಧ್ಯಕ್ಷ ಲಕ್ಷ್ಮಣ ಹಿರೇಕುರಬರ, ಜೆ.ಎಸ್.ಹತ್ತಳಿ, ಅಪ್ಪಣ್ಣ ಕಲ್ಲೂರ, ಸೋಮಣ್ಣ ದೆವೂರ, ರಾಜು ಗಂಗನಳ್ಳಿ, ಶ್ರೀಧರ ಉಕ್ಕಲಿ, ಭೀಮರಾವ ಕುಲಕರ್ಣಿ, ಶಿವಾನಂದ ಲೋಣಿ, ಶಿವಾಜಿ ಕೆರೂಟಗಿ, ಶಿವಪ್ಪ ನಾಟೀಕಾರ, ಶ್ರೀಶೈಲ್ ದೋಡ್ಡಮನಿ, ಟಿ.ಎಸ್.ಗಿರಿಗೌಡರ, ಪ್ರಕಾಶ ಪಾಟೀಲ, ಎ.ಎಸ್.ಸರಸಂಬಿ, ಗುರಲಿಂಗಪ್ಪ ಗೊಡಿಹಾಳ, ಲಕ್ಷ್ಮಣ ಕನ್ನೂರ, ದಯಾನಂದ ಮೂಲಿಮನಿ, ಸೋಮರಾಯ ಮಾದರ ಸೇರಿದಂತೆ ಮತ್ತಿತರರು ಇದ್ದರು. ನಂತರ ಜಾಗರಣೆ ನಡೆಯಿತ್ತು, ಇದಕ್ಕೂಮೊದಲು ಲಕ್ಷ ತುಳಸಿ ಬಿಲ್ವಾರ್ಚನೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯ ವೈಭವದೊಂದಿಗೆ ದಿಂಡಿಯ ಭವ್ಯ ಮೇರವಣಿಗೆ ಮಾಡಲಾಯಿತ್ತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 