ಪಿ.ಮೂಕಯ್ಯಸ್ವಾಮಿ, ಹುಚ್ಚಮ್ಮ ಶರಣಪ್ಪ ಮಾಲೀಪಾಟೀಲ ಕರಿಸಿದ್ದಶ್ರೀ ಪ್ರಶಸ್ತಿ
P. Mookayaswamy, Huchamma Sharanappa Malipatil Karisiddashree Award
ಕಂಪ್ಲಿ 27 : ಬುಕ್ಕಸಾಗರ ಕರಿಸಿದ್ದೇಶ್ವರ ಮಠದಲ್ಲಿ ಶನಿವಾರ ಲಿಂ.ಕರಿಸಿದ್ದೇಶ್ವರರ 13ನೇ ಪುಣ್ಯಸ್ಮರಣೋತ್ಸವದ ನಿಮಿತ್ತ ಸಾಮೂಹಿಕ ವಿವಾಹ, ನುಡಿನಮನ, ಧರ್ಮಜಾಗೃತಿ ಸಮಾರಂಭ ನಡೆದವು. ಮುಗಳಕೋಡದ ಜಿಡಗಾ ಸುಕ್ಷೇತ್ರದ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು ದಿವ್ಯಸಾನ್ನಿಧ್ಯವಹಿಸಿ ಮಾತನಾಡಿ, ಸದ್ಭಕ್ತರು ಮತ್ತು ಕರಿಸಿದ್ಧೇಶ್ವರ ಸಂಸ್ಥಾನ ಮಠವನ್ನು ಉದ್ಧರಿಸಲು ಲಿಂ.ಕರಿಸಿದ್ದೇಶ್ವರ ಶಿವಾಚಾರ್ಯರು ಜೀವನವನ್ನೇ ಮುಡುಪಾಗಿಟ್ಟಿದ್ದಾರೆ ಎಂದು ಹೇಳಿದರು. ಎಮ್ಮಿಗನೂರಿನ ವಾಮದೇವ ಶಿವಾಚಾರ್ಯರು ಲಿಂ.ಕರಿಸಿದ್ದೇಶ್ವರರಿಗೆ ನುಡಿನಮನ ಸಲ್ಲಿಸಿ ಮಾತನಾಡಿ, ಲಿಂ.ಕರಿಸಿದ್ದೇಶ್ವರರ ತತ್ವ ಆದರ್ಶ ಗುಣಗಳು ಯುವಪೀಳಿಗೆಯ ಶಿವಾಚಾರ್ಯರಿಗೆ ಅನುಕರಣೀಯವಾಗಿವೆ ಎಂದರು. ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ಶಾಲಾ ಕಟ್ಟಡ ಸ್ಥಳದಾನಿ ಹುಚ್ಚಮ್ಮ ಬಸಪ್ಪ ಚೌದ್ರಿ, ಮಠದ ಸೇವೆಗಾಗಿ ಮರೇಗೌಡ ಮಾಲೀಪಾಟೀಲರ ಮರಣೋತ್ತರವಾಗಿ ಶರಣಪ್ಪ ಮಾಲಿಪಾಟೀಲರಿಗೆ ಕರಿಸಿದ್ದಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಮೂಹಿಕ ವಿವಾಹದಲ್ಲಿ ಎರಡು ಜೋಡಿ ಗೃಹಸ್ಥಾಶ್ರಮ ಸ್ವೀಕರಿಸಿದರು.
ವಿಶ್ವಾರಾಧ್ಯ ಶಿವಾಚಾರ್ಯರು ಅಧ್ಯಕ್ಷತೆವಹಿಸಿದ್ದರು. ಜಾನುಕೋಟಿಮಠದ ಸಿದ್ದಲಿಂಗ ಶಿವಾಚಾರ್ಯರು, ಹೂವಿನಹಡಗಲಿಯ ಹಿರಿಯ ಶಾಂತವೀರಸ್ವಾಮಿಗಳು, ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು, ಅಚಲೇರಿ ಹಿರೇಮಠದ ಸುಪ್ರೇಶ್ವರ ಶಿವಾಚಾರ್ಯರು, ಬೀಳಗಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯರು, ಶಾಸಕ ಜೆ.ಎನ್.ಗಣೇಶ್, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಐ.ಸಂಗನಬಸಪ್ಪ, ಪ್ರಮುಖರಾದ ಬಿ.ಎಲ್.ಸಂಯುಕ್ತರಾಣಿ, ಸಾಲಿ ಸಿದ್ದಯ್ಯ, ಸಾಲಿ ಬಸವರಾಜಸ್ವಾಮಿ, ಕಿಚಡಿ ಕೊಟ್ರೇಶ್, ಎಂ.ಎಸ್.ಶಶಿಧರಸ್ವಾಮಿ, ಚಂದ್ರಯ್ಯವಲ್ಲಭಾಪುರ, ವಿಶ್ವನಾಥಸ್ವಾಮಿ, ವೀರಯ್ಯಸ್ವಾಮಿ, ಎಸ್.ಡಿ.ಬಸವರಾಜ, ಗಂಗಾಧರಸ್ವಾಮಿ, ರುದ್ರಯ್ಯ, ಗುರುಶಾಂತ ಸೇರಿ ಸದ್ಭಕ್ತರಿದ್ದರು. ಸಂಜೆ ಕರಿಸಿದ್ದೇಶ್ವರ ಶಿವಯೋಗಿಗಳ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು. ಕಳೆದ ಶುಕ್ರವಾರ ಸಂಜೆ ಪಲ್ಲಕ್ಕಿ ಉತ್ಸವ ನಡೆಯಿತು. ಶನಿವಾರ ರಾತ್ರಿ ಚಿದಾನಂದ ಗವಾಯಿಗಳ ಸಂಗೀತ ಶಿಕ್ಷಕರ ನಿರ್ದೇಶನದಲ್ಲಿ ಶ್ರೀ ಕರಿಸಿದ್ದೇಶ್ವರ ಸಂಸ್ಕೃತ, ವೇದ, ಜ್ಯೋತಿಷ್ಯ, ಗುರುಕುಲ, ಪಾಠಶಾಲೆ, ಬುಕ್ಕಸಾಗರ ವಿದ್ಯಾರ್ಥಿಗಳಿಂದ ನಾರದ ವಿನೋದ ಹಾಗೂ ಮುದುಕನ ಮದುವೆ ನಾಟಕ ಪ್ರದರ್ಶನಗೊಂಡಿತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 