ಸಂಗೀತ ಸಂಚಾರ ಕಾರ್ಯಕ್ರಮ ಆಯೋಜನೆ

ಸಂಗೀತ ಸಂಚಾರ ಕಾರ್ಯಕ್ರಮ ಆಯೋಜನೆ Organizing a music tour program

ಕೊಪ್ಪಳ 10: ಶ್ರೀ ಗುರು ಪಂಚಾಕ್ಷರಿ ಸಂಗೀತ ಸೇವಾ ಸಂಸ್ಥೆ ಭಾಗ್ಯನಗರ ಸಂಗೀತ ಸಂಚಾರ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹನುಮನಹಳ್ಳಿ ಕೊಪ್ಪಳ ಜಿಲ್ಲೆಯಲ್ಲಿ ಕೊಪ್ಪಳ ತಾಲ್ಲೂಕು ಸಂಸ್ಥೆಯ ವತಿಯಿಂದ ಸಂಗೀತ ಸಂಚಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಗವಿಸಿದ್ದಪ್ಪ ತಳವಾರ ಮುಖ್ಯೊಪಾಧ್ಯಯರು ಅಧ್ಯಕ್ಷತೆಯನ್ನು  ವಹಿಸಿಕೊಂಡು ಮಾತನಾಡಿದರು, ನಾಗಪ್ಪ ಹೊಸಳ್ಳಿ ಎಸ್‌.ಡಿ ಎಂ.ಸಿ ಅಧ್ಯಕ್ಷರು, ಯಡಿಯಪ್ಪ ಭೋವಿ ಎಸ್‌.ಡಿ.ಎಂ.ಸಿ ಉಪಾಧ್ಯಕ್ಷರು, ಮುಖ್ಯ ಅತಿಥಿಗಳಾಗಿ ಯಮನೂರ​‍್ಪ ಕುಟಗನಹಳ್ಳಿ, ವೀರಣ್ಣ, ಸುಧಾಕರ ಬಗನಾಳ ಉಪಸ್ಥಿತರಿದ್ದರು.  

ಈ ಕಾರ್ಯಕ್ರದ ಪ್ರಾಸ್ಥಾವಿಕ ನುಡಿಯ ಮುಖಾಂತರ ಇಂದಿನ ದಿನಮಾನದಲ್ಲಿ ಸಂಗೀತ ಎಂಬುವುದು ಎಷ್ಟು ಮಹತ್ವವಾಗಿದೆ ಎಂಬುವುದನ್ನು ಸಂಗೀತ ಶಿಕ್ಷಕರಾದ ಮಾರುತಿ ಬಿನ್ನಾಳ ರವರು ಅಚ್ಚುಕಟ್ಟಾಗಿ ತಿಳಿಸಿದರು ಹಾಗೆಯೇ ರಾಗಗಳು ಹೇಗೆ ತಮ್ಮದೇ ಆದ ವೈಶಿಷ್ಟತೆ ಹೊಂದಿದ್ದಾವೇ ಎಂಬುವುದನ್ನು ತಿಳಿದರು ಸಂಗೀತ ಕೇವಲ ಒಂದು ಕಲೆ ಅಷ್ಟೇ ಅಲ್ಲದೇ ಜೀವನವನ್ನು ಕಟ್ಟಿಕೊಳ್ಳುವ ಸಾಧನವಾಗಿದ್ದು ಸಂಗೀತ ಕಲೆಗೆ ಪ್ರೋತ್ಸಾಹವನ್ನು ನೀಡಬೇಕೆಂದು ತಿಳಿಸಿದರು.  

ಕಲಾ ವೃಂದ : ವಿಜಯಲಕ್ಷ್ಮೀ ಮ್ಯಾಗಡೆ ಭಾಗ್ಯನಗರ ರವರಿಂದ ವಚನ ಮತ್ತು ಮೀರಾಬಜೆನ್ ಗಾಯನ, ಕು. ವೈದೇಹಿ ವ್ಯಾಸಮುದ್ರಿ ಕೊಪ್ಪಳ ರವರಿಂದ ಭಾವಗೀತೆ, ಶ್ರೀ ಪರಶುರಾಮ ದಲಬಂಜನ ಭಾಗ್ಯನಗರ ರವರಿಂದ ಜಾನಪದಗೀತೆ,  ಕು. ಬಾಲಾಜಿ ರವರಿಂದ ಸುಗಮ ಸಂಗೀತ ಕಾರ್ಯಕ್ರಮಗಳು ನೆರವೇರಿಸಲಾಯಿತು. ವಾದ್ಯ ಸಹಕಾರ : ಕೀಬೋರ್ಡ್‌ - ಶ್ರೀರಾಮಚಂದ್ರ​‍್ಪ ಉಪ್ಪಾರ ಹಿರಿಯ ಕಲಾವಿದರು , ತಬಲಾ : ಮಾರುತಿ ಬಿನ್ನಾಳ ಸಂಗೀತ ಶಿಕ್ಷಕರು ಗದಗ, ರಿದಂಪ್ಯಾಡ : ಸಂಜನ ಬೆಲ್ಲದ ಕೊಪ್ಪಳ ಪ್ರಾಣೇಶ್ ಪೂಜಾರ್ ಶಿಕ್ಷಕರು ಹನುಮನಹಳ್ಳಿ ರವರಿಂದ ವಂದನಾರೆ​‍್ಣ ಕಾರ್ಯಕ್ರಮವನ್ನು ನಡೆಸಿದರು.