ಕೇಂದ್ರ ಕಾರಾಗೃಹದಲ್ಲಿ “100 ದಿನಗಳ ಕ್ಷಯರೋಗ ಮತ್ತು ಮುಕ್ತ ಭಾರತ ಅಭಿಯಾನ” ಕಾರ್ಯಕ್ರಮ ಆಯೋಜನೆ
ಬೆಳಗಾವಿ 28: ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ಅಧೀಕ್ಷಕರಾದ ವಿ. ಕೃಷ್ಣಮೂರ್ತಿ ಇವರ ಮಾರ್ಗದರ್ಶನದಲ್ಲಿ “100 ದಿನಗಳ ಕ್ಷಯರೋಗ ಮತ್ತು ಮುಕ್ತ ಭಾರತ ಅಭಿಯಾನ” ಕಾರ್ಯಕ್ರಮ ಆಯೋಜಿಸಲಾಗಿತ್ತು. ಸದರಿ ಕಾರ್ಯಕ್ರಮವು ರಾಷ್ಟ್ರೀಯ ಕ್ಷಯರೋಗ ನಿಮೂರ್ಲನಾ ಕಾರ್ಯಕ್ರಮ ಹಾಗೂ ಕೇಂದ್ರ ಕಾರಾಗೃಹ ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ಏರಿ್ಡಸಲಾಗಿತ್ತು. ಉದ್ಘಾಟಕರಾಗಿ ಅಭಿಯಾನದ ಕೇಂದ್ರೀಯ ನೀರೀಕ್ಷಕರು ರಾಜ್ಯ ಕ್ಷಯರೋಗ ಸಂಶೋದನಾ ಕೇಂದ್ರದ ಡಾಽಽ ಉಮಾಶಂಕರ ಆಗಮಿಸಿದ್ದರು. ಮುಖ್ಯ ಅಥಿತಿಗಳಾಗಿ ಜಿಲ್ಲಾ ಕ್ಷಯರೋಗ ನಿಮೂರ್ಲನಾ ಅಧಿಕಾರಿಗಳಾದ ಡಾಽಽ ಚಾಂದನಿ ದೇವಡಿ ಹಾಗೂ ವೈದ್ಯಾಧಿಕಾರಿಗಳಾದ ಡಾಽಽ ಬಿ.ಎನ್. ತುಕ್ಕಾರ ಆಗಮಿಸಿದ್ದರು. ಜೈಲರ್ ರಾಜೇಶ ಧರ್ಮಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಡಾಽಽ ಉಮಾಶಂಕರ ಮಾತನಾಡಿ ಕ್ಷಯರೋಗವು ಒಂದು ಸಾಂಕ್ರಾಮಿಕ ರೋಗವಾಗಿದ್ದು ಈ ರೋಗದ ಬಗ್ಗೆ ಅರಿವು ಬಹಳ ಮುಖ್ಯವಾದದ್ದು. ಭಾರತದ ಮಾನ್ಯ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀ 2025ರ ವೇಳೆಗೆ ದೇಶವನ್ನು ಕ್ಷಯರೋಗ ಮುಕ್ತ ದೇಶವನ್ನಾಗಿಸುವ ಗುರಿಯನ್ನು ಹೊಂದಿದ್ದು, ಈ ಗುರಿ ಸಾಧನೆಗೆ ಆರೋಗ್ಯ ಇಲಾಖೆಯು ಇತರ ಇಲಾಖೆಯ ಸಹಕಾರಗಳೊಂದಿಗೆ ದೇಶದ ಎಲ್ಲರಿಗೂ ಕ್ಷಯರೋಗದ ಬಗ್ಗೆ ಅರಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕಾರಣ ತಾವು ಈ ಕಾರ್ಯಕ್ರಮದ ಸದುಪಯೋಗ ಪಡೆದು ಬಿಡುಗಡೆ ನಂತರ ಸಮಾಜದಲ್ಲಿ ಇತರರಿಗೆ ಹಾಗೂ ತಮ್ಮ ಕುಟುಂಬದ ಸದಸ್ಯರಿಗೆ ಕ್ಷಯ ರೋಗದ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.
ಡಾಽಽ ಚಾಂದನಿ ದೇವಡಿ ಮಾತನಾಡಿ, ಕ್ಷಯ ಮುಕ್ತ ಅಭಿಯಾನದ ಅಡಿಯಲ್ಲಿ ಕಾರಾಗೃಹದ ಎಲ್ಲ ನಿವಾಸಿಗಳಿಗೆ ಕ್ಷಯರೋಗದ ಕುರಿತು ಅರಿವು ಮೂಡಿಸುವ ಹಾಗೂ ತಪಾಸಣೆ ಮತ್ತು ಕಫ ಪರೀಕ್ಷೆ ನಡೆಸಲಾಗುತ್ತಿದ್ದು, ರೋಗದ ಲಕ್ಷಣಗಳು ಕಂಡುಬಂದರೆ ಅಂತಹ ನಿವಾಸಿಗಳಿಗೆ ಉಚಿತವಾಗಿ ಮಾತ್ರೆಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಜೈಲರ್ ಎಫ್.ಟಿ. ದಂಡಯನವರ ಮಾತನಾಡಿ ಕಾರಾಗೃಹದಲ್ಲಿರುವ ಬಂಧಿಗಳ ಆರೋಗ್ಯದ ದೃಷ್ಟಿಯಿಂದ ವಿವಿಧ ಆರೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಅವುಗಳಲ್ಲಿ ಕ್ಷಯರೋಗ ಒಂದು. ಆರೋಗ್ಯ ಇಲಾಖೆಯಿಂದ ಆಯೋಜಿಸಲಾಗುವ ಕ್ಷಯರೋಗ ಪತ್ತೆಗೆ ಪ್ರತಿಯೋಬ್ಬರು ಕಡ್ಡಾಯವಾಗಿ ಕಫ ಪರೀಕ್ಷೆ ಮಾಡಿಕೊಳ್ಳಬೇಕು. ಆರೋಗ್ಯವೇಭಾಗ್ಯ ಎಂಬ ನಾಣ್ಣೂಡಿಯಂತೆ ಎಲ್ಲ ನಿವಾಸಿಗಳು ಉತ್ತಮ ಆರೋಗ್ಯವಂತರಾಗಬೇಕು ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾರಾಗೃಹ ವೈದ್ಯಾಧಿಕಾರಿ ಡಾಽಽ ಎಮ್.ಎಸ್. ಶಾಲದಾರ, ಆರೋಗ್ಯ ಇಲಾಖೆಯ ಸಿಬ್ಬಂದಿಯವರಾದ ಪಿ.ಆರ್. ಪಾಟೀಲ, ಎಸ್.ಎಸ್ ಹಂಪಣ್ಣವರ, ಸ್ಮೀತಾ ಎಮ್.ಎಮ್., ಸಂಜನಾ ಹೇರೆಕರ ಉಪಸ್ಥಿತರಿದ್ದರು. ಕಾರಾಗೃಹದ ಉಪಾಧ್ಯಾಯರಾದ ಶಶಿಕಾಂತ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಮಾರುತಿ ಕಾಮಕರ ಪ್ರತಿಜ್ಞಾ ವಿಧಿ ಬೋಧಿಸಿದರು.