ಸಾಂಸ್ಕೃತಿಕ ಸಾಮಾಜಿಕ ಮತ್ತು ಕ್ರೀಡೆಗಳ ಆಯೋಜನೆ: ಕುಸ್ತಿ ಪಂದ್ಯಾವಳಿ
ಕೊಪ್ಪಳ 16: ಶ್ರೀ ಗವಿಸಿದ್ದೇಶ್ವರ ಜಾತ್ರೆ ಕೇವಲ ಧಾರ್ಮಿಕ ಜಾತ್ರೆಯಾಗಿರದೇ ಹಲವು ಸಾಂಸ್ಕೃತಿಕ ಸಾಮಾಜಿಕ ಮತ್ತು ಕ್ರೀಡೆಗಳನ್ನು ಆಯೋಜನೆ ಮಾಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ, ಕ್ರೀಡಾಸಕ್ತರಲ್ಲಿ, ಜಾತ್ರೆಗೆ ಬಂದ ಭಕ್ತಾಧಿಗಳಲ್ಲಿ ಮನರಂಜನೆ ಒದಗಿಸುವ ಸೇವಾ ಕಾರ್ಯವನ್ನು ಮಾಡುತ್ತಿದೆ. ಕೊಪ್ಪಳ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಹಾಗೂ ವಾಣಿಜ್ಯೋದ್ಯಮಿಗಳ ಸಹಕಾರದಿಂದ ಹಮ್ಮಿಕೊಂಡಿರುವ ಗವಿಶ್ರೀ ಕ್ರೀಡಾಕೂಟದಲ್ಲಿ ಇಂದು ಗವಿಮಠದ ಆವರಣದಲ್ಲಿ ಪುರುಷ ಹಾಗೂ ಮಹಿಳಾ ಕುಸ್ತಿ ಕಂದಾವಳಿಗಳನ್ನು ಏರಿ್ಡಸಲಾಗಿತ್ತು ಕುಸ್ತಿ ಪಂದ್ಯಾವಳಿಗಳನ್ನು ಉದ್ಘಾಟಿಸಿ ಹಾಗೂ ಸಾನಿಧ್ಯ ವಹಿಸಿ ಮಾತನಾಡಿದಇಟಗಿಯ ಭೂ ಕೈಲಾಸ ಮೇಲುಗದ್ದಿಗೆ ಹಿರೇಮಠ ಸಂಸ್ಥಾನದ ಚಿಕ್ಕಮಾಗೇರಿ ಇಟ್ಟಿಗೆಯ ಷ.ಬ್ರ. ಡಾ. ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಕುಸ್ತಿ ಕ್ರೀಡೆಯು ಪುರಾತನ ಕ್ರೀಡೆಯಾಗಿದ್ದು ಇದು ಒಂದು ದೇಹದಾರ್ಡ್ಯ ಚಟುವಟಿಕೆಯಾಗಿದೆ ಈ ಕ್ರೀಡೆಯು ಪ್ರತಿಯೊಬ್ಬ ವ್ಯಕ್ತಿಯಲ್ಲಿದೈಹಿಕಹಾಗೂ ಮಾನಸಿಕ ಸಮತೋಲನ ಬೆಳವಣಿಗೆಗೆ ಸಹಕಾರಿಯಾಗುವುದರ ಮೂಲಕ ಸದೃಢ ವ್ಯಕ್ತಿಯನ್ನಾಗಿ ನಿರ್ಮಾಣ ಮಾಡುವುದರಲ್ಲಿ ಈ ಕುಸ್ತಿಗಳು ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆಎಂದು ಹೇಳಿದರು.