1200 ಚದರ ಅಡಿ ನಿವೇಶಗಳಿಗೆ ವಿದ್ಯುತ್ ಸಂಪರ್ಕಕ್ಕೆ ಆದೇಶ ರೈತ ಭಾರತ ಪಕ್ಷದ ಹೋರಾಟಕ್ಕೆ ಸಂದ ಗೆಲವು: ಆರ್‌ಬಿಪಿ ಕೆಂಗನಾಳ

1200 ಚದರ ಅಡಿ ನಿವೇಶಗಳಿಗೆ ವಿದ್ಯುತ್ ಸಂಪರ್ಕಕ್ಕೆ ಆದೇಶ ರೈತ ಭಾರತ ಪಕ್ಷದ ಹೋರಾಟಕ್ಕೆ ಸಂದ ಗೆಲವು: ಆರ್‌ಬಿಪಿ ಕೆಂಗನಾಳ Order for electricity connection to 1200 square feet plots is a victory for the struggle of the Rai

ವಿಜಯಪುರ 19: ಸಾರ್ವಜನಿಕರ 1200 ಚದರ ಅಡಿ ನಿವೇಶಗಳಿಗೆ ವಿದ್ಯುತ್ ನೀಡದ ಹೆಸ್ಕಾಂ ನಡೆಯನ್ನು ಖಂಡಿಸಿ ನಗರದ ಕೆಇಬಿ ಆವರಣದಲ್ಲಿ ಒಂದು ವಾರ ಕಾಲ ರೈತ ಭಾರತ ಪಕ್ಷದಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ನಡೆಸಲಾಗಿತ್ತು. ನಮ್ಮ ಧರಣಿ ಸತ್ಯಾಗ್ರಹಕ್ಕೆ ಸ್ಪಂದಿಸಿ ಅಧಿಕಾರಿಗಳು ವಿದ್ಯುತ ಸಂಪರ್ಕ ನೀಡಲು ಆದೇಶ ಹೊರಡಿಸಿದ್ದು ಇದು ನಮ್ಮ ಪಕ್ಷದ ಹೋರಾಟಕ್ಕೆ ಸಂದ ಗೆಲುವಾಗಿದೆ ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಕಾರ್ಜುನ ಕೆಂಗನಾಳ ಅವರು ಹೇಳಿದರು. ಅವರು ನಗರದ ಸಿದ್ಧೇಶ್ವರ ದೇವಸ್ಥಾನದ ಮುಂದೆ ಹಮ್ಮಿಕೊಂಡ ವಿಜಯೋತ್ಸವ ಕಾರ್ಯಕ್ರಮದಲ್ಲಿ ಗ್ರಾಹಕರು ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಿಸಿ ಮಾತನಾಡಿದರು. 

ಆಡಳಿತಾರೂಢ ಕಾಂಗ್ರೆಸ್ ಪಕ್ಷ ಪಂಚ ಗ್ಯಾರಂಟಿಗಳ ಹೆಸರಿನಲ್ಲಿ ಸಾರ್ವಜನಿಕರಿಗೆ ನಿರಂತರ ಮೋಸ ಮಾಡುತ್ತಿದ್ದು ವಿದ್ಯುತ್ ಸಂಪರ್ಕ ನೀಡದೆ ಗೃಹ ಜ್ಯೋತಿ ಯೋಜನೆಯಿಂದ ಸಾರ್ವಜನಿಕರನ್ನು ವಂಚಿಸುವ ಹುನ್ನಾರವನ್ನು ಅಧಿಕಾರಿಗಳ ಮೂಲಕ ರಾಜಕಾರಣಿಗಳು ಮಾಡುತ್ತಿರುವುದು ನಾಚಿಗೇಡಿನ ಸಂಗತಿ. ಆಡಳಿತ ಪಕ್ಷ ಸಾರ್ವಜನಿಕರಿಗೆ ನಿರಂತರ ತೊಂದರೆ ಕೊಡುತ್ತಿದ್ದರೂ ಕೂಡ ವಿರೋಧ ಪಕ್ಷವಾದ ಬಿಜೆಪಿ ಕಣ್ಣು ಮುಚ್ಚಿ ಕುಳಿತಿರುವುದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಹೊಂದಾಣಿಕೆ ರಾಜಕಾರಣವನ್ನು ಎತ್ತಿ ತೋರಿಸುತ್ತದೆ. ಕಾಂಗ್ರೆಸ್ ಸರ್ಕಾರ ಬಡ ದೀನ ದುರ್ಬರ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡದೇ ಕತ್ತಲೆ ಭಾಗ್ಯ ಕರುಣಿಸಿತ್ತು. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯ ನಿವಾರಣೆಗಾಗಿ ನಮ್ಮ ರೈತ ಭಾರತ ಪಕ್ಷದಿಂದ ಹೋರಾಟ ಮಾಡಿದ್ದರಿಂದ ಅಧಿಕಾರಿಗಳು ಇದೀಗ ವಿದ್ಯುತ್ ಸಂಪರ್ಕ ನೀಡಲು ಆದೇಶ ಹೊರಡಿಸಿದ್ದು ಸಂತಸದ ವಿಷಯ. ಸಾರ್ವಜನಿಕರು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಕುತಂತ್ರವನ್ನು ಮನಗಂಡಿದ್ದು ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸಿ ರೈತ ಭಾರತ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಜಿಲ್ಲಾಧ್ಯಕ್ಷ ವಿನೋದ ಎಂ. ಖೇಡ ಮಾತನಾಡಿ, ವಿಜಯಪುರ ಜಲ್ಲೆಯಲ್ಲಿ ನಿರಂತರವಾಗಿ ಒಂದಿಲ್ಲ ಒಂದು ಸಮಸ್ಯೆಗಳು ಸಾರ್ವಜನಿಕರನ್ನು ಕಾಡುತ್ತಿವೆ. ಸಾರ್ವಜನಿಕರ ಮತ ಪಡೆದು ಅಧಿಕಾರ ಹಿಡಿದವರು ತಮಗೆ ಏನೂ ಸಂಬಂಧವಿಲ್ಲದಂತೆ  ವರ್ತಿಸಿ ಜನವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಇವರ ಜನ ವಿರೋಧಿ ನೀತಿಯ ವಿರುದ್ಧ ನಮ್ಮ ರೈತ ಭಾರತ ಪಕ್ಷವು ಜನಪರವಾಗಿ ನಿಲ್ಲಲಿದೆ ಎಂದು ಹೇಳಿದರು. 

ಮುಖಂಡರಾದ ಅನೀಲ ಇಕ್ಕಡೆ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರವರು ಜಿಲ್ಲೆಯ ಹೊರಗಿನ ಘಟನೆಗಳ ಬಗ್ಗೆ ಪುಂಕಾನು ಪುಂಕವಾಗಿ ಮಾತನಾಡುತ್ತಾರೆ. ಜಿಲ್ಲೆಯ ಜನರ ಸಮಸ್ಯೆಗೆ ಸ್ಪಂದಿಸದೆ ಕಾಲ ಹರಣಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಜನರ ನೀಡಿದ ಅಧಿಕಾರ ಋಣ ತೀರಿಸಲು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮುಖಂಡರಾದ ಅಶೋಕ ವಾಲೀಕಾರ, ನೀಲಾಂಬಿಕಾ ಬಿರಾದಾರ, ಸಿದ್ಧರಾಮ ಹಳ್ಳೂರ, ಪರಶುರಾಮ ಗಾಯಕವಾಡ ಮಾತನಾಡಿದರು. ಚಾಂದಸಾಬ ಗೊಳಸಂಗಿ, ಲಾಯಪ್ಪ ಇಂಗಳೆ, ಸುಂದರ ಚವ್ಹಾಣ, ಇಸ್ಮಾಯಿಲ್ ಸುತಾರ, ರಾಜು ಕುಮಟಗಿ, ಸೋಮಶೇಖರ ಮೆಂಡೇಗಾರ, ಮಲ್ಲಿಕಾರ್ಜುನ ಲಂಗೋಟಿ, ಪ್ರಕಾಶ ಸಬರದ, ಅನೀಲ ಪವಾರ, ಸಂತೋಷ ಕಲಗುಡಿ, ಅಂಬಣ್ಣ ಗುನ್ನಾಪುರ, ರಾಜು ತಡಲಗಿ, ಅಶೋಕ ಚೋಳಕೆ, ಸಲಾವುದ್ದೀನ ಮಣಿಯಾರ, ಬಿ.ಬಿ.ಬಗಲಿ, ಆನಂದಕುಮಾರ ಜಂಬಗಿ, ವ್ಹಿ.ಎ.ಮಾನೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.