ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ
ಗದಗ 20: ದಿ. 20ರಂದು ಗದಗ ನಗರದ ಹಳೇ ಡಿ.ಸಿ ಆಫೀಸ್ ವೃತ್ತದ ಸುತ್ತ ಮುತ್ತ ಕೋಟ್ಪಾ 2003 ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆ ವಿರುದ್ಧ ದಿಢೀರ್ ಕಾಯರ್ಾಚರಣೆ ಹಮ್ಮಿಕೊಂಡು ಸೆಕ್ಷನ್ 4ಉಲ್ಲಂಘನೆ ವಿರುದ್ಧ ಕ್ರಮಕೈಗೊಳ್ಳಲಾಯಿತು. ಸೆಕ್ಷನ್ 4 ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧವೆಂದು ಕಾಯ್ದೆ ಇದ್ದರು ಸಹ ಕೆಲವು ಪಾನ್ ಶಾಪ್ಗಳಲ್ಲಿ ಧೂಮಪಾನಕ್ಕಾಗಿಯೇ ಪ್ರತ್ಯಕ ಸ್ಥಳ ಮಾಡಿ ಧೂಮಪಾನ ಮಾಡಲು ಅನುವು ಮಾಡಿಕೊಟ್ಟು ಸಾರ್ವಜನಿಕ ಆರೋಗ್ಯದ ಜೋತೆ ಚಲ್ಲಾಟವಾಡುತ್ತಿದ್ದಾರೆ.ಇಂತವರ ವಿರುದ್ಧ ಕಾನೂನು ರೀತಿ ಕ್ರಮಕೈಗೊಂಡು 9 ಪ್ರಕರಣ ಹಾಗೂ ರೂ.1500 ದಂಡವಿಧಿಸಲಾಯಿತು, ಮುಂದಿನದಿನಗಳಲ್ಲಿ ಪುನರಾವರ್ತನೆಯಾದಲ್ಲಿ ಕಠಿಣ ಕ್ರಮಕೈಗೊಳ್ಳುವದಾಗಿ ಎಚ್ಚರಿಕೆ ನೀಡಲಾಯಿತು, ಜೊತೆಗೆ ಅಂಗಡಿ ಮುಗ್ಗಟ್ಟುಗಳ ಹಾಗೂ ಸಾರ್ವಜನಿಕ ಪತ್ರದೇಶಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ ಹಾಗೂ 18 ವರ್ಷದೊಳಗಿನ ಮಕ್ಕಳಿಗೆ ತಬಾಕು ಮಾರಾಟ ನಿಷೇಧ ಎಂಬ ಅಧಿಕೃತ ನಾಮಫಲಕಗಳನ್ನು ಕಡ್ಡಾಯವಾಗಿ ಬಿತ್ತರಿಸುವದು ಸ್ಥಳದ ಮಾಲೀಕರ ಜಾವಾಬ್ದಾರಿಯಾಗಿರುತ್ತದೆ. ತಂಬಾಕು ಉತ್ಪನ್ನಗಳನ್ನು ಅಂಗಡಿಗಳಲ್ಲಿ ಪ್ರದಶರ್ಿಸಬಾರದು, ಶಾಲಾ ಕಾಲೇಜು ಆವರಣದದಿಂದ 100 ಗಜದ ಒಳಗಡೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು, ಹಾಗೂ ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ 85%ರಷ್ಟು ಆರೋಗ್ಯ ಎಚ್ಚರಿಕೆ ಚಿತ್ರ ಮುದ್ರಿಸಿದಲ್ಲಿ ಮಾತ್ರ ಮಾರಾಟಕ್ಕೆ ಅವಕಾಶವಿದೆ. ತಂಡದಲ್ಲಿ ಗೋಪಾಲ ಸುರಪುರ ಜಿಲ್ಲಾ ಸಲಹೆಗಾರರು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಗದಗ ಆರೋಗ್ಯ ಇಲಾಖೆಯಿಂದ ಶಿವಕುಮಾರ ಬಗಾಡೆ, ಪೊಲೀಸ್ ಇಲಾಖೆಯಿಂದ ವಿರೇಶ ಮಣ್ಣೂರು ಉಪಸ್ಥಿತಿಯಲ್ಲಿ ಕಾಯರ್ಾಚರಣೆ ಮಾಡಲಾಯಿತು.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 