ಸೌರ್ಹದತೆ ಮನೋಭಾವನೆ ಅಳವಡಿಸಿ ಕೊಂಡಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನ ನಿವೃತ್ತ ಶಿಕ್ಷಕ ಕಂದಗಲ್ ಲಾಲ್‌ಹುಸೇನ್

ಸೌರ್ಹದತೆ ಮನೋಭಾವನೆ ಅಳವಡಿಸಿ ಕೊಂಡಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನ ನಿವೃತ್ತ ಶಿಕ್ಷಕ ಕಂದಗಲ್ ಲಾಲ್‌ಹುಸೇನ್  Only when one adopts the spirit of bravery can one attain a high position in society, says retired

ಕಂಪ್ಲಿ 03 : ಸಮಾಜದಲ್ಲಿ ಸೌರ್ಹದತೆ ಜೊತೆಗೆ ಮನೋಭಾವನೆ ಜೀವನದಲ್ಲಿ ಆಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಇಲಕಲ್‌ನ ನಿವೃತ್ತ ಶಿಕ್ಷಕ ಕಂದಗಲ್ ಲಾಲ್‌ಹುಸೇನ್ ಸಾಬ್ ಹೇಳಿದರು ಪಟ್ಟಣದ ಸಣಾಪುರ ರಸ್ತೆಯಲ್ಲಿರುವ ಭಾನುವಾರ ಬಿಎಸ್‌ವೈ ಗಾರ್ಡನ್‌ನಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ಸಂಘದಿಂದ ಏರ​‍್ಾಡಿಸಿದ ಸರ್ವಧರ್ಮಿಯ ಇಫ್ತಾರ್ ಕೂಟದ ಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಇಫ್ತಾರ್ ಕೂಟದಿಂದ ಸರ್ವಧರ್ಮಿಯರು ಭಾಗವಹಿಸಿ ಸ್ನೇಹ ಸಮೀಲನ ಜೊತೆಗೆ ಹಿರಿಯರ ಮಾರ್ಗದರ್ಶನ ಅನುಸರಿಸಿದರೇ ಜೀವನದಲ್ಲಿ ಸಾಧನೆ ಮಾಡಬಹುದು ಮಕ್ಕಳಿಗೆ ಸಂಸ್ಕಾರ ಸಂಸ್ಕತಿ ಶಿಕ್ಷಣ ನೀಡಿದರೆ ಸಮಾಜದಲ್ಲಿ ಉನ್ನತ ಸ್ಥಾನ ಬೆಳೆಯಲು ಸಾಧ್ಯ ಇಸ್ಲಾಮ್ ಅನುಯಾಯಿಗಳಿಗೆ ರಂಜಾನ್ ಕಡ್ಡಾಯಗೊಳಿಸಿದೆ. ರಂಜಾನ್ ಹಬ್ಬ ಪುಣ್ಯದಿನಗಳಾಗಿದ್ದು ಆಹಾರ ಸ್ವೀಕರಿಸಿದಲ್ಲಿ ಉಪವಾಸ ಆಚರಿಸದವನಿಗೂ ಉಪವಾಸ ಆಚರಿಸಿದ ಪುಣ್ಯಪ್ರಾಪ್ತಿಯಾಗುತ್ತದೆ

ರಂಜಾನ್ ಮುಖ್ಯ ಉದ್ದೇಶವಾಗಿದೆ. ಕುರಾನ್ ಕೇವಲ ಮುಸ್ಲಿಮರ ಧರ್ಮಗ್ರಂಥ ಆಗಿರದೆ ಸಮಸ್ತ ಮನುಕುಲದ ಉದ್ಧಾರದ ಗ್ರಂಥವಾಗಿದೆ. ಜೀವನದಲ್ಲಿ ಮಾನವೀಯ ಮೌಲ್ಯಗಳು ಅವಶ್ಯಕ ಎಂದರು ಸೈಯ್ಯದ್ ಷಾಹ್ ಅಬ್ದುಲ್ ವಾಹೀದ್ ಖಾದ್ರಿ ಸಾಹೇಬ್,  ಸೈಯ್ಯದ್ ಷಾಹ್ ಕರಿಮುಲ್ಲಾಖಾದ್ರಿ, ಎಚ್‌.ವೀರಾಪುರದ ಜ್ಞಾನಜ್ಯೋತಿ ಶಿವಮಂದಿರದ ಜಡೇಶತಾತ ಸಾನ್ನಿಧ್ಯವಹಿಸಿದ್ದರು. ಜಮಾಅತೆ ಇಸ್ಲಾಮೀ ಹಿಂದ್ ಸಂಚಾಲಕ ವಾಸೀಮ್ ಫಯಾಜ್ ಅಧ್ಯಕ್ಷತೆವಹಿಸಿದ್ದರು. ಜಮಾಅತೆಯ ಜಿಲ್ಲಾ ಸಂಚಾಲಕ ಡಾ.ಸೈಯ್ಯದ್ ಜೈನುಲ್ಲಾ ಅಬುದಿನ್‌ಖಾದ್ರಿ, ಜಿಲ್ಲಾ ಉಪಾಧ್ಯಕ್ಷೆ ನೂರ್‌ಜಹಾಸಾಹೀಬಾ, ವಲಯ ಅಧ್ಯಕ್ಷ ಅನ್ವರ್‌ಬಾಷ ಉಮ್ರಿ, ಮುಖಂಡರಾದ ಎನ್‌.ಹಬೀಬ್ ರೆಹಮಾನ್, ಕೆ.ಎಸ್‌.ಚಾಂದ್‌ಭಾಷ, ನೌಷಾದ್‌ಅಹ್ಮದ್ ಹಾಫೀಜ್, ಅತಾವುಲ್ಲಾ ರೆಹಮಾನ್, ಕೆ.ಮಸ್ತಾನ್, ಎಸ್‌.ಕೆ.ಇಂತಿಯಾಜ್, ಅಹ್ಮದ್, ಖಲಂದರ್, ಸಾಧಿಕ್,  ಪಾಸ್ಟರ್ ಪಾಲ್‌ಪಂಪಾಪತಿ, ಶಾಂತಿಲಾಲ್ ಸಿಂಘ್ವಿ, ಶಾಂತಿಲಾಲ್ ಬಾಲಾರ್, ಪಿ.ನಾಗೇಶ್ವರರಾವ್, ಷಣ್ಮುಖಪ್ಪ ಚಿತ್ರಗಾರ, ಕೆ.ಎಂ.ಹೇಮಯ್ಯಸ್ವಾಮಿ, ನೀರಗಂಟಿ ವೀರೇಶ್, ಎಲ್‌.ರಾಘವೇಂದ್ರ ಇತರರಿದ್ದರು.