ಜಗತ್ತನ್ನು ಸೆರೆ ಹಿಡಿಯುವ ಶಕ್ತಿ ಛಾಯಾಗ್ರಾಹಕ ಮತ್ತು ಫೋಟೋಗ್ರಾಫರ್ ಮಾತ್ರ .ವಾಮದೇವ ಮಹಾಂತ ಶಿವಾಚಾರ್ಯಸ್ವಾಮಿ

ಜಗತ್ತನ್ನು ಸೆರೆ ಹಿಡಿಯುವ ಶಕ್ತಿ ಛಾಯಾಗ್ರಾಹಕ ಮತ್ತು ಫೋಟೋಗ್ರಾಫರ್ ಮಾತ್ರ .ವಾಮದೇವ ಮಹಾಂತ ಶಿವಾಚಾರ್ಯಸ್ವಾಮಿ Only the photographer and the cameraman have the power to capture the world. Vamadeva Mahant Shivac

               ಕಂಪ್ಲಿ 29:  ಜಗತ್ತನ್ನು ಸೆರೆ ಹಿಡಿಯುವ ಸಾಮರ್ಥ ಛಾಯಾಗ್ರಾಹಕ ಮತ್ತು ಫೋಟೋಗ್ರಾಫರ್ ಮಾತ್ರ ಇದೆ ಎಂದು ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು ಪಟ್ಟಣದ ವೀರಶೈವ ಭವನದಲ್ಲಿ ಕಂಪ್ಲಿ ತಾಲೂಕು ಫೋಟೋಗ್ರಾಫರ್ ಮತ್ತು ವೀಡಿಯೋಗ್ರಾಫರ್ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಛಾಯಾ ಸಮ್ಮಿಲ-2026ರ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಬಾಲ್ಯದನೆನಪುಗಳನ್ನು ಫೋಟೋಗ್ರಾಫಿ ಮೂಲಕ ಸ್ಮರಿಸಬಹುದಾಗಿದೆ. ಸುಂದರ ಮತ್ತು ಸೌಂದರ್ಯವನ್ನು ಹುಟ್ಟು ಹಾಕುವ ಜೊತೆಗೆ ಜಗತ್ತನ್ನು ಸೆರೆ ಹಿಡಿಯುವ ಶಕ್ತಿ ಛಾಯಾಗ್ರಾಹಕರಿಗೆ ಇದೆ. ಇವತ್ತು ಮೊಬ್ಯೆಲ್‌ನಿಂದ ಜೀವನ ನಡೆಸುವುದು ಕಷ್ಟಕರವಾಗಿದೆ ಕುಟುಂಬಗಳು ಹಸನಾಗಿಸಲು ಸರ್ಕಾರ ನೀವೆಶನ  ಜೊತೆಗೆ ಆರ್ಥಿಕವಾಗಿ ಸಹಾಯಧನ ನೀಡಬೇಕು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು. ಶಾಸಕ ಜೆ.ಎನ್‌.ಗಣೇಶ ಅವರ ಅನುಪಸ್ಥಿತಿಯಲ್ಲಿ ಅವರ ಪರವಾಗಿ ಅಳಿಯ ರಾಜೇಶ್‌ಸಿಂಗ್ ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಾಸಕರು ನಿಮ್ಮ ಪರವಾಗಿ ಇರುತ್ತಾರೆ ಜೊತೆಗೆ ಕಷ್ಟಗಳಿಗೆ ಸ್ಫಂದಿಸುತ್ತಾರೆ ಎಂದರು

             ಸಂಘದ ಕಾರ್ಯದರ್ಶಿ ಹೆಚ್‌.ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪದಗಳಲ್ಲಿ ವರ್ಣಿಸಲು ಸಾಧ್ಯವಾಗದ ಮಾತುಗಳನ್ನು ಕೇವಲ ಒಂದು ಚಿತ್ರದ ಮೂಲಕ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ.ಸರ್ಕಾರ ಹೆಚ್ಚಿನ ಕಾಳಜಿವಹಿಸಿ, ವಿಶೇಷ ಯೋಜನೆಗಳನ್ನು ನೀಡಬೇಕಾಗಿದೆ ಎಂದರು.ಸಂಘದ ಅಧ್ಯಕ್ಷ ಜಿ.ಜಗದೀಶಗೌಡ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ವಿವಿಧ ಸಾಧಕರಿಗೆ ಹಾಗೂ ಗಣ್ಯರಿಗೆ ಸನ್ಮಾನಿಸಿ ಗೌರವಿಸಿದರು. ರಕ್ತದಾನ ಶಿಬಿರ ನಡೆಯಿತು ಈಸಂದರ್ಭದಲ್ಲಿ ಮಸ್ಕಿಯ ವರರುದ್ರಮುನಿಸ್ವಾಮಿ, ಪಿಐ ವಾಸುಕುಮಾರ, ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಮತ್ತು ಮೇಟ್ರೀ ಸೊಸೈಟಿ ಅಧ್ಯಕ್ಷ ಹೊಸಕೋಟೆ ಜಗದೀಶ, ಬ.ಪಿ.ಎ ಸಂಘದ ಜಿಲ್ಲಾಧ್ಯಕ್ಷ ನಾಡಗೌಡ ಚಂದ್ರಮೋಹನ್, ಕೆಪಿಎ ನಿರ್ದೇಶಕ ಕೆ.ವಿರೇಶ, ಪೇಟೆ ಬಸವೇಶ್ವರ ಸೌ.ಸ.ಸಂಘದ ನಿರ್ದೇಶಕ ಜಿ.ವೀರಭದ್ರ​‍್ಪ, ಮುಖಂಡರಾದ ಆನಂದ, ಶ್ರೀಧರ್ ವಿನಯ್, ಶ್ರೀಧರ್, ನಾಗರಾಜ, ಮಲ್ಲಿಕಾರ್ಜುನ, ಷಡಾಕ್ಷಾರಾಯಸ್ವಾಮಿ, ಅನೀಲ್‌ಕುಮಾರ, ಗೋಪಾಲ, ಜಿ.ರಾಘವೇಂದ್ರ ಶೆಟ್ಟಿ, ಗುರುಮೂರ್ತಿ, ಶ್ರೀನಿವಾಸರೆಡ್ಡಿ, ತುಕಾರಾಮ್, ಇಲಿಯಾಚ್, ಶಿವಕುಮಾರ, ವಿರುಪಾಕ್ಷಿ, ತಿಪ್ಪೇಸ್ವಾಮಿ, ವೀರನಗೌಡ ಸೇರಿದಂತೆ ಅನೇಕರಿದ್ದರು.