10ರಂದು ದಿ. ಎಸ್.ಎ.ಜಿದ್ದಿ ಅವರ ಪ್ರತಿಮೆ ಅನಾವರಣ, ಪ್ರಥಮ ಪುಣ್ಯಸ್ಮರಣೆ
On the 10th. Unveiling of statue of S.A. Jiddi, first commemoration
10ರಂದು ದಿ. ಎಸ್.ಎ.ಜಿದ್ದಿ ಅವರ ಪ್ರತಿಮೆ ಅನಾವರಣ, ಪ್ರಥಮ ಪುಣ್ಯಸ್ಮರಣೆ
ವಿಜಯಪುರ 07: ಕಾಳಿದಾಸ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರು, ಮಾಜಿ ವಿಧಾನ ಪರಿಷತ್ ಸದಸ್ಯ, ಶಿಕ್ಷಣ ಪ್ರೇಮಿ ಹಾಗೂ ಸರಳ ಸಜ್ಜನಿಕೆಯ ರಾಜಕಾರಣಿ ದಿ. ಎಸ್. ಎ. ಜಿದ್ದಿ ಅವರ ಪ್ರತಿಮೆಯ ಅನಾವರಣ ಹಾಗೂ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮವು ವಿಜಯಪುರದ ಕಾಳಿದಾಸ ಶಿಕ್ಷಣಸಂಸ್ಥೆ ಆವರಣದಲ್ಲಿ ಫೆ. 10ರಂದು ಮುಂಜಾನೆ 10 ಗಂಟೆಗೆ ನಡೆಯಲಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಆರ್.ಎಸ್.ವಾಡೇದ ಹಾಗೂ ಪ್ರಾಚಾರ್ಯ ಕೆ. ಆರ್ .ಜಾಧವ ಅವರು ಸಂಯುಕ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಿಂದಗಿಯ ಸಾರಂಗಮಠ-ಗಚ್ಚಿನಮಠ ಗುರುಕುಲ ಭಾಸ್ಕರ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಇವರ ಪಾವನ ಸಾನಿಧ್ಯದಲ್ಲಿ, ಮುಧೋಳದ ರೂಗಿ ಅಡವಿ ಸಿದ್ದೇಶ್ವರ ಆಶ್ರಮದ ನಿತ್ಯಾನಂದ ಮಹಾಸ್ವಾಮಿಗಳ ಸಮ್ಮುಖದಲ್ಲಿ ನಡೆಯಲಿದ್ದು, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ದಿ. ಎಸ್. ಎ. ಜಿದ್ದಿ ಅವರ ಪ್ರತಿಮೆಯ ಅನಾವರಣ ನಡೆಸಿಕೊಡಲಿದ್ದಾರೆ. ಕಾಳಿದಾಸ ಪ್ರೌಢಶಾಲೆಯ ಚೇರಮನ್ನ ಡಾ. ಕಂಠೀರವ ಕುಲ್ಲಳ್ಳಿ ಹಾಗೂ ಸುಭಾಷಚಂದ್ರ ಬೋಸ್ ಪದವಿ ಕಾಲೇಜಿನ ಚೇರಮನ್ನ ಪ್ರೊ. ವಿ.ಡಿ.ವಸ್ತ್ರದ ಅವರುಗಳು ನುಡಿನಮನ ಸಲ್ಲಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾಳಿದಾಸ ಶಿಕ್ಷಣಸಂಸ್ಥೆಯ ಅಧ್ಯಕ್ಷ ಅಶೋಕ ಎಸ್. ಜಿದ್ದಿ ಅವರು ವಹಿಸಲಿದ್ದಾರೆ. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುಭಾಸ ಜಿದ್ದಿ, ವಿ. ಎಸ್. ಶಿರೋಳ, ಬಿ. ಟಿ. ಜಿದ್ದಿ, ಎಫ್.ಎಚ್. ಮ್ಯಾಗೋಟಿ ಅವರು ಭಾಗವಹಿಸಲಿದ್ದಾರೆ. ಶಿಕ್ಷಣ ಪ್ರೇಮಿ ಹಾಗೂ ಸರಳ ಸಜ್ಜನಿಕೆಯ ರಾಜಕಾರಣಿ ದಿ. ಎಸ್. ಎ. ಜಿದ್ದಿ ಅವರ ಅಭಿಮಾನಿಗಳು ಹಿತೈಷಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸಂಸ್ಥೆಯ ಆಡಳಿತಾಧಿಕಾರಿ, ಆರ್. ಎಸ್. ವಾಡೇದ ಹಾಗೂ ಪ್ರಾಚಾರ್ಯ ಕೆ.ಆರ್.ಜಾಧವ ಅವರು ಸಂಯುಕ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 