78 ನೇ ವರ್ಷದ ಜನ್ಮ ದಿನದಂದು ವಿಶೇಷವಾಗಿ ದೇವಗಿರಿ ಗ್ರಾಮದ ಪ್ರೇಮವ್ವ ಜಗದೀಶ ಹೊಳಲ ಅವರ ಆಯ್ಕೆ 35 ಸಾವಿರದ ದೇಶೀ ಆಕಳ ಕೊಡುಗೆ
On his 78th birthday, a special gift of 35,000 rupees of native cattle was specially selected by Ja
78 ನೇ ವರ್ಷದ ಜನ್ಮ ದಿನದಂದು ವಿಶೇಷವಾಗಿ ದೇವಗಿರಿ ಗ್ರಾಮದ ಪ್ರೇಮವ್ವ ಜಗದೀಶ ಹೊಳಲ ಅವರ ಆಯ್ಕೆ 35 ಸಾವಿರದ ದೇಶೀ ಆಕಳ ಕೊಡುಗೆ
ಹಾವೇರಿ 1: ಡಾ.ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ನಿಯಮಿತ, ಹಾವೇರಿ ಶಾಖಾ ವ್ಯವಸ್ಥಾಪಕ ಮಂಡಳಿ ಡಾ. ಪ್ರಭಾಕರ ಕೋರೆಯವರ 78 ನೇ ವರ್ಷದ ಜನ್ಮ ದಿನದಂದು ವಿಶೇಷವಾಗಿ ಸಾಮಾಜಿಕ ಚಿಂತನೆಯೊಂದಿಗೆ ತಾಲೂಕಿನ ದೇವಗಿರಿ ಗ್ರಾಮದ ಪ್ರೇಮವ್ವ ಜಗದೀಶ ಹೊಳಲ ಅವರನ್ನು ಆಯ್ಕೆ ಮಾಡಿಕೊಂಡು ಸುಮಾರು 35 ಸಾವಿರದ ದೇಶೀ ಆಕಳನ್ನು ಕೊಡುಗೆಯಾಗಿ ನೀಡಲಾಯಿತು.
ಶಾಖೆಯ ಅಧ್ಯಕ್ಷ ಬಸವರಾಜ ಮಾಸೂರ ಮಾತನಾಡಿ ಡಾ. ಪ್ರಭಾಕರ ಕೋರೆಯವರು ಈ ದೇಶ ಕಂಡ ಅದ್ಭುತ ಚಿಂತಕರಾಗಿದ್ದಾರೆ. ದೂರದೃಷ್ಠಿಯ ವಿವೇಚನೆಯೊಂದಿಗೆ ಸಮಾಜದ ಓರೆ ಕೋರೆಗಳನ್ನು ತಿದ್ದಿ ತೀಡುವಲ್ಲಿ ಅವರು ಪಟ್ಟ ಪರಿಶ್ರಮ ಇತಿಹಾಸವೇ ಆಗಿದೆ. ಶಿಕ್ಷಣದ ಮೂಲಕ ಅದ್ಭುತ ಕ್ರಾಂತಿಗೈದ ಅವರು ವಿಶ್ವಾದ್ಯಂತ ಕೆ.ಎಲ್.ಇ. ಸಂಸ್ಥೆಯ ಹೆಸರನ್ನು ಪಸರಿಸಿದ ಕೀರ್ತಿವಂತರಾಗಿದ್ದಾರೆ. ವಿನೂತನ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಿ ಬೆಳೆಯುತ್ತಿರುವ ದೇಶಕ್ಕೆ ಪುಷ್ಠಿ ತುಂಬಿದ್ದಾರೆ.ಸಂಸ್ಥೆಯ ಸಂಸ್ಥಾಪಕರಾದ ಡಾ.ಪ್ರಭಾಕರ ಕೋರೆಯವರ ಜನ್ಮದಿನದಂದು ಪ್ರತಿ ವರ್ಷವೂ ವಿವಿಧ ಸಾಮಾಜಿಕ ಚಿಂತನೆಗಳುಳ್ಳ ಕೊಡುಗೆಗಳನ್ನು ಕೊಡಮಾಡಿಕೊಂಡು ಬಂದಿರುವ ಸಂಸ್ಥೆಯು ಈ ವರ್ಷ ಇಂತಹ ವಿಭಿನ್ನ ಕಾರ್ಯಕ್ಕೆ ಮುಂದಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.ಮುಂಬರುವ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯ ಯೋಜನೆಗಳನ್ನು ನಿರೂಪಿಸಿ ಡಾ. ಪ್ರಭಾಕರ ಕೋರೆಯವರ ಜನ್ಮ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ದೇವಗಿರಿ ಗ್ರಾಮದ ಪ್ರಮುಖರು,ಸೊಸಾಯಿಟಿಯ ಸಲಹಾ ಮಂಡಳಿ ಪದಾಧಿಕಾರಿಗಳಾದ ಶಿವಯೋಗಿ ಕೊಳ್ಳಿ, ನಿರಂಜನ ಹೆರೂರ, ವಿನಯ ಶಿರೂರ, ಸುಭಾಶಚಂದ್ರ ಹುರಳಿಕೊಪ್ಪಿ, ದಯಾನಂದ ಯಡ್ರಾಮಿ, ಗ್ರಾಮದ ಪ್ರಮುಖರಾದ ಮಹಾದೇವಣ್ಣ ಕಡ್ಲಿ, ರೋಟರಿ ಅಧ್ಯಕ್ಷ ಕಾಶೀನಾಥ ಅರಾವತ್, ಶಾಖಾ ವ್ಯವಸ್ಥಾಪಕರಾದ ಬಾಳಗೌಡ ಪಾಟೀಲ,ಸಿಬ್ಬಂದಿಗಳಾದ ಪವಿತ್ರಾ ಬಂಕಾಪುರ, ವಿದ್ಯಾ ಗುಡಗೂರ, ದೇವರಾಜ ಬಿದರಿ, ಪರಶುರಾಮ ಸಂದಿಮನಿ, ಪಿಗ್ಮಿ ಸಂಗ್ರಾಹಕರಾದ ನಾಗರಾಜ ಸುಳ್ಳಳ್ಳಿ,ಪಂಚಾಕ್ಷರಯ್ಯ ಗಡ್ಡದಮಠ,ಮಲ್ಲಿಕಾರ್ಜುನ ಹೊಸಮನಿ, ಶ್ಯಾಮಲಾ ಹೊಸಮನಿ, ಸಿದ್ಧಲಿಂಗೇಶ ಬಾಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಜಿ. ಎಚ್. ಕಾಲೇಜಿನ ಡಾ. ಗುರುಪಾದಯ್ಯ ಸಾಲಿಮಠ ನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 