ಜ.12ರಂದು ಹಿಂದೂ ಸಮ್ಮೇಳನ ಸರ್ವ ಹಿಂದೂ ಸಮಾಜದವರು ಭಾಗವಹಿಸಿ ಅಧ್ಯಕ್ಷ ಪತ್ರಯ್ಯಸ್ವಾಮಿ

ಜ.12ರಂದು ಹಿಂದೂ ಸಮ್ಮೇಳನ ಸರ್ವ ಹಿಂದೂ ಸಮಾಜದವರು ಭಾಗವಹಿಸಿ ಅಧ್ಯಕ್ಷ ಪತ್ರಯ್ಯಸ್ವಾಮಿ On January 12, the Hindu Sammelana was attended by all Hindu communities and President Patraiyaswam

                  ಕಂಪ್ಲಿ  30 : ಪಟ್ಟಣದ ಕೊಟ್ಟಾಲ್ ರಸ್ತೆಯ ಕೆ.ಎಸ್ ಭವನ ಎದುರುಗಡೆಯ ಮುರಳಿಕೃಷ್ಣ ರೈಸ್ ಮಿಲ್ ಮುಂಭಾಗದಲ್ಲಿ ಹಿಂದೂ ಸಮ್ಮೇಳದ ಸಮಿತಿಯ ಕಂಪ್ಲಿ ಹೋಬಳಿ ಘಟಕದಿಂದ 2026ರ ಜ.12ರ ಸೋಮವಾರದಂದು ಮಧ್ಯಾಹ್ನ 2:20ಕ್ಕೆ ಹಿಂದೂ ಸಮ್ಮೇಳನದ ಶೋಭಾ ಯಾತ್ರೆ ನಡೆಯಲಿದ್ದು, ಹಿಂದೂ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿ ಮಾಡಬೇಕೆಂದು ಹಿಂದೂ ಸಮ್ಮೇಳದ ಸಮಿತಿಯ ಕಂಪ್ಲಿ ಹೋಬಳಿ ಘಟಕ ಅಧ್ಯಕ್ಷ ಎನ್‌.ಎಂ.ಪತ್ರಯ್ಯಸ್ವಾಮಿ ಕರೆ ನೀಡಿದರು.ಅವರು ಮಂಗಳವಾರ ಪಟ್ಟಣದ ಅತಿಥಿ ಗೃಹದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶೋಭಾ ಯಾತ್ರೆಯೂ ಕಂಪ್ಲಿ ಪಟ್ಟಣದ ಉದ್ಭವ ಗಣಪತಿ ದೇವಸ್ಥಾನದಿಂದ ಪ್ರಾರಂಭವಾಗಿ ಮುಖ್ಯ ರಸ್ತೆಗಳ ಮೂಲಕ ಕೊಟ್ಟಾಲ್ ರಸ್ತೆಯ ರೈಸ್ ಮಿಲ್ ಬಳಿಯಲ್ಲಿ ಸಮಾವೇಶಗೊಂಡು,

                 ನಂತರ ತುಮಕೂರಿನ ಬೆಳ್ಳಾವಿಯ ಕಾರದೇಶ್ವರ ಮಠದ ಶ್ರೀ ಕಾರದ ವೀರಬಸವ ಮಹಾಸ್ವಾಮಿ, ಕಲ್ಮಠದ ಅಭಿನವ ಪ್ರಭುಸ್ವಾಮಿ, ಎಮ್ಮಿಗನೂರು ಹಂಪಿ ಸಾವಿರ ದೇವರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿ ಸಾನಿಧ್ಯದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ವಕ್ತಾರ ರವೀಂದ್ರ ಜಿ ಇವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಕುಟುಂಬ ಪ್ರಭೋದನೆ, ಸಾಮರಸ್ಯ, ಸ್ವದೇಶಿ ಉತ್ಪನ್ನ ಬಳಕೆ, ಪರಿಸರ ಸಂರಕ್ಷಣೆ, ನಾಗರಿಕರ ಕರ್ತವ್ಯ. ಹೀಗೆ ಐದು ಪಂಚಸೂತ್ರಗಳ ಹಿನ್ನಲೆ ಬೃಹತ್ ಹಿಂದೂ ಸಮ್ಮೇಳನ ಆಯೋಜಿಸಿದ್ದು, ಸರ್ವ ಹಿಂದೂ ಸಮಾಜದವರು ಪಾಲ್ಗೊಂಡು, ಯಶಸ್ವಿ ಮಾಡಬೇಕೆಂದು ಕೋರುವ ಜೊತೆಗೆ ಜ.4ರಂದು ಕಂಪ್ಲಿಯ ಶಾರದಾ ಶಾಲೆಯಲ್ಲಿ ಸಮ್ಮೇಳದ ಪೂರ್ವಭಾವಿ ಸಭೆ ಹಮ್ಮಿಕೊಂಡಿದ್ದು, ಹಿಂದೂ ಸಮಾಜದವರು,

                ಖಾಸಗಿ ಶಾಲೆಗಳ ಒಕ್ಕೂಟ, ಪ್ರಗತಿಪರ ಸಂಘಟನೆಗಳು, ಸಂಘ-ಸಂಸ್ಥೆಯವರಯ ಭಾಗವಹಿಸಿ, ಸಭೆಯಲ್ಲಿ ಕಾರ್ಯಕ್ರಮ ರೂಪುರೇಷೆಯ ಬಗ್ಗೆ ಚರ್ಚಿಸಿ ಜ.12ರಂದು ಕಂಪ್ಲಿಯಲ್ಲಿ ಶೋಭಾಯಾತ್ರೆ ನಡೆಯಲಿದ್ದು, ಜ.17 ರಾಮಸಾಗರದಲ್ಲಿ ಮಧ್ಯಾಹ್ನ 3ಗಂಟೆಗೆ ನಡೆಯಲಿದೆ. ಇನ್ನೂ ಸಣಾಪುರ, ನಂ.10 ಮುದ್ದಾಪುರದ ಶೋಭಾಯಾತ್ರೆ ದಿನಾಂಕ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಎಂ.ಶ್ರೀನಿವಾಸ ಶೆಟ್ಟಿ, ಖಜಾಂಚಿ ಗೋವಿಂದ ಎಸ್‌.ಎಸ್, ಸಲಹಾ ಸಮಿತಿಯ ಯಣ್ಣಿ ವೆಂಕಟೇಶ, ಡಿ.ವಿ.ಸತ್ಯನಾರಾಯಣ, ಶ್ರೀನಿವಾಸ, ಕರಿಬಸಯ್ಯಸ್ವಾಮಿ ಜಿ.ಎಂ, ವಿರೇಶ, ಪ್ರಕಾಶ ಅಂಗಡಿ, ಕಿಶೋರ್, ಶ್ರೀನಿವಾಸಲು, ಪ್ರಶಾಂತ್, ಕೃಷ್ಣ ಪ್ರಸಾದ್ ಇದ್ದರು.