ಮಹಾಲಿಂಗಪುರ 12: ಸ್ಥಳೀಯ 11ನೇ ವಾಡ್‌ರ್ನ ಚಿಮ್ಮಡಗಲ್ಲಿಯ ಕಾಗಿ ಪ್ಲಾಟ್‌ನಲ್ಲಿ ಕಳೆದ ಎರಡು ತಿಂಗಳಿಂದ ನೀರಿನ ಸಮಸ್ಯೆ ಉಂಟಾಗಿದ್ದು, ಒಂದು ಕೊಡ ನೀರಿಗಾಗಿ ನಿವಾಸಿಗಳು ಬಡಾವಣೆಯಿಂದ ಬಡಾವಣೆಗೆ ಅಲೆಯಬೇಕಾದ ಪರಿಸ್ಥಿತಿ ಉಂಟಾಗಿದೆ.
ಕಾಗಿ ಪ್ಲಾಟ್‌ನಲ್ಲಿ 50ಕ್ಕೂ ಹೆಚ್ಚು ಮನೆಗಳಿವೆ. ಕೊಳವೆಬಾವಿ ಮೂಲಕ ಮನೆಗಳಿಗೆ ನೀರು ಪೂರೈಸಲಾಗುತ್ತಿತ್ತು.ಆದರೆ ಅಂತರ್ಜಲ ಮಟ್ಟ ಕುಸಿತದಿಂದ ಕೊಳವೆಬಾವಿಯಿಂದ ನೀರು ಬರುತ್ತಿಲ್ಲ ಇದರಿಂದ ಸಮಸ್ಯೆ ತೀವ್ರವಾಗಿದೆ.ಇದರ ಪಕ್ಕದಲ್ಲೇ ಮತ್ತೊಂದು ಕೊಳವೆಬಾವಿ ಕೊರೆಸಿ ಅದು ಸಫಲವಾಗಿದ್ದರೂ ಅದಕ್ಕೆ ಪೈಪ್ ಅಳವಡಿಸಲು ಅಧಿಕಾರಿಗಳು ಮುಂದಾಗಿಲ್ಲ.ಇದರಿಂದ ನೀರಿದ್ದರೂ ನಿರ್ವಹಣೆ ಕೊರತೆಯಿಂದ ಪ್ಲಾಟ್‌ಗೆ ನೀರು ಪೂರೈಕೆಯಾಗುತ್ತಿಲ್ಲ.'ಸಮರ್ಕ ನೀರು ಸಿಗದ ಬಗ್ಗೆ ಹಲವು ಬಾರಿ ಪುರಸಭೆ ಕಚೇರಿಗೆ ಭೇಟಿ ನೀಡಿ, ಸಮಸ್ಯೆ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ.ಅಧಿಕಾರಿಗಳು ನಮ್ಮ ನೋವಿಗೆ ಸ್ಪಂದಿಸುತ್ತಿಲ್ಲ. ಅವರಿಗೆ ನೀರಿನ ಸಮಸ್ಯೆಯ ಗಂಭೀರತೆ ಅರ್ಥವಾಗುತ್ತಿಲ್ಲ' ಎಂದು ಪ್ಲಾಟ್‌ನ ಮಹಿಳೆಯರು ಆರೋಪಿಸುತ್ತಾರೆ.ಪ್ಲಾಟ್‌ನಲ್ಲಿರುವ ಹಳೆಯ ಹಾಗೂ ಹೊಸ ಕೊಳವೆಬಾವಿಯನ್ನು ಪುರಸಭೆ ಅಧಿಕಾರಿಗಳು ಸಮರ್ಕ ನಿರ್ವಹಣೆ ಮಾಡಬೇಕಿದೆ. ಕೂಲಿ ನಾಲಿ ಮಾಡಿ ಬದುಕು ನಡೆಸುತ್ತಿದ್ದೇವೆ. ದಿನ ಬೆಳಗಾದರೆ ನೀರಿಗಾಗಿ ಪರದಾಟ ನಡೆಸುವಂತಾಗಿದೆ. ಕೆಲಸಕ್ಕೆ ಹೋಗಲು ಆಗುತ್ತಿಲ್ಲ. ನೀರು ಇಲ್ಲದಿದ್ದರೆ ಬದುಕುವುದು ಹೇಗೆ' ಎಂದು ಕೆಲ ಮಹಿಳೆಯರು ಪ್ರಶ್ನಿಸುತ್ತಾರೆ.
ಸ್ಥಳೀಯ ಪುರಸಭೆಯಲ್ಲಿ ಕಳೆದ ಮೂರು ವರ್ಷ ಗಳಿಂದ ಟೆಂಡರ್ ಕರೆಯದೆ ಇಂಡೆಂಟ್ ಮೇಲೆ ನೀರು ಸರಬರಾಜು, ಬೀದೀದೀಪ ಹಾಗೂ ಕೊಳವೆಬಾವಿ ದುರಸ್ತಿ ಸಂಬಂಧಿಸಿದ ಸಾಮಗ್ರಿಗಳನ್ನು ಖರೀದಿಸಲಾಗುತ್ತಿದೆ' ಎಂದು ಪುರಸಭೆ ಆಡಳಿತ ಮಂಡಳಿ ಸದಸ್ಯ ಬಲವಂತಗೌಡ ಪಾಟೀಲ ಆರೋಪಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಕಾಮಗಾರಿ, ಖರೀದಿ ಸಂದರ್ಭ ಸರ್ಕಾರದ ನಿಯಮಾನುಸಾರ ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆ ನಡೆಸಬೇಕು. ಆದರೆ ಟೆಂಡರ್ ಕರೆಯದೆ ಸಾಮಗ್ರಿ ಖರೀದಿಸಿ ಅನವಶ್ಯಕವಾಗಿ ಹಣ ಪೋಲು ಮಾಡಲಾಗುತ್ತಿದೆ. ಈ ಕುರಿತು ಸರ್ಕಾರ ಸಮಗ್ರ ತನಿಖೆ ನಡೆಸಬೇಕು' ಎಂದು ಆಗ್ರಹಿಸಿದರು.'ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ತಿಂಗಳಿಂದ ವೇತನ ಪಾವತಿ ಆಗಿಲ್ಲ. ಸ್ಥಳೀಯ ಸಮಸ್ಯೆಗಳಿಗೆ ಮುಖ್ಯಾಧಿಕಾರಿ ಸರಿಯಾಗಿ ಸ್ಪಂದಿಸುತ್ತಿಲ್ಲ.ವಿರೋಧ ಪಕ್ಷದ ಸದಸ್ಯರೊಬ್ಬರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು' ಎಂದು ತಿಳಿಸಿದರು.'ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ವಿಲೇವಾರಿ ಮಾಡಲು 9 ಜನ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಟೆಂಡರ್ ಪ್ರಕ್ರಿಯೆ ಆಗಿದ್ದರೂ ನಾಲೈದು ತಿಂಗಳಾದರೂ ಸಿಬ್ಬಂದಿ ನೇಮಕಾತಿ ಆಗಿಲ್ಲ. ಘಟಕದಲ್ಲಿ ಕಸ ವಿಲೇವಾರಿ ಯಂತ್ರ ದುರಸ್ತಿಯಲ್ಲಿದೆ.ಗುತ್ತಿಗೆದಾರನಿಗೆ ಕೆಲಸದ ಆದೇಶ ನೀಡಿದರೂ ದುರಸ್ತಿಯಾಗಿಲ್ಲ.
: ಬಲವಂತಗೌಡ ಪಾಟೀಲ
ಸ್ಥಳೀಯ ವಾರ್ಡಿನ ಸದಸ್ಯ
ವಿರೋಧ ಪಕ್ಷದ ಸದಸ್ಯನ ಮಾತು ಕೇಳುತ್ತಾರೆಂಬ ಆರೋಪಕ್ಕೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಪ್ರತಿಕ್ರಿಯಿಸಿ ನಾವು ಯಾವುದೇ ರಾಜಕೀಯ ಮಾಡುತ್ತಿಲ್ಲ ಹಾಗೂ ಸಾಮಾನ್ಯ ಸಭೆಯಲ್ಲಿ ಅನುಮತಿ ನೀಡಿದ ನಂತರವೇ ಎಲ್ಲಾ ಕೆಲಸವನ್ನು ಮಾಡಲಾಗುತ್ತೆ ಮತ್ತು ಹೊಸದಾಗಿ ಕೊರೆದ ಕೊಳವೆ ಬಾವಿಯಲ್ಲಿ ಇಷ್ಟು ದಿನ ನೀರಿಲ್ಲದ ಕಾರಣ ನಿರ್ವಹಣೆ ಮಾಡಿರಲಿಲ್ಲ ಈಗ ನೀರು ಬಂದಿದೆ ಎಂಬ ವಿಷಯ ಗಮನಕ್ಕೆ ಬಂದಿದ್ದು ಮುಂದಿನ ಕ್ರಮ ಕೈಗೊಳ್ಳಲಾಗುವುದು.