ಅಕ್ಟೊಬರ್ 23 ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ

ಅಕ್ಟೊಬರ್ 23 ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ October 23rd is the birthday of Kittur Rani Chennamma.

ಅಕ್ಟೊಬರ್ 23 ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ 

ಹುಬ್ಬಳ್ಳಿ 18: ಪ್ರತಿ ವರ್ಷದಂತೆ ಈ ವರ್ಷವು ಕೂಡ ಅದ್ದೂರಿಯಾಗಿ ಅ.23 ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಮಾಡಲಾಗುವುದು ಎಂದು ಹುಬ್ಬಳ್ಳಿ ನಗರ ಗ್ರೇಡ್‌-2 ತಹಶೀಲ್ದಾರರಾದ ಶಿವಾನಂದ ಹೆಬ್ಬಳ್ಳಿ ಅವರು ಹೇಳಿದರು.  ಇಂದು ತಾಲೂಕು ಆಡಳಿತ ಸೌಧದ ತಹಶೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಅಂದು ಬೆಳಿಗ್ಗೆ 10 ಗಂಟೆಗೆ ತಾಲೂಕು ಆಡಳಿತ ಸಭಾಭವನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ರವರ ಜಯಂತಿ ಆಚರಣೆ ಮಾಡಲಾಗುತ್ತದೆ. ಹಾಗೂ ,ಸಮಾಜದ ಸಾಧಕರಿಗೆ ಸನ್ಮಾನ ಮಾಡಲಾಗುವದು, ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಮುಖಂಡರು ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.   ಪೂರ್ವಭಾವಿ ಸಭೆಯಲ್ಲಿ ,ಸಂಜೀವ ಧುಮ್ಮಕನಾಳ,ಚನ್ನಬಸಪ್ಪ ಧಾರವಾಡಶೆಟ್ರ, ರತ್ನಾ.ಎಸ್‌. ಚಾಶೆಟ್ಟಿ, ಬಿ.ಎಂ. ಗೌಡ್ರ, ಸದಾಶಿವ. ಎಸ್‌. ಚಾಶೆಟ್ಟಿ, ವೀರಣ್ಣ. ಬ.ನೀರಲಗಿ, ಡಾ. ಮೋಹನ್‌. ಎಂ. ನುಚ್ಚಿ, ರತ್ನ, ಆಶ್ವಿನಿ ಮಾದರ, ರತ್ನ, ಗುರುನಾಥ ಬರದೇವ, ಸುರೇಶ ಬಾರಕೇರ, ಅಂದನಪ್ಪ, ಡಾ.ಸುವರ್ಣಲತಾ ಗದಿಗೆಪ್ಪ ಗೌಡ್ರು, ರತ್ನಾ. ವಿ, ರತ್ನಾ.ಕ, ಸಮಾಜದ ಮುಖಂಡರು,ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.