ವೀರವನಿತೆ ಒನಕೆ ಓಬವ್ವ ಜಯಂತಿ

ವೀರವನಿತೆ ಒನಕೆ ಓಬವ್ವ ಜಯಂತಿ Obavva Jayanti of the heroic woman Onake

ಹಾನಗಲ್ 13 :ವೀರವನಿತೆ ಒನಕೆ ಓಬವ್ವ ನಮಗೆಲ್ಲರಿಗೂ ಸ್ಪೂರ್ತಿ. ಅವರ ತ್ಯಾಗ, ಧೈರ್ಯ ಮತ್ತು ದೇಶಪ್ರೇಮದ ಕತೆ ಶತ ಶತಮಾನಗಳವರೆಗೆ ಕನ್ನಡ ನಾಡಿನ ಹೆಮ್ಮೆಯಾಗಿರಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. 

  ಇಲ್ಲಿನ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾನಗಲ್ ಮತ್ತು ಅಕ್ಕಿಆಲೂರು ಆಶ್ರಯದಲ್ಲಿ ಆಯೋಜಿಸಲಾಗಿದ್ದ ಒನಕೆ ಓಬವ್ವ ಜಯಂತಿಯಲ್ಲಿ ಭಾಗವಹಿಸಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅವರು ಯಾವುದೇ ಶಸ್ತ್ರಗಳ ಸಹಾಯವಿಲ್ಲದೇ ಕೇವಲ ಒನಕೆಯಿಂದ ಶತ್ರುಗಳನ್ನು ಸಂಹರಿಸಿದ ಒನಕೆ ಓಬವ್ವ ಪರಾಕ್ರಮ ಮೆರೆದು ಒಂದು ಸೈನ್ಯವನ್ನು ರಾಜ್ಯದೊಳಗೆ ಪ್ರವೇಶಿಸದಂತೆ ತಡೆದಿದ್ದು ಇತಿಹಾಸ. ಪ್ರತಿಯೊಬ್ಬ ಕನ್ನಡಿಗನಲ್ಲೂ ಸಹ ಓಬವ್ವನಂಥ ದೇಶಭಕ್ತಿ ಮತ್ತು ಕರ್ತವ್ಯನಿಷ್ಠೆ ಇರಬೇಕು ಎಂದು ತಿಳಿಸಿದರು. 

  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ, ಮುಖಂಡರಾದ ಬಸವರಾಜ ಚಲವಾದಿ, ಪ್ರಭು ಬಾರ್ಕಿ, ಈಶ್ವರ ಚಲವಾದಿ, ಅಣ್ಣಪ್ಪ ಗಡಿಯಂಕನಹಳ್ಳಿ, ನಿಂಗಪ್ಪ ಕಾಳೇರ, ಮಂಜು ಹಾಳಗಲ್ಲಾಪೂರ, ಬಸವರಾಜ ಕಾಳೇರ, ಸೋಮಣ್ಣ ಚಲವಾದಿ, ಮಾಲತೇಶ ಕಾಳೇರ, ಮಂಜು ಕರ್ಜಗಿ, ಶಿವು ಭದ್ರಾವತಿ, ರಾಜಕುಮಾರ ಶಿರಪಂಥಿ, ಸಂತೋಷ ಸುಣಗಾರ, ನಾಗರಾಜ್ ಆರೇರ, ರಾಜೂ ಗಾಡಿಗೇರ, ಸಿಕಂದರ್ ವಾಲಿಕಾರ ಸೇರಿದಂತೆ ಅನೇಕರಿದ್ದರು.