ಕೊಪ್ಪಳದಲ್ಲಿ ವಿಶ್ವಕರ್ಮ ಮಹಾ ಒಕ್ಕೂಟದ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ

ಕೊಪ್ಪಳದಲ್ಲಿ ವಿಶ್ವಕರ್ಮ ಮಹಾ ಒಕ್ಕೂಟದ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ Oath-taking of district office bearers of Vishwakarma Maha Koppal in Koppal

               ಕೊಪ್ಪಳ 15: ವಿಶ್ವಕರ್ಮ ಮಹಾ ಒಕ್ಕೂಟ ಕೊಪ್ಪಳ ಜಿಲ್ಲಾ ಘಟಕ ಉದಯ, ರಾಜ್ಯಧ್ಯಕ್ಷ ವಿಜಯಕುಮಾರ ಪತ್ತಾರ ಚಾಲನೆ. ರಾಜ್ಯ ಸಂಚಾಲಕರಾಗಿ ಕರಾಟೆ ಮೌನೇಶ ವಡ್ಡಟ್ಟಿ, ಜಿಲ್ಲಾ ಗೌರವ ಅಧ್ಯಕ್ಷರಾಗಿ ಹೀರಿಯ ವಕೀಲರಾದ ಐ ವಿ ಪತ್ತಾರ, ಜಿಲ್ಲಾಧ್ಯಕ್ಷರಾಗಿ ಮೌನೇಶ ಬಡಿಗೇರ, ಉಪಾಧ್ಯಕ್ಷರಾಗಿ ವೀರಬದ್ರ​‍್ಪ ಬಡಿಗೇರ ಮತ್ತು ಕಾಳೆಶ್ ಬಡಿಗೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಗಿ ಈ ಕೆ ಹೊಸಮನಿ ನೇಮಕ. ಕೊಪ್ಪಳ ನಗರದಲ್ಲಿ ಜರುಗಿದ ವಿಶ್ವಕರ್ಮ ಮಹಾ ಒಕ್ಕೂಟದ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಜರುಗಿತು. ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯಧ್ಯಕ್ಷರಾದ ವಿಜಯಕುಮಾರ ಪತ್ತಾರ ( ಕನಕಗಿರಿ) ಮಾತಾನಡಿ ವಿಶ್ವಕರ್ಮ ಸಮುದಾಯವು ಸಮ ಸಮಾಜ ನಿರ್ಮಾಣ ಸಾಮಾಜಿಕ ನ್ಯಾಯದಡಿಯಲ್ಲಿ ನ್ಯಾಯ ಪಡೆಯಬೇಕಾದರೆ ಸಂಘಟನೆ ಜಾಗೃತಿ  ಅರಿವು ಬಹಳ ಮುಖ್ಯ ಅಲ್ಲದೆ ಸಮ ಸಮಾಜ ನಿರ್ಮಾಣದಲ್ಲಿ ರಾಜಕೀಯ ಪ್ರಾತಿನಿಧ್ಯ, ಆರ್ಥಿಕ, ಸಾಮಾಜಿಕ , ಶೈಕ್ಷಣಿಕವಾಗಿ ವಿಶ್ವಕರ್ಮರಿಗೆ ಅನ್ಯಾಯವಾಗುತ್ತಿದೆ...

               ಹಿಂದುಳಿದ ವರ್ಗಗಳಲ್ಲಿ ಮುಂಚುಣಿಯಲ್ಲಿರುವ ವಿಶ್ವಕರ್ಮ ಸಮಾಜವು ಸಮುದಾಯಕ್ಕೆ ಪಂಚಕಸಬುಗಳನ್ನು ಈ ನಾಡಿಗೆ ತನ್ನದೇ ಆದ ಆಸೆ , ಆಮಿಷಗಳನ್ನು ಲೆಕ್ಕಿಸದೆ ಕಾಯಕದಲ್ಲಿ ತೊಡಗಿದ್ದಾರೆ. ಆದರೆ ಸ್ವಾತಂತ್ರ್ಯ ಬಂದು 78 ವರ್ಷ ಕಳೆದರು ಇನ್ನು ಈ ಆಳುವ ಹಾಗೂ ರಾಜಕೀಯ ಪಕ್ಷಗಳು ಜೀತದಾಳು ತರಹ ನಮ್ಮ ವಿಶ್ವಕರ್ಮ ಸಮಾಜವನ್ನು ಬಳಸಿಕೊಳ್ಳುತ್ತಿವೆ...ಈ ನಿಟ್ಟಿನಲ್ಲಿ ಪ್ರಸ್ತುತ ದಿನಗಳಲ್ಲಿ ಸಂಘಟನೆ ಬಲವರ್ಧನೆಗೆ ಹಾಗೂ ಸರಕಾರದ ಯೋಜನೆಗಳನ್ನು ನ್ಯಾಯಯುತವಾಗಿ ಪಡೆಕೊಳ್ಳಲು ಕರೆ ನೀಡಿದರು...ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ವಿಶ್ವಕರ್ಮ ಸಮುದಾಯದ ಐತಿಹಾಸಕ್ಕೆ ಸಂಭಂದಿಸಿದ ಸುಪ್ರಸಿದ್ದ ಧಾರ್ಮಿಕ ಕ್ಷೇತ್ರಕ್ಕೆ   ಕೆಲವು ಅಡೆತಡೆ ಆಗಿವೆ..ಅವುಗಳಿಗೆ ಆದಷ್ಟು ಬೇಗ ಸಮಸ್ಯ ಬಗೆಹರಿಸಲಾಗುವುದು ಎಂದು ಸಮಾಜ ಭಾಂದವರಿಗೆ ತಿಳಿಸಿದರು...

               ಬಾಕ್ಸನಲ್ಲಿ ( ವಿಶ್ವಕರ್ಮ ಸಮುದಾಯ ಈ ನಾಡಿಗೆ ಪಂಚಕಸಬುಗಳನ್ನು ಸೇವೆ ಸಲ್ಲಿಸುತ್ತಾ ನಾಡಿನ ಒಳಿತಿಗೆ ಪಣತೊಟ್ಟಿದೆ..ಆದರೆ ಸ್ವಾತಂತ್ರ್ಯ ಬಂದು 78 ವರ್ಷ ಕಳೆದರು ಸಾಮಾಜಿಕ ನ್ಯಾಯದಡಿಯಲ್ಲಿ ಇಲ್ಲಿಯವರೆಗೂ  ಅನ್ಯಾಯವಾಗಿದ್ದನ್ನು ವಿಶ್ವಕರ್ಮ ಮಹಾ ಒಕ್ಕೂಟವು ಸಹಿಸದು....ಅಲ್ಲದೇ ಸರಕಾರಕ್ಕೆ ಹಾಗೂ ರಾಜಕೀಯ ಪಕ್ಷಗಳಿಗೆ ಸಮಯ ಬಂದಾಗ, ಬರುವ ದಿನಗಳಲ್ಲಿ ವಿಶ್ವಕರ್ಮ ಸಮಾಜ ತಕ್ಕ ಪಾಠ ಕಲಿಸಲಿದೆ. (ವಿಜಯಕುಮಾರ ಪತ್ತಾರ ಕನಕಗಿರ, ರಾಜ್ಯಕ್ಷರು ,ವಿಶ್ವಕರ್ಮ ಮಹಾ ಒಕ್ಕೂಟ ,ಬೆಂಗಳೂರು ) ಈ ಸಂದರ್ಭದಲ್ಲಿ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಮೋಹನ ನರಹಗುಂದ, ಬಳ್ಳಾರಿ, ವಿಜಯನಗರ ಕೊಪ್ಪಳ ವಿಭಾಗ ಅಧ್ಯಕ್ಷ ಚಂದ್ರಕಾಂತ ಸೋನಾರ ರಾಜ್ಯ ಉಪಾಧ್ಯಕ್ಷ ಸೂರೇಶ ಶಿಲ್ಪಿ, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ , ರಾಮಾಚಾರ...