ದೇಶದಲ್ಲಿ ಹೆಚ್ಚುತ್ತಿರುವ ಕ್ರೋನಿ ಕ್ಯಾಪ್ಟಲಿಸ್ಟ್ಗಳ ಸಂಖ್ಯೆ

ಬ್ಯಾಡಗಿ27: ದೇಶದಲ್ಲಿ ಕ್ರೋನಿ ಕ್ಯಾಪ್ಟಲಿಸ್ಟ್ಗಳ ಸಂಖ್ಯೆ ಹೆಚ್ಚಾಗುತ್ತಿದೆ, ಮಾಡಿದ ಸಾಲ ತೀರಿಸಲಾಗದೇ ವಿದೇಶಕ್ಕೆ ಹಾರುವ ಜಾಯಮಾನ ಬೆಳೆಸಿಕೊಳ್ಳುತ್ತಿರುವ ಬಂಢವಾಳಶಾಹಿಗಳಿಂದ ದೇಶದ ಆಥರ್ಿಕ ವ್ಯವಸ್ಥೆಗೆ ಧಕ್ಕೆಯಾಗಲಿದೆ, ಪಡೆದ ಸಾಲ ಮರುಪಾವತಿ ಮಾಡದಿರುವುದು ದೇಶದ್ರೋಹಕ್ಕೆ ಸಮಾನವಾದ ಕೃತ್ಯವಾಗಿದ್ದು, ಇಂತಹ ವ್ಯವಸ್ಥೆಗಳ ನಡುವೆಯೂ ಸಹಕಾರಿ ತತ್ವದಡಿ ಗಜಾನನ ಅರ್ಬನ್ ಬ್ಯಾಂಕ್ ನೂರು ವಸಂತಗಳನ್ನು ಪೂರೈಸುತ್ತಿರುವುದು ಸಖೇದಾಶ್ಚರ್ಯ ಎಂದು ಮಾಜಿ ಸಚಿವ ಶಾಸಕ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅಭಿಪ್ರಾಯವ್ಯಕ್ತಪಡಿಸಿದರು.

   ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಗಜಾನನ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಬ್ಯಾಂಕಿನ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಸಹಕಾರಿ ಬ್ಯಾಂಕುಗಳು ರಾಷ್ಟ್ರೀಕೃತ ಬ್ಯಾಂಕುಗಳಿಗಿಂತಲೂ ಬಲಿಷ್ಟವಾಗಿವೆ, ಆದರೆ ಪ್ರಾಮಾಣಿಕತೆಯನ್ನು ಪ್ರಶ್ನೆ ಎದುರುಸುತ್ತಿರುವ ಕೆಲ ಬ್ಯಾಂಕಗಳನ್ನು ಹೊರತುಪಡಿಸಿ ಆಥರ್ಿಕವಾಗಿ ನಷ್ಟ ಅನುಭವಿಸಿದ್ದನ್ನು ಬಿಟ್ಟರೇ ಇನ್ನುಳಿದಂತೆ ಬಹುತೇಕ ಸಹಕಾರಿ ಬ್ಯಾಂಕ್ಗಳು ಆಥರ್ಿಕವಾಗಿ ಬಲಿಷ್ಠವಾಗಿವೆ ಎಂದರು.

     ಮಹಾರಾಷ್ಟ್ರ ಮಾದರಿಯಲ್ಲಿ ಸಹಕಾರಿ ವ್ಯವಸ್ಥೆ:ನೆರೆಯ ಮಹಾರಾಷ್ಟ್ರದಲ್ಲಿ ಸಹಕಾರಿ ವ್ಯವಸ್ಥೆ ಅತ್ಯಂತ ಬಲಿಷ್ಟವಾಗಿ ಬೆಳದಿದೆ, ಒಂದು ಲಾರಿ ಟ್ರಾನ್ಸಪೋರ್ಟ ಕಂಪನಿಗಳು ಕೂಡ ಸಹಕಾರಿ ತತ್ವದಡಿ ಕಾರ್ಯ ನಿರ್ವಹಿಸುತ್ತಿವೆ, ಅಲ್ಲಿನ ಸಹಕಾರಿ ಬ್ಯಾಂಕುಗಳು ಕಬ್ಬಿನ ಬೆಳೆ ಪ್ರತಿ ಎಕರೆಗೆ ರೂ.1.5 ಲಕ್ಷದಷ್ಟು ರೈತರಿಗೆ ಹಣಕಾಸಿನ ನೆರವು ನೀಡುತ್ತಿರುವ ಉದಾಹರಣೆಗಳಿವೆ, ಹೀಗಾಗಿ ಮಹಾರಾಷ್ಟ್ರದಲ್ಲಿ ಸಾರ್ವಜನಿಕರು ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಸಕರ್ಾರದ ಎದುರು ಕೈಚಾಚುವಂತಹ ಸ್ಥಿತಿಯಲ್ಲಿಲ್ಲ ಎಂದರು.

ವಿಶ್ವಾಸ ಕಳೆದುಕೊಂಡರೆ ಅಸ್ತಿತ್ವಕ್ಕೆ ಧಕ್ಕೆ: ಕಾರ್ಯಕ್ರಮವನ್ನು ಉದ್ಘಾಟಿಸಿದ ತರಳಬಾಳು ಜಗದ್ಗುರು ಡಾ.ಶಿವಮೂತರ್ಿ ಶಿವಾಚಾರ್ಯಶ್ರೀಗಳು ಮಾತನಾಡಿ, ಸಹಕಾರಿ ಬ್ಯಾಂಕಗಳು ವಿಶ್ವಾಸವನ್ನು ಕಳೆದುಕೊಂಡರೇ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ, ಹುಟ್ಟಿದ ಅದೆಷ್ಟೋ ಬ್ಯಾಂಕ್ಗಳು ಗ್ರಾಹಕರಿಗೆ ಮೋಸವೆಸಗಿದ ಉದಾಹರಣೆಗಳಿವೆ ಹೀಗಾಗಿ ಜನರು ವಿಶ್ವಾಸವನ್ನು ಗಳಿಸಿಕೊಳ್ಳುವುದೂ ಕೂಡ ಸಹಕಾರಿ ಸಂಘಗಳಲ್ಲಿ ಹೆಚ್ಚು ಪ್ರಾಧಾನ್ಯತೆ ಪಡೆದುಕೊಳ್ಳಲಿದೆ ಎಂದರು.

  ಆಡಳಿತ ಮಂಡಳಿ ಕಾರ್ಯ ಶ್ಲಾಘನೀಯ: ರಾಜಕಾರಣದ ಒಳಸುಳಿಗೆ ಸಿಲುಕಿದ ಬಹಳಷ್ಟು ಆಡಳಿತ ಮಂಡಳಿಗಳು ನ್ಯಾಯಾಲಯಗಳ ಮೆಟ್ಟಿಲನ್ನೇರಿ ಕೋರ್ಟ ಕಟ್ಟೆಗಳನ್ನು ಕಾಯುತ್ತಿರುವುದನ್ನು ಸಾಕಷ್ಟು ನೋಡಿದ್ದೇವೆ, ಆಡಳಿತ ಮಂಡಳಿಯ ಪಾರದರ್ಶಕ ಮತ್ತು ಪ್ರಾಮಾಣಿಕ ಕಾರ್ಯ ವೈಖರಿಯಿಂದ ಬ್ಯಾಂಕ್ನ ಆಥರ್ಿಕ ಪ್ರಗತಿಗೆ ಕಾರಣವಾಗಿದೆ, ಬ್ಯಾಂಕ್ ಅಭಿವೃದ್ಧಿಯಾಗುವುದೆಂದರೇ ಇಲ್ಲಿನ ಜನರ ಆಥರ್ಿಕ ಸ್ಥಿತಿಗತಿಗಳು ಹೆಚ್ಚಾಗಿವೆ ಎಂದರ್ಧ ಹೀಗಾಗಿ ಆಡಳಿತ ಮಂಡಳಿಯ ಕಾರ್ಯ ಪ್ರಶಂಸನೀಯ ಎಂದರು.

 ಇದೇ ಸಂದರ್ಭದದಲ್ಲಿ ಬ್ಯಾಂಕಿನ ಹಿಂದಿನ ಆಡಳಿತ ಮಂಡಳಿಗೆ ಅಧ್ಯಕ್ಷರಿಗೆ ಹಾಗೂ ಹಿರಿಯ ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು, ಮತ್ತು ಶತಮಾನೋತ್ಸವದ ಅಂಗವಾಗಿ ಬ್ಯಾಂಕಿನ ಎಲ್ಲ ಸದಸ್ಯರಿಗೆ 10 ಗ್ರಾಮ ತೂಕದ ಬೆಳ್ಳಿ ನಾಣ್ಯಗಳನ್ನು ವಿತರಿಸಲಾಯಿತು. 

 ಬ್ಯಾಂಕ್ ಅಧ್ಯಕ್ಷ ಸುರೇಶಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು, ವೇದಿಕೆಯಲ್ಲಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಬಿ.ಸಿ.ಪಾಟೀಲ, ಮಾಜಿ ಶಾಸಕರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಪುರಸಭೆ ಅಧ್ಯಕ್ಷ ಬಿ.ಎಂ.ಛತ್ರದ, ನಿವೃತ್ತ ವ್ಯವಸ್ಥಾಪಕ ಎಂ.ಎನ್.ಪಾಟೀಲ, ಜೈವಿಕ ಇಂಧನ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ,  ಬ್ಯಾಂಕ ಮಾಜಿ ಅಧ್ಯಕ್ಷ ಉಮೇಶ ಬೆಟಗೇರಿ, ವರ್ತಕರಾದ ಜಗದೀಶಗೌಡ ಪಾಟೀಲ, ಜಯದೇವ ಕಬ್ಬೂರ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಬ್ಯಾಂಕ್ ಉಪಾಧ್ಯಕ್ಷ ಸಿ.ಆರ್.ಪಾಟೀಲ ಸ್ವಾಗತಿಸಿದರು, ಉಪನ್ಯಾಸಕ ಎಸ್.ವಿ.ಉಜ್ಜಯನಿಮಠ ನಿರೂಪಿಸಿದರು, ಶ್ರೀನಿವಾಸ ಬೆಟಗೇರಿ ವಂದಿಸಿದರು.