ನಿಪನಾಳ-ಕಟಕಬಾವಿ ರಸ್ತೆ ಕಾಮಗಾರಿಗಳಿಗೆ ಚಾಲನೆ
ರಾಯಬಾಗ 22 : ಮತಕ್ಷೇತ್ರದ ಎಲ್ಲ ಪ್ರಮುಖ ರಸ್ತೆಗಳನ್ನು ಸುಧಾರಿಸುವುದರಿಂದ ರೈತರಿಗೆ ಮತ್ತು ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ ಆಗಲಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು. ಲೋಕೋಪಯೋಗಿ ಇಲಾಖೆಯಿಂದ ತಾಲೂಕಿನ ನಿಪನಾಳ ಗ್ರಾಮದಲ್ಲಿ 1 ಕೋಟಿ 50 ಲಕ್ಷ ರೂ. ಅನುದಾನದಲ್ಲಿ ನಿಪನಾಳ-ಕಟಕಬಾವಿ ರಸ್ತೆ ಸುಧಾರಣೆ ಕಾಮಗಾರಿ ಹಾಗೂ ಮಂಟೂರ ಗ್ರಾಮದಲ್ಲಿ 1 ಕೋಟಿ 50 ಲಕ್ಷ ರೂ. ಅನುದಾನದಲ್ಲಿ ಅರಭಾಂವಿ-ಮಂಟೂರ-ದಂಡಾಪೂರ ರಸ್ತೆ ಸುಧಾಣೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಹೇಳಿದರು. ರಾಯಬಾಗ ಮತಕ್ಷೇತ್ರದಲ್ಲಿ ಏತ ನೀರಾವರಿ ಯೋಜನೆಗಳನ್ನು ಶೀಘ್ರವಾಗಿ ಜಾರಿಗೊಳಿಸಲು ಅಧಿವೇಶದಲ್ಲಿ ಸಚಿವರ ಗಮನ ಸೆಳೆದು ಒತ್ತಡ ಹಾಕಿರುವುದಾಗಿ ತಿಳಿಸಿದರು. ಕಾಂಗ್ರೇಸ್ ನೇತೃತ್ವದರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡದೇ ಇರುವುದರಿಂದ ರಾಯಬಾಗ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಎಇಇ ಆರ್.ಬಿ.ಮನವಡ್ಡರ, ಎಇ ಶ್ರೀಧರ ಮೇಗಳಮನಿ, ಸದಾಶಿವ ಘೋರೆ್ಡ, ನಿಂಗಪ್ಪ ಪಕಾಂಡಿ, ಅಪ್ಪಾಸಾಬ ಬ್ಯಾಕೂಡ, ತುಕಾರಾಮ ಪೂಜಾರಿ, ರಾಜು ಹಳಬರ, ರಾವಸಾಬ ದೇಸಾಯಿ, ಸಂಜುಕುರಣೆ, ಗೋವಿಂದದೇಸಾಯಿ, ದುಂಡಪ್ಪ ಪಾಟೀಲ, ರೇವಪ್ಪ ಮುಗಳಿ, ಸದಾನಂದ ಪಾಟೀಲ, ಬಸಲಿಂಗ ಕಾಡೇಶಗೊಳ, ಬಾಳಪ್ಪ ಕುರಬೆಟ್ಟ, ಶಂಕರಕುರಬೆಟ್ಟ, ಶಿವಾಜಿ ಜಟದಾರ, ಸತ್ಯಪ್ಪ ನಂದಿ ಸೇರಿದಂತೆ ಅನೇಕರು ಇದ್ದರು.