ನಿಜಶರಣ ಅಂಬಿಗರ ಚೌಡಯ್ಯ ಜಯಂತಿ
Nijasharan Ambigara Chowdaiah Jayanti
ಉಗರಗೋಳ 21: ಅಜ್ಞಾನದ ಅಂಧಕಾರವನ್ನು ಕಳೆದು, ಸುಜ್ಞಾನದ ಬೆಳಕಿನತ್ತ ಸಾಗುವಂತೆ ಮಾಡಿ, ಆಧ್ಯಾತ್ಮದ ನಿಜ ತಿರುಳನ್ನು ಮಾನವ ಕುಲಕ್ಕೆ ಸರಳವಾಗಿ ಮುಟ್ಟುವಂತೆ ದೇಶಾಂಧ್ಯಂತ ಸಾರಿದವರು ಶ್ರೀ ಅಂಬಿಗರ ಚೌಡಯ್ಯನವರು ಎಂದು ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯಧರ್ಶಿ ನಾಗರತ್ನಾ ಚೋಳಿನ ಹೇಳಿದರು. ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಬುಧವಾರ ಹಮ್ಮಕೊಂಡ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.
ಬಸವಣ್ಣನವರ ಅನುಯಾಯಿಗಳಲ್ಲಿ ಅಂಬಿಗರ ಚೌಡಯ್ಯನವರು ಪ್ರಮುಖರು. ಅವರ ವಚನಗಳಲ್ಲಿ ಜೀವನದ ಸಾರವೇ ಅಡಗಿದೆ. ಅಂಬಿಗರ ಚೌಡಯ್ಯನವರು ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ಸಮಾನತೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಸ್ಮರಿಸಿದರು.
ಶೀತಲ ಕಡಟ್ಟಿ, ಆರ್ ಎಚ್ ಸವದತ್ತಿ, ಸಿ ಎನ್ ಕುಲಕರ್ಣಿ, ಶ್ರೀಮತಿ ಎನ್ ಎಮ್ ಮುದಗೌಡ್ರ, ಶಿದ್ದನೌಡ ಪಾಟೀಲ, ವ್ಹಿ ಪಿ ಸೋನ್ನದ, ಪ್ರಭು ಹಂಜಗಿ, ವ್ಹಿ ಆರ್ ನೀಲಗುಂದ, ಜಗದೀಶ ರೇವಣ್ಣವರ, ಮೌಳೇಶ ಸುಣಗಾರ, ಫಕ್ಕೀರ ಅಂಬಿಗೆರ, ಅಶೋಕ ಬದಾಮಿ, ಬಸವರಾಜ ಬಾರ್ಕಿ, ಅನೀಲ ಗುಡಿಮನಿ, ಎಮ್ ದ್ಯಾಮನಗೌಡ್ರ, ಪಂಡಿತ ಪಿ ರಾಜಶೇಖರಯ್ಯ, ಚಂದ್ರು ಹಿರೇಕೆಂಚನ್ನವರ, ಮಾಂತೇಶ ಕಗದಾಳ, ಗೊವಿಂದರಾವ್ ಕುಲಕರ್ಣಿ, ಪೊಲೀಸ್ ಇಲಾಖೆಯ ಎಸ್ ಎಮ್ ಬೆಟಗೇರ, ಬಾಳೇಶ ಶೇಟ್ಟಪ್ಪವನವರ ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 