ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ
Nijasharan Ambigara Choudaiah's birth anniversary celebration
ತಾಳಿಕೋಟಿ 21: ಪಟ್ಟಣದ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಶ್ರೇಷ್ಠ ವಚನಕಾರಾರದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಆಚರಣೆ ಮಾಡಲಾಯಿತು ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ.ಎಸ್.ಎಂ.ಸಜ್ಜನ ಅವರು 12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಜನಿಸಿದ ಮಹಾನ್ ಶರಣ ಹಾಗೂ ವಚನಕಾರರು. ಅವರು ಬಸವಣ್ಣನವರ ನೇತೃತ್ವದ ವಚನ ಚಳವಳಿಯ ಪ್ರಮುಖ ಶರಣರಲ್ಲೊಬ್ಬರು. ಸಮಾಜದಲ್ಲಿ ಶೋಷಿತ ವರ್ಗದ ಧ್ವನಿಯಾಗಿ ಅವರು ಪ್ರಸಿದ್ಧರಾಗಿದ್ದಾರೆ. ಅಂಬಿಗ ವೃತ್ತಿಯವರಾಗಿದ್ದ ಕಾರಣ ಅವರಿಗೆ ಅಂಬಿಗರ ಚೌಡಯ್ಯ ಎಂಬ ಹೆಸರು ಬಂದಿತು. ದುಡಿಯುವ ಶ್ರಮಿಕನಾಗಿ ಜೀವನ ನಡೆಸಿದ ಅವರು, ಶ್ರಮವೇ ಪೂಜೆ ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರು. ಸಮಾಜದಲ್ಲಿದ್ದ ಜಾತಿಭೇದ, ಅಸಮಾನತೆ, ದಬ್ಬಾಳಿಕೆಗಳ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತಿದರು. ಅವರ ವಚನಗಳಲ್ಲಿ ಸರಳತೆ, ಸತ್ಯ ಮತ್ತು ಕಠಿಣ ಸಾಮಾಜಿಕ ಪ್ರಶ್ನೆಗಳು ಸ್ಪಷ್ಟವಾಗಿ ಕಾಣಿಸುತ್ತವೆ.
ಮೇಲ್ವರ್ಗದ ಅಹಂಕಾರ, ಸುಳ್ಳು ಆಚರಣೆಗಳು ಮತ್ತು ಅಂಧನಂಬಿಕೆಗಳನ್ನು ಅವರು ತೀವ್ರವಾಗಿ ಖಂಡಿಸಿದರು. ಕಾಯಕ, ದಾಸೋಹ ಮತ್ತು ಭಕ್ತಿ ಎಂಬ ಲಿಂಗಾಯತ ತತ್ವಗಳನ್ನು ತಮ್ಮ ವಚನಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸಿದರು. ಜನಸಾಮಾನ್ಯರ ಪ್ರತಿನಿಧಿಯಾಗಿ ಕೆಳವರ್ಗದ ಜನರ ನೋವು-ನಲಿವುಗಳನ್ನು ವಚನಗಳಲ್ಲಿ ಪ್ರತಿಬಿಂಬಿಸಿ, ಜನಸಾಮಾನ್ಯರ ಹೃದಯಕ್ಕೆ ಹತ್ತಿರರಾದರು. ನಾವು ಎಲ್ಲರೂ ಕೂಡಾ ಶರಣರಂತೆ ಸರಳ ಜೀವನ ನಡೆಸಿ ಸನ್ಮಾರ್ಗವನ್ನು ಕಂಡುಕೊಳ್ಳೋಣ ಎಂದು ಹೇಳಿದರು. ಈ ಸಮಯದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಿ.ಜಿ.ಸಜ್ಜನ, ಶ್ರೀಮತಿ ಆರ್.ಎಸ್.ದೇಸಾಯಿ, ದೈಹಿಕ ಶಿಕ್ಷಕ ಶಿವಾನಂದ ಸುಣಧೋಳಿ, ಸಿಬಿಎಸ್‌ಇ ಪ್ರಾಚಾರ್ಯ ಜಯಚಂದ್ರ, ಬಿಎಡ್ ಕಾಲೇಜ್ ಪ್ರಾಚಾರ್ಯ ಶ್ರೀ ಟಿ.ವ್ಹಿ ಶೆಟ್ಟಿ, ಶ್ರೀಮತಿ ಜಿ.ಎನ್.ಪಾಟೀಲ, ಸರ್ವ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿರೂಪಣೆ ಕಲ್ಮೇಶ ಸರ್ ನಡೆಸಿಕೊಟ್ಟರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 