ನಿಡಸೋಶಿ ರಸ್ತೆ ಅಗಲೀಕರಣ ಕಾರ್ಯ ಶೀಘ್ರದಲ್ಲಿ ಜರುಗುವುದು- ಗಜಾನನ ಕ್ವಳ್ಳಿ
Nidsoshi Road widening work to be done soon - Gajanana Kvalli
ವರದಿ ಎಂ.ಬಿ. ಘಸ್ತಿ
ಸಂಕೇಶ್ವರ 11: ನಿಡಸೋಶಿ ರಸ್ತೆಯ ಪಂಚಾಚಾರ್ಯ ಶಾಲೆಯಿಂದ ಸಂಕೇಶ್ವರ ಬಸ್ ನಿಲ್ದಾಣ ಹತ್ತಿರ ಕಮಾನ ಗೇಟದ ವರೆಗೆ ರಸ್ತೆ ಅಗಲೀಕರಣ ಕಾರ್ಯ ಬೇಗನೆ ಆಗಬೇಕೆಂದು ಸರ್ವ ಪಕ್ಷದ ಧುರೀಣರು ಸೇರಿ ಹುಕ್ಕೇರಿಯ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು, ಇದೆ ಸಂದರ್ಭದಲ್ಲಿ ಹಿರಿಯ ನಾಗರೀಕರಾದ ಗಜಾನನ ನಿಂಗಪ್ಪಾ ಕ್ವಳ್ಳಿಯವರು ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾತನಾಡುತ್ತಾ ಮುಸ್ಲಿಂ ಸಮಾಜದ ಸುನ್ನತ ಜಮಾತರವರು ತಮ್ಮ ಸ್ಮಶಾನಭೂಮಿಗೆ ತಮ್ಮ ಸಮಾಜದ ಗೋರಿಗಳಿಗೆ ರಕ್ಷಣೆಗೆಂದು ತಡೇಗೋಡೆ ನಿರ್ಮಿಸಲಾಗಿದ್ದು ಎಂದು ಮುಸ್ಲಿಂ ಬಾಂಧವರ ಮನವಿಯಲ್ಲಿ ಉಲ್ಲೇಖಿಸಲಾಗಿದೆ,
ತಾವು ಈ ಗೋಡೆಯ ತೆಗೆಯಬೇಕೆಂದು ಸಾರ್ವಜನಿಕರು ಮತ್ತು ರಸ್ತೆಯ ಅಗಲೀಕರಣಕ್ಕೆ ತಾವು ಸಹಕರಿಸಬೇಕೆಂದು ಸಾರ್ವಜನಿಕರು ತಹಶೀಲ್ದಾರ ಮನವಿಯಲ್ಲಿ ತಿಳಿದುಬಂದಿದೆ, ಅಗಲಿಕರಣ ಸಮಯದಲ್ಲಿ ತಡೆಗೋಡೆಯನ್ನು ಶುಕ್ರವಾರದ ಒಳಗೆ ತೆಗೆಯದೆ ಇಲ್ಲವಾದಲ್ಲಿ ತಾವು ಜೆಸಿಬಿ ಮಶಿನನಿಂದ ಗೋಡೆಯನ್ನು ತೆರವು ಮಾಡಲಾಗುವುದು ಎಂದು ಗಜಾಜನ ಕ್ವಳ್ಳಿಯವರು ಕಡಕ್ ಎಚ್ಚರಿಕೆ ನೀಡಿದ್ದಾರೆ. ಮುಸ್ಲಿಂ ಬಾಂಧವರು ತಮ್ಮ ಪ್ರಾರ್ಥನಾ ಮಂದಿರದಲ್ಲಿ ಜನತೆ ಸೇರಿದ್ದರು, ಈ ರಸ್ತೆ ಅಗಲೀಕರಣದಲ್ಲಿ ಸಾರ್ವಜನಿಕರಿಂದ ಗಲಭೆಯಾಗಬಾರದೆಂದು ಪೋಲಿಸರು ಮುಂಜಾಗ್ರತೆ ಕ್ರಮ ಕೈಗೊಂಡಿದ್ದರು ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲವೆಂದು ಪೋಲಿಸ್ ಮೂಲಗಳಿಂದ ತಿಳಿದು ಬಂದಿದೆ,
ಮುಸ್ಲಿಂ ಸಮಾಜದ ಕಮೀಟಿಯವರ ರಿ.ಸ.ನಂ. 258 ರಲ್ಲಿ 2 ಎಕರೆ 38 ಗುಂಟೆ ಕ್ಷೇತ್ರದಲ್ಲಿ ಪಿಡಬ್ಲೂಡಿ ರೋಡ ಹಾದು ಹೋಗಿದ್ದು ಸದರಿ ರೋಡ ಸಲುವಾಗಿ 36 ಗುಂಟೆ ಜಮೀನು ರಸ್ತೆಯಲ್ಲಿ ಹೋಗಿರುತ್ತದೆಂದು ಮುಸ್ಲಿಂ ಬಾಂಧವರು ತಹಶೀಲ್ದಾರಿಗೆ ಮನವಿಯಲ್ಲಿ ಉಲ್ಲೇಖಿಸಿದ್ದಾರೆ ತಿಳಿದುಬಂದಿದೆ, ಹುಕ್ಕೇರಿಯ ಪಿಡಬ್ಲೂಡಿ ಇಂಜಿನಿಯರ ಲೇಓಟ ತಪ್ಪಾಗಿದೆ ಎಂದು ಸಾರ್ವಜನಿಕರಿಗೆ ತಿಳಿಸಿದಲ್ಲದೇ ಜನತೆಯನ್ನು ಜನಜಂಗುಳಿಯನ್ನು ನೋಡಿ ಗಾಬರಿಗೊಂಡು ಅಧಿಕಾರಿ ಪಲಾಯನಗೊಂಡರು, ಈ ರಸ್ತೆ ಅಗಲೀಕರಣದ ಪ್ರತಿಭಟನೆ ಕಾರ್ಯದಲ್ಲಿ ಅಮರ ನಲವಡೆ, ಬಂಡು ಹತನೂರೆ, ಸುನೀಲ ಪರ್ವತರಾವ, ನಂದು ಮುಡಸಿ, ದೀಪಕ ಭಿಸೆ, ದವಡತೆ, ರಾಜು ಬಾಂಬರೆ, ಪಿಂಟೂ ಪರೀಟ, ರೋಹನ ನೇಸರಿ, ದಯಾನಂದ ಲಟ್ಟಿ, ಅಜಿತ ವಾಳಕಿ, ಬಸವರಾಜ ನಾಗರಾಳಿ, ಬಸವಣ್ಣಿ ಲಟ್ಟಿ, ಪ್ರಮೋದ ಹೊಸಮನಿ, ಮಹೇಶ ಹಟ್ಟಿಹೊಳಿ, ಸುನೀಲ ಸಪಾಟೆ, ರಾಜು ಸಾನೆ, ಕಿಟ್ಟು ಶಹಾ, ದೇವರಾಜ ಭೋಸಲೆ, ಜಯು ಸಾವಂತ, ಕುಮಾರ ಸಂಸುದ್ದಿ, ಅಮಿತ ನಾಯಿಕ, ಸಂದೀಪ ಗಂಜಿ, ದತ್ತಾ ಥೋರವತ, ವಿಕ್ರಮ ಜಾಧವ ಮುಂತಾದವರು ಪ್ರತಿಭಟೆನೆ ವೇಳೆಯಲ್ಲಿ ಹಾಜರರಿದ್ದರು.
ಈ ರಸ್ತೆಯ ಅಗಲೀಕರಣದ ಕಾಮಗಾರಿಯು ಗುತ್ತಿಗೆದಾರ ಮಲ್ಲಪ್ಪಾ ಬಿಸಿರೊಟ್ಟಿಯವರು ಇವರು ತೆಗೆದುಕೊಂಡಿದ್ದರು. ಸ್ಥಳೀಯ ಪೋಲಿಸ ಸರ್ಕಲ್ ಪೋಲಿಸ್ ಇನ್ಸಪೆಕ್ಟರ ಶಿವಶರಣ ಅವಜಿಯವರು ಪೋಲಿಸ್ ಬಿಗಿ ಬಂದೋಬಸ್ತ ಏರಿ್ಡಸಿದ್ದರು. ಹುಕ್ಕೇರಿಯ ತಹಶೀಲ್ದಾರರು ಹಾಗೂ ಸಂಕೇಶ್ವರ ಪೋಲಿಸ್ ಅಧಿಕಾರಿಗಳು ರಸ್ತೆಯ ಅಗಲೀಕರಣ ಸಂಬಂಧಿಸಿದ ಎರಡು ಗುಂಪುಗಳ ಮಧ್ಯ ಪ್ರವೇಶಿಸಿ ಕಾನೂನು ಸುವ್ಯವಸ್ಥೆ ಶಾಂತಿ ಕಾಪಾಡಿಕೊಳ್ಳಬೇಕೆಂದು ಹೇಳಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ತಮ್ಮ ಮೇಲಾಧೀಕಾರಿಗಳಿಗೆ ಸಹ ಈ ರಸ್ತೆ ಅಗಲೀಕರಣದ ಸಮಸ್ಯೆಯ ಬಗ್ಗೆ ಮಾತನಾಡಿ ಬೇಗನೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತೇವೆಂದು ಬೆಳಗಾವಿ ಅಸಿಸ್ಟಂಟ ಕಮೀಶನರ ನಾಯಿಕ ಹಾಗೂ ತಹಶೀಲ್ದಾರ ಹುಕ್ಕೇರಿ ಈ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 