ಕುಮ್ಮೂರು ಗ್ರಾಮದಲ್ಲಿ ನೂತನ ಪಶು ಚಿಕಿತ್ಸಾಲಯ ಉದ್ಘಾಟನೆ
New veterinary clinic inaugurated in Kummur village
ಕುಮ್ಮೂರು ಗ್ರಾಮದಲ್ಲಿ ನೂತನ ಪಶು ಚಿಕಿತ್ಸಾಲಯ ಉದ್ಘಾಟನೆ
ಬ್ಯಾಡಗಿ. 07 : ತಾಲೂಕಿನ ಕುಮ್ಮೂರು ಗ್ರಾಮದಲ್ಲಿ ಇಂದು ನೂತನ ಪಶು ಚಿಕಿತ್ಸಾಲೆಯನ್ನು ಶಾಸಕ ಬಸವರಾಜ್ ಶಿವಣ್ಣನವರ್ ಉದ್ಘಾಟಿಸಿದರು ಬಳಿಕ ಮಾತನಾಡಿದವರು ನಾನು ಕಳೆದ ಬಾರಿ ಶಾಸಕನಾಗಿದ್ದಾಗಿಂದ ಗ್ರಾಮಸ್ಥರ ಬೇಡಿಕೆ ಪಶು ಆಸ್ಪತ್ರೆಯ ಮಾಡಿಸಿಕೊಡುವಂತೆ ಬೇಡಿಕೆ ಇಟ್ಟಿದ್ದರು ಸತತವಾಗಿ ಪ್ರಯತ್ನದಿಂದ ಮತ್ತೆ ಈ ಬಾರಿ ಶಾಸಕನಾಗಿ ಅವರ ಬೇಡಿಕೆಯನ್ನು ಇಂದು ಈಡೇರಿಸಿದ್ದೇನೆ ಎಂದು ಹೇಳಿದರು.
ರಾಜ್ಯ ಸರಕಾರ ಕೃಷಿ ಹಾಗೂ ಹೈನುಗಾರಿಕೆಗೆ ವಿಶೇಷ ಆದ್ಯತೆ ನೀಡುತ್ತಾ ಬಂದಿದೆ. ರಾಜ್ಯದಲ್ಲಿ ಈಗ ಹೈನುಗಾರಿಕೆ ಲಾಭದಾಯಕ ಉದ್ಯಮವಾಗಿದೆ. ಒಬ್ಬ ವೈದ್ಯರು ಮತ್ತು ಇಬ್ಬರು ಸಿಬ್ಬಂದಿಯಿದ್ದಾರೆ. ದೂರುಗಳು ಬಾರದ ರೀತಿಯಲ್ಲಿ ಜನಪರ ಕೆಲಸಗಳನ್ನು ಮಾಡಬೇಕಿದೆ. ಜಿಲ್ಲಾ ಪಶುಸಂಗೋಪನೆ ಕೇಂದ್ರಕ್ಕೆ ಇನ್ನೂ ಹಲವು ಸಿಬ್ಬಂದಿಯ ಅಗತ್ಯವಿದೆ. ರಾಜ್ಯದ ಪಶು ಚಿಕಿತ್ಸಾಲಯಗಳಲ್ಲಿರುವ ವೈದ್ಯರ ಕೊರತೆ ಬಗ್ಗೆ ಈಗಾಗಲೇ ಸರಕಾರದ ಗಮನಸೆಳೆಯಲಾಗಿದೆ.
ಪಶು ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದರು. ರೈತರು ತಮ್ಮ ಜಾನುವಾರುಗಳನ್ನು ಪಶು ಆಸ್ಪತ್ರೆಗೆ ಕೊಂಡೊಯ್ಯುವ ಅಗತ್ಯವಿಲ್ಲ ಈಗಾಗಲೇ ಸರ್ಕಾರವು ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯವಾಣಿ 1962 ಕ್ಕೆ ಕರೆ ಮಾಡಿದರೆ ಸಾಕು ಜಾನುವಾರು ಎಲ್ಲಿ ಇರುತ್ತದೆ ಅಲ್ಲಿ ಪಶು ಇಲಾಖೆಯ ವಾಹನವು ಸಂಚಾರಿ ಚಿಕಿತ್ಸಾಲಯ ವಾಹನವು ಮನೆಬಾಗಿಲಿಗೆ ಬರಲಿದೆ ಅದರಲ್ಲಿ ಪಶು ವೈದ್ಯರು ತಜ್ಞ ಸಿಬ್ಬಂದಿ ಉಪಕರಣ ಓಷಧಿ ಹೊತ್ತು ಅಲ್ಲಿಯೇ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಕಾರಣ ಪ್ರತಿಯೊಬ್ಬರೂ ಇದರ ಸಪಯೋಗ ತೆಗೆದುಕೊಳ್ಳಬೇಕು ಎಂದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 