ಬೀದಿ ನಾಯಿಗಳ ನೂತನ ಸಂತಾನ ಹರಣ ಚಿಕಿತ್ಸಾ ಘಟಕ ಚಾಲನೆ

ಬೀದಿ ನಾಯಿಗಳ ನೂತನ ಸಂತಾನ ಹರಣ ಚಿಕಿತ್ಸಾ ಘಟಕ ಚಾಲನೆ  New sterilization treatment unit for stray dogs inaugurated

                             ಬ್ಯಾಡಗಿ 13 : ಭೂಮಿಯ ಮೇಲೆ ಮನುಷ್ಯನಷ್ಟೇ ಬದುಕುವ ಹಕ್ಕು ಬೇರೆ ಪ್ರಾಣಿಗಳಿಗಿದೆ ಮನುಷ್ಯ ತನ್ನ ಸ್ವಾರ್ಥ ದುರಾಸೆಯಿಂದಾಗಿ ಪ್ರಕೃತಿಯ ಸಮತೋಲನವನ್ನು ತಲೆ ಕೆಳಗಾಗಿ ಸುತ್ತಿದ್ದಾನೆ ಬೀದಿ ನಾಯಿಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮುಂದಾಗುತ್ತಿದ್ದಾರೆ ಅನುಭವಿಸಿದರ ಬಗ್ಗೆ ನನಗೆ ಕಾಳಜಿ ಇದೆ ಆದರೆ ಅದರಿಂದಾಗಿ ಮೂಕ ಪ್ರಾಣಿಗಳ ಮೇಲೆ ಸವಾರಿ ಸರಿಯಾದದ್ದಲ್ಲ ಪ್ರಾಣಿಗಳ ಜೀವನದ ಬಗ್ಗೆ ಸರಿಯಾಗಿ ಅರ್ಥ ಅವುಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕೆಂದು ಪ್ರಾಣಿ ದಯಾ ಸಂಘದ ಅಧ್ಯಕ್ಷ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ್ ಅಭಿಪ್ರಾಯ ಪಟ್ಟರು. ಪಟ್ಟಣದ ತೆರೆದ ಹಳ್ಳಿಯ ರಸ್ತೆಯಲ್ಲಿರುವ ಯುಜಿಡಿ ಘಟಕದಲ್ಲಿ ನೂತನ ವಿಧಿ ನಾಯಿಗಳ ಸಂತಾನ ಹರಣ ಚಿಕಿತ್ಸಾ ಘಟಕ ಉದ್ಘಾಟನೆ ಮಾಡಿ ಮಾತನಾಡಿದವರು.

                            ಪ್ರತಿಯೊಂದು ಜೀವಿಗೂ ಬದುಕು ಹಾಕಿದೆ ಇನ್ನು ಈ ನಾಯಿಗಳು ನಮಗೆ ನೆಮ್ಮದಿ ನೀಡುವ ಜೀವಿಗಳು ನೋವಿನಲ್ಲಿರುವ ಅಸಂಖ್ಯಾತ ಜನರಿಗೆ ಇವು ನೆರವಾಗಿವೆ ಮತ್ತು ಅವುಗಳನ್ನು ನಾವು ಮನುಷ್ಯರಂತೆ ನೋಡಿಕೊಳ್ಳುವುದು ಅವಶ್ಯಕತೆ ಇದೆ ಎಂದು ಹೇಳಿದರು. ಪುರಸಭೆ ಮುಖ್ಯ ಅಧಿಕಾರಿ ವಿನಯ್ ಕುಮಾರ್ ಹೊಳೆಯಪ್ಪ ಗೋಳ ಮಾತನಾಡಿ ಮಾನ್ಯ ಸರ್ವೋಚ್ಚ ನ್ಯಾಯಾಲಯ ಪ್ರಾಣಿ ಕಲ್ಯಾಣ ಮಂಡಳಿ ಹಾಗೂ ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ನಿರ್ದೇಶಕರ ನಿರ್ದೇಶನದಂತೆ ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸಾ ಘಟಕವನ್ನು ಕಳೆದ ಬಾರಿ ರಾಮ ಗುಂಡೇನಹಳ್ಳಿ ಹತ್ತಿರ ಕಸದ ಡಂಪಿಂಗ್ ಯಾರ್ಡನಲ್ಲಿ ಸಂತಾನ ಹರಣ ಚಿಕಿತ್ಸಾ ಘಟಕವನ್ನು ಮಾಡಿದ್ದೇವು ಆದರೆ ಪ್ರಸಕ್ತ ಸಾಲಿನಲ್ಲಿ ತೆರೆದಳ್ಳಿ ರಸ್ತೆಯಲ್ಲಿರುವ ಯುಜಿಡಿ ಘಟಕದಲ್ಲಿ ಸಂತಾನ ಹರಣ ಚಿಕಿತ್ಸಾ ಘಟಕವನ್ನು ಸ್ಥಾಪಿಸಿದ್ದೇವೆ ಪ್ರತಿ ದಿನ ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ಬೀದಿ ನಾಯಿಗಳನ್ನು ಹಿಡಿದು ಶತ್ರು ಚಿಕಿತ್ಸೆಗೆ ತರಲಾಗುತ್ತದೆ ಪಟ್ಟಣದ ವ್ಯಾಪ್ತಿಯಲ್ಲಿ ಹೆಚ್ಚು ನಾಯಿಗಳು ಇದ್ದು ಅಂದಾಜು 300 ನಾಯಿಗಳನ್ನು ಶಸ್ತ್ರಚಿಕಿಸೆ ಮಾಡಿಸುವ ಗುರಿ ಹೊಂದಲಾಗಿದೆ ಎಂದರು.ಅನಿಮಲ್ ವೆಲ್ಫೇರ್ ಅಂಡ್ ಆಂಟಿ ಹರಸ್ಮಂಟ ಸೊಸೈಟಿ ಎಂ ಜಿ ಓ ಸಂಸ್ಥೆಯವರು ಈ ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸಾ ಶಿಬಿರವನ್ನು ನಡೆಸುತ್ತಿದ್ದಾರೆ.ಕಾರ್ಯಕ್ರಮದಲ್ಲಿ ತಾಲೂಕು ಪಶುವೈದ್ಯಾಧಿಕಾರಿ ನೀಲಕಂಠಪ್ಪ ಅಂಗಡಿ, ತಾಲೂಕ ಆರೋಗ್ಯ ಅಧಿಕಾರಿ ಡಾಕ್ಟರ್ ಕಾಂತೇಶ್ ಭಜಂತ್ರಿ. ಪುರಸಭೆಯ ಸಿಬ್ಬಂದಿ ಚನ್ನಪ್ಪ ಅಂಗಡಿ, ಮಾಲತೇಶ ಹಳ್ಳಿ ಹಾಗೂ ಪುರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.