ಬ್ರಹ್ಮ ಕುಮಾರಿ ಯೋಗಿನಿ ಜಿಲ್ಲಾ ಕಾರಾಗೃಹದಲ್ಲಿ ಹೊಸ ವರ್ಷ ಕಾರ್ಯಕ್ರಮ ಆಚರಣೆ
New Year program celebration at Brahma Kumari Yogini District Jail
ಕೊಪ್ಪಳ 02: ನವ ವರುಷದಲ್ಲಿ ನಿತ್ಯ ಹರುಷ ನಮ್ಮದಾಗಿಸಿಕೊಳ್ಳೋಣ. ನವ ಉತ್ಸಾಹ ನವಸಂಕಲ್ಪದಿಂದ ನವ ವರುಷ ಪ್ರಾರಂಭಿಸೋಣ ನಾವು ಸಂಕಲ್ಪ ಪರಿವರ್ತನೆ ಮಾಡಿಕೊಂಡಾಗ ಜೀವನ ಪರಿವರ್ತನೆಯಾಗುತ್ತದೆ ಎಂದು ಬ್ರಹ್ಮ ಕುಮಾರಿ ಯೋಗಿನಿ ಅಕ್ಕ ತಿಳಿಸಿದರು. ಜಿಲ್ಲಾ ಕಾರಾಗೃಹದಲ್ಲಿ ಏರಿ್ಡಸಿದ ಹೊಸ ವರ್ಷ ಕಾರ್ಯಕ್ರಮ ಆಚರಣೆಯನ್ನು ಉದ್ಘಾಟಿಸಿ ಕೈದಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಹಳೆಯ ವರ್ಷದಲ್ಲಿ ಆದ ತಪ್ಪಿನ ಅರಿವು ಮಾಡಿಕೊಂಡು ಆ ತಪ್ಪು ಹೊಸ ವರ್ಷದಲ್ಲಿ ಪುನಃ ಆಗದಂತೆ ತಮ್ಮ ಮೇಲೆ ತಾವೇ ಎಚ್ಚರವಹಿಸಿಕೊಳ್ಳಿ ಹೊಸ ವರ್ಷದಲ್ಲಿ ದಿನಕ್ಕೆ ಒಮ್ಮೆಯಾದರೂ ಶ್ರೇಷ್ಠ ಆಧ್ಯಾತ್ಮ ವಿಚಾರಗಳನ್ನು ಓದಿರಿ ಮತ್ತು ಕೇಳಿರಿ ನಮ್ಮ ವಿಚಾರಗಳು ಶ್ರೇಷ್ಠ ಆದರೆ ನಮ್ಮ ಮಾತು, ಕರ್ಮ, ನಡತೆ ಅಷ್ಟೇ ಅಲ್ಲ ನಮ್ಮ ಜೀವನವೇ ಶ್ರೇಷ್ಠ ಆಗುತ್ತದೆ.
ನಾನು ಕೈದಿ ಎನ್ನುವ ವಿಚಾರ ಬಿಟ್ಟು ನಾನು ಪರಮಾತ್ಮನ ಮಗು ಎನ್ನುವ ಶ್ರೇಷ್ಠ ಭಾವನೆ ಇರಲಿ ಪರಮಾತ್ಮನ ಕಾರ್ಯ ಶ್ರೇಷ್ಠಾತಿ ಶ್ರೇಷ್ಠ ಅವನ ಮಕ್ಕಳಾದ ನಾವು ಸಹ ಶ್ರೇಷ್ಠ ಕರ್ಮವನ್ನೇ ಮಾಡಬೇಕು. ಕೆಟ್ಟ ಕರ್ಮ ನಮಗೆ ದುಃಖ ಕೊಟ್ಟರೆ ಒಳ್ಳೆಯ ಕರ್ಮ ನಮಗೆ ಸುಖ ಕೊಟ್ಟೆ ಕೊಡುತ್ತದೆ ಎಂದು ಹೇಳುತ್ತಾ ಕೈದಿಗಳ ಮನಪರಿವರ್ತನೆಗೆ ಶ್ರೇಷ್ಠ ಚಿಂತನೆಯ ಕಡೆಗೆ ಕರೆದೊಯ್ದರು ಪ್ರತಿಯೊಬ್ಬ ಕೈದಿಯು ಸ್ವ ಪರಿವರ್ತನೆ ಆಗುವ ದೃಢ ಸಂಕಲ್ಪ ಮಾಡಿದರು ಇದೇ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ನವ ವರ್ಷ ಮತ್ತು ನವಯುಗದ ಶುಭಾಶಯ ತಿಳಿಸಿ ಆಧ್ಯಾತ್ಮ ಚಿಂತನೆ ಒಳಗೊಂಡ ಪಾಕೆಟ್ ಕ್ಯಾಲೆಂಡರನ್ನು ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಉಡುಗೊರೆಯಾಗಿ ನೀಡಿದರು ಜಿಲ್ಲಾ ಕಾರಾಗೃಹದ ಅಧಿಕ್ಷಕರಾದ ಅಮರೇಶ್ ಪೂಜಾರ್ ಮಾತನಾಡುತ್ತಾ ಜೀವನವನ್ನು ಪರಿವರ್ತನೆ ಮಾಡಿಕೊಳ್ಳಲು ಆಧ್ಯಾತ್ಮ ಚಿಂತನೆ ಅತ್ಯಗತ್ಯ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು. ವೇದಿಕೆಯ ಮೇಲೆ ಬಿಕೆ ಸ್ನೇಹಕ್ಕ ಮತ್ತು ಜಿಲ್ಲಾ ಕಾರಾಗೃಹದ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 