ನಗರಸಭೆ ನೂತನ ಅಧ್ಯಕ್ಷ ವಾಳೇನ್ನವರ ಪದಗ್ರಹಣ

ನಗರಸಭೆ ನೂತನ ಅಧ್ಯಕ್ಷ ವಾಳೇನ್ನವರ ಪದಗ್ರಹಣ  New Municipal Council President Valen takes oath

ನಗರಸಭೆ ನೂತನ ಅಧ್ಯಕ್ಷ ವಾಳೇನ್ನವರ ಪದಗ್ರಹಣ  

ಜಮಖಂಡಿ 05: ನಗರದ ಅಭಿವೃದ್ಧಿ ಹಾಗೂ ಇಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ಮಾಡುವದಾಗಿ ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು. 

ನಗರದಲ್ಲಿ ನಗರಸಭೆಯ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ನಮ್ಮದೇ ಸರ್ಕಾರ ಇರುವದರಿಂದ ನಗರಕ್ಕೆ ಬೇಕಾಗುವ ಮೂಲಭೂತ ಸೌಲಭ್ಯಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಬೇಕಾಗುವ ಅನುದಾನವನ್ನು ಸರ್ಕಾರದಿಂದ ತರಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ನಗರದ ಅಭಿವೃದ್ಧಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ಜರುಗಿಸಲಾಗುವದು, ನಗರಸಭೆಯ ಸಂಪನ್ಮೂಲ ಹಾಗೂ ಸರ್ಕಾರದಿಂದ ಬೇಕಾಗುವ ಹೆಚ್ಚುವರಿ ಅನುದಾನ ತರಿಸಿಕೊಂಡು ನಗರದ ಅಭಿವೃದ್ಧಿಗೆ ಕ್ರಮ ಜರುಗಿಸಲಾಗುವದು ಎಂದರು. 

ಉಳಿದಿರುವ ನಾಲ್ಕು ತಿಂಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಹಿರಿಯ ಸದಸ್ಯ ಈಶ್ವರ ವಾಳೆಣ್ಣವರ ಪದಗ್ರಹಣ ಮಾಡಿದ ಬಳಿಕ. ನಂತರ ಮಾತನಾಡಿದ ಅವರು, ನಗರಕ್ಕೆ ಕುಡಿಯುವ ನೀರು ಸರಬರಾಜು, ಸ್ವಚ್ಛತೆ ಹಾಗೂ ಬೀದೀದೀಪಗಳ ಅಳವಡಿಕೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡಲು ಪ್ರಥಮ ಆಧ್ಯತೆ ನೀಡಲಾಗುವುದು.ತಮ್ಮನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿರುವ ಸರ್ವ ಸದಸ್ಯರಿಗೆ ಹಾಗೂ ಕಾಂಗ್ರೆಸ್‌ನ ಮುಖಂಡರಿಗೆ ಧನ್ಯವಾದಗಳನ್ನು ತಿಳಿಸಿದ ಅವರು ಕಡಿಮೆ ಸಮಯ ವಿದ್ದರೂ ಉತ್ತಮ ಕೆಲಸಗಳನ್ನು ಮಾಡುತ್ತೇನೆ ಸಾರ್ವಜನಿಕರಿಗೆ ನಗರಸಭೆಯಿಂದ ದೊರೆಯಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು. 

ಕಾಂಗ್ರೆಸ್ ಮುಖಂಡರಾದ ಬಸವರಾಜ ನ್ಯಾಮಗೌಡ, ಮಹೇಶ ಕೋಳಿ, ಬಸವರಾಜ ಸಿಂಧೂರ, ಅರ್ಜುನ ದಳವಾಯಿ, ಪೌರಾಯುಕ್ತ ಜ್ಯೋತಿಗೀರೀಶ, ನಗರಸಭೆಯ ಸದಸ್ಯರು, ಸಿಬ್ಬಂದಿಗಳು ಇದ್ದರು.