42 ಲಕ್ಷ ರೂ. ವೆಚ್ಚದಲ್ಲಿ ಗ್ರಾಪಂ ನೂತನ ಕಟ್ಟಡ ಉದ್ಘಾಟನೆ
New Gram Panchayat building inaugurated at a cost of Rs. 42 lakh
42 ಲಕ್ಷ ರೂ. ವೆಚ್ಚದಲ್ಲಿ ಗ್ರಾಪಂ ನೂತನ ಕಟ್ಟಡ ಉದ್ಘಾಟನೆ
ಹಾನಗಲ್ 8: ಗ್ರಾಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸಬಲೀಕರಣಕ್ಕೆ ಸರ್ಕಾರ ಹೆಚ್ಚು ಶ್ರಮ ವಹಿಸಿದೆ. ಆಡಳಿತ ವಿಕೇಂದ್ರೀಕರಣದ ಮೂಲಕ ಸ್ಥಳೀಯ ಸಂಸ್ಥೆಗಳಿಗೆ ಶಕ್ತಿ ತುಂಬಿದ್ದು ಕಾಂಗ್ರೆಸ್ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ನರೇಗಲ್ ಗ್ರಾಮದಲ್ಲಿ ರೂ.42 ಲಕ್ಷ ವೆಚ್ಚದಲ್ಲಿ ಗ್ರಾಪಂ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ವಲಸೆ ತಡೆದು ಸ್ಥಳೀಯವಾಗಿ ದುಡಿಯುವ ಕೈಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಹಿಂದೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರಲಾಯಿತು. ಈ ಯೋಜನೆಯ ಜಾರಿಯಿಂದ ದುಡಿಯುವ ಕೈಗಳಿಗೂ ಕೆಲಸ ಸಿಗುತ್ತಿದೆ. ಗ್ರಾಮೀಣಾಭಿವೃದ್ಧಿಯ ಕನಸೂ ನನಸಾಗುತ್ತಿದೆ ಎಂದು ಹೇಳಿದ ಅವರು ಉದ್ಯೋಗ ಖಾತ್ರಿ ಯೋಜನೆಯಡಿ ಸಾಕಷ್ಟು ಅನುದಾನ ಲಭ್ಯವಿದೆ. ಸಮುದಾಯದ ಸಹಭಾಗಿತ್ವದೊಂದಿಗೆ ಅನುದಾನ ಸದ್ಭಳಕೆ ಮಾಡಿಕೊಂಡರೆ ಗ್ರಾಮವೂ ಅಭಿವೃದ್ಧಿ ಆಗಲಿದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಮಹ್ಮದಜಾಫರ್ ಮುಲ್ಲಾ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ಸಣ್ಣಪ್ಪನವರ, ಸದಸ್ಯರಾದ ಹುಸೇನಮಿಯಾ ಸವಣೂರ, ಬಾಷಾಸಾಬ ಗೌಂಡಿ, ಈರ್ಪ ಬೂದಿಹಾಳ, ಫಕ್ಕೀರ್ಪ ಅಗಸಿಬಾಗಿಲ, ಇಂದ್ರವ್ವ ಹರಿಜನ, ದ್ರಾಕ್ಷಾಯಣವ್ವ ಪರ್ಪನವರ, ರಮಿಜಾ ಹುಲಿ, ಗಾಯಿತ್ರಿ ಮರಿಲಿಂಗಣ್ಣನವರ, ಫಾತಿಮಾ ನರೇಗಲ್, ಮುಖಂಡರಾದ ಕಲವೀರ್ಪ ಪವಾಡಿ,ಎಂ.ಎ.ನೆಗಳೂರ, ಚಮನಸಾಬ ಪಠಾಣ, ಮಹಬಳೇಶ್ವರ ಸವಣೂರ, ಶಾಂತಪ್ಪ ಶೀಲವಂತರ, ಸುರೇಶ ತಹಶೀಲ್ದಾರ್, ಸುಲೇಮಾನ ಮುಲ್ಲಾ, ಗುತ್ತೆಪ್ಪ ಹರಿಜನ, ಮಹ್ಮದಗೌಸ್ ಆಡೂರ, ಸುರೇಶ ಮಾಚಾಪೂರ, ಬಸವರಾಜ ಬಾರ್ಕಿ, ರೇವಣಪ್ಪ ಬಾರ್ಕಿ, ಗುಡ್ಡಪ್ಪ ಪಾಣಿಗಟ್ಟಿ, ಶೇಕಪ್ಪ ಕರಡಿ, ತಿರಕಪ್ಪ ಗೋದಿ ಸೇರಿದಂತೆ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 