ನೇತಾಜಿ ಸುಭಾಷ್ ಚಂದ್ರ ಬೋಸ್ ಯುವಕರ ಮೇಲೆ ನಂಬಿಕೆ ಇಟ್ಟಿದ್ದರು- ಡಾ. ಮೃತ್ಯುಂಜಯ
Netaji Subhash Chandra Bose had faith in the youth - Dr. Mrityunjaya
ರಾಣೆಬೆನ್ನೂರು : 24 ಭಾರತ ದೇಶದ ಭವಿಷ್ಯ ಈ ದೇಶದ ಯುವಕರ ಮೇಲಿದೆ ಎನ್ನುವ ಕನಸನ್ನು ಕಂಡವರು ನೇತಾಜಿ ವೀರ ಸುಭಾಷ್ ಚಂದ್ರ ಬೋಸರು. ಭಾರತ ದೇಶದ ಕಂಡ ಬಹು ದೂರ ದೃಷ್ಟಿಯ ದೇಶಾಭಿಮಾನಿಯಾಗಿದ್ದ ಸುಭಾಷ್ ಚಂದ್ರ ಅವರು ಇಂದಿನ ಯುವ ಸಮುದಾಯಕ್ಕೆ ಬಹು ಮಾದರಿಯಾಗಿದ್ದಾರೆ ಎಂದು ಬಿಎಜೆಎಸ್ ಎಸ್ ಬಿಡಿ ಕಾಲೇಜಿನ ಪ್ರಾಚಾರ್ಯ ಡಾಕ್ಟರ್ ಎಂ. ಎಂ. ಮೃತ್ಯುಂಜಯ ಹೇಳಿದರು. ಅವರು ಶುಕ್ರವಾರ ಕಾಲೇಜು ಸಭಾ ಭವನದಲ್ಲಿ ಕಾಲೇಜಿನ ಐ ಕ್ಯೂ.ಎ.ಸಿ, ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಆಯೋಜಿಸಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಗೂ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವಾತಂತ್ರ್ಯಕ್ಕಾಗಿ ಹಲವು ಮಹನೀಯರು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ ಇಂದು ನಾವು ಸ್ವಚ್ಛಂದವಾಗಿ ಜೀವನ ಸಾಗಿಸುತ್ತಿರುವುದಾದರೆ ಅಂದಿನ ನಮ್ಮ ಪೂರ್ವಜರು, ದೇಶಭಕ್ತರು ಗಳಿಸಿಕೊಟ್ಟ ಸ್ವಾತಂತ್ರ್ಯ ದಿಂದ ಮಾತ್ರ ಸಾಧ್ಯವಾಗಿದೆ ಎಂದರು. ಮತದಾರರ ದಿನಾಚರಣೆ ಸಂದರ್ಭದಲ್ಲಿ ಪ್ರೊ, ಎ ಶಂಕರ್ ನಾಯಕ ಅವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೂತಿಸಿದರು. ವೇದಿಕೆಯಲ್ಲಿ ಉಪನ್ಯಾಸಕ ಶಿವಕುಮಾರ್ ಬಿಸಲಳ್ಳಿ , ಸೇರಿದಂತೆ ಮತ್ತಿತರ ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಬಸವರಾಜ ಪ್ರಾರ್ಥಿಸಿದರು. ಸುನಿಲ್ ಸ್ವಾಗತಿಸಿ, ಕಾರ್ಯಕ್ರಮಾ ಧಿಕಾರಿ ಪ್ರೊ.ಪರಶುರಾಮ ಪವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುತ್ತುರಾಜ್ ನಾಯಕ ನಿರೂಪಿಸಿ, ವಸುಂದರಾ ವಂದಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 