ರಾಷ್ಟ್ರೀಯ ಯುವದಿನ -2026 , ಸ್ವಾಮಿವಿವೇಕಾನಂದ ಜಯಂತಿ
National Youth Day -2026, Swami Vivekananda Jayanti
ಬೆಳಗಾವಿ 13: ದಿನಾಂಕ: 12/01/2025 ರಂದು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್‌ಇಂಡಿಯಾ ಬೆಳಗಾವಿ ಶಾಖೆ, ಮೇರಾಯುವ ಭಾರತ, ಬೆಳಗಾವಿ ಮತ್ತು ಮಹಾಂತೇಶ ನಗರದ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಪಿ.ಕ್ಯೂ.ಎ .ಸಿ. ಘಟಕ ಬೆಳಗಾವಿ ಇವರ ಸಹಯೋಗದಲ್ಲಿ ದಿವ್ಯಚೇತನಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ "ರಾಷ್ಟೀಯ ಯುವದಿನ -2026" ನ್ನು ಸಸಿಗೆ ನೀರೆರೆಯುವ ಮೂಲಕ ಹಾಗೂ ಸ್ವಾಮಿ ವಿವೇಕಾನಂದ ಭಾವ ಚಿತ್ರಕ್ಕೆ ಪೂಜೆಸಲ್ಲಿಸುವ ಮೂಲಕ ಉದ್ಘಾಟಿಸಲಾಯಿತು. ಮುಖ್ಯಅಥಿತಿಗಳಾಗಿ ಆಗಮಿಸಿದ ಡಾ. ಭಾವನಾ ದೇಶಪಾಂಡೆ, ಆರ್ಥಿಕ ಸಲಹೆಗಾರರು ಎಫ್. ಪಿ. ಎ. ಐ. ಬೆಳಗಾವಿ ಶಾಖೆ ಮಾತನಾಡಿ ಸ್ವಾಮಿ ವಿವೇಕಾನಂದರ ಜೀವನಭಾವಿ ಶಿಕ್ಷಕರು ಹಾಗೂ ಯುವಕರಿಗೆ ಆದರ್ಶವಾಗಬೇಕು ಇಂದು ಸೃಜನಶೀಲತೆ, ಕ್ರಿಯಾಶೀಲತೆ ಕಡಿಮೆಯಾಗುತ್ತದೆ,
ಭಾರತದ ಸಮಗ್ರವಿಕಾಸಕ್ಕೆ ವಿವೇಕಾನಂದರ ಚಿಂತನೆಗಳು ಅವಶ್ಯವಾಗಿವೆ. ಸೃಜನಶೀಲತೆಯನ್ನು ಬಳಸಿಕೊಳ್ಳಬೇಕೆಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ನಿರ್ಮಲಜಿ. ಬಟ್ಟಲ, ಪ್ರಾಚಾರ್ಯರು ಸ್ವಾಮಿ ವಿವೇಕಾನಂದರ ಕುಶಾ ಗ್ರಮತಿ ಬುದ್ದಿವಂತರಾಗಿದ್ದರು, ಆಗಿನ ಕಾಲಘಟ್ಟದ ಸಾಮಾಜಿಕ ಸಮಸ್ಯೆಗಳಿಗೆ ಆಧ್ಯಾತ್ಮಿಕ ಮೂಲಕ ಪರಿಹಾರ ನೀಡಿದರು ಸ್ವಾಮಿ ವಿವೇಕಾನಂದರು ಬೆಳಗಾವಿಗೆ ಬಂದಿದ್ದ ಸನ್ನಿವೇಶವನ್ನುಸ್ಮರಿಸಿದರು. ವಿವೇಕಾನಂದರ ಆಧರ್ಶ ಅವರ ಜೀವನ ಶಿಸ್ತು, ಚಿಂತನೆ, ತತ್ವಗಳನ್ನು, ವಿಚಾರಧಾರೆಗಳನ್ನು ಮೈಗುಡಿಸಿಕೊಂಡು ಬೇಕೆಂದು ಭಾವಿ ಶಿಕ್ಷಕರಿಗೆ ಕರೆ ನೀಡಿದರು.
" ಸ್ಥಿರಯುವ ನಾಯಕತ್ವಕ್ಕಾಗಿ ಸ್ವಾಮಿ ದೃಷ್ಟಿಕೋನ" ವಿಷಯವಾಗಿ ಪ್ರಬಂಧ ಸ್ಪರ್ಧೆಯನ್ನು ಏರಿ್ಡಸಲಾಗಿದ್ದು ಡಾ. ಗೀತಾ ದಯಣ್ಣವರ್ ಉಪನ್ಯಾಸಕರು ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿದರು. ವೃತ್ತಿಕಜಾಲಿಹಾಳ- ಪ್ರಥಮ್, ಪ್ರಜ್ವಲವಣ್ಣೂರು-ದ್ವಿತೀಯ, ಆಶಾಮೂಸೆನ್ನಿ-ತೃತೀಯ ಮತ್ತು ಪ್ರೇಮಕುಮಾರ, ಮೀರಾಹಿರೇಮಠ, ಕವಿತಾ ಕಡಬಿ ಸಮಾಧಾನ ಕರ ಬಹುಮಾನವನ್ನು ಪಡೆದಿದ್ದು ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿಪತ್ರವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಫ್ಪಿ. ಎ ಐ. ಬೆಳಗಾವಿ ಶಾಖೆಯ ಸಿಬ್ಬಂಧಿ ವರ್ಗ ಮತ್ತು ಕಾಲೇಜಿನ ಉಪನ್ಯಾಸಕ ವೃಂದವರು ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 