ಮುದೇನೂರು ಗ್ರಾಮದಲ್ಲಿ ಇಂದಿನಿಂದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ
National Service Scheme camp from today in Mudenur village
ರಾಣೆಬೆನ್ನೂರು : 24 ತಾಲೂಕಿನ ಇತಿಹಾಸ ಪ್ರಸಿದ್ಧ ಜಂಗಮ ಕ್ಷೇತ್ರ ಮುದೇನೂರು ಗ್ರಾಮದಲ್ಲಿ, ನಗರದ ಆರ್. ಟಿ. ಇ. ಎಸ್. ಕಾಲೇಜ್, ಶಿಕ್ಷಣ ಮಹಾವಿದ್ಯಾಲಯವು, ನಾಳೆ 25, 2026 ರಿಂದ ಮಾರ್ಚ್ 3,2026 ರವರೆಗೆ ವಾರಗಳ ಕಾಲ, ರಾಷ್ಟ್ರೀಯ ಸೇವಾ ಯೋಜನಾ - ಘಟಕ 1ರ 2025-26ನೇ ಸಾಲಿನ ಸಾಲಿನ ವಾರ್ಷಿಕ ವಿಶೇಷ ಶಿಬಿರ ಆಯೋಜಿಸಿದೆ. ಗ್ರಾಮದ ಮುಚ್ಛಂಡೇಶ್ವರ ಸಮುದಾಯ ಭವನದಲ್ಲಿ" ಡಿಜಿಟಲ್ ಸಾಕ್ಷರತೆ " ಮತ್ತು ಭಾರತಕ್ಕಾಗಿ ಯುವಜನತೆ " ಧೇಯ ವಾಕ್ಯದಲ್ಲಿ ಶಿಬಿರ ನಡೆಯಲಿದ್ದು, ನಿತ್ಯ ಯೋಗ ಮತ್ತು ಧ್ಯಾನ ಪ್ರಾಣಯಾಮ, ಶ್ರಮದಾನ, ವಿಶೇಷ ಉಪನ್ಯಾಸಗಳು ಜಾಥಾ ಬೀದಿ ನಾಟಕಗಳು, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಕಾರ್ಯಕ್ರಮಾಧಿಕಾರಿ ಅರುಣಕುಮಾರ ಕಲ್ಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬುಧವಾರ ಸಂಜೆ ಎಸ್ಡಿಎಂಸಿ ಅಧ್ಯಕ್ಷ ಸಾವಿತ್ರಾ ನ. ಉದಗಟ್ಟಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪಿಡಿಒ ಪ್ರಕಾಶ ಎಂ. ಕೆ., ಬಿಇಓ ಶ್ಯಾಮಸುಂದರ ಅಡಿಗ, ಸಮುದಾಯ ಭವನದ ಅಧ್ಯಕ್ಷ ರಾಜಶೇಖರ ಗೌಡ್ರು ಗಂಗನಗೌಡ್ರು, ಮತ್ತಿತರರು ಪಾಲ್ಗೊಳ್ಳುವರು. ರಾ.ತಾ.ಶಿ. ಡಾ. ಕೊಟ್ರೇಶ ಬಸಾಪುರ ಅವರು ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 