ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಕಾರ್ಯಕ್ರಮ

ಲೋಕದರ್ಶನ ವರದಿ

ರಾಣೇಬೆನ್ನೂರು 25: ವಿದ್ಯಾಥರ್ಿ ಹಂತದಲ್ಲಿಯೇ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳಬೇಕಾಗಿದೆ ಎಂದು ಬಿ.ಎ.ಜೆ.ಎಸ್.ಎಸ್ ಕಾಲೇಜಿನ ಗೌರವ ಉಪನ್ಯಾಸಕರಾದ ಎಚ್.ಎ. ಭಿಕ್ಷಾವತರ್ಿಮಠ ವಿದ್ಯಾಥರ್ಿಗಳಿಗೆ ತಿಳಿಸಿದರು.

ನಗರದ ಬಿ. ಎ. ಜೆ. ಎಸ್. ಎಸ್ ಪ್ರಥಮ ದಜರ್ೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇಂದು ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಹಳ್ಳಿಗಳಿಂದ ಕೂಡಿದ ನಮ್ಮ ದೇಶವೂ ಪ್ರಗತಿ ಹೊಂದಬೇಕಾದರೆ ಹಳ್ಳಿಗಳು ಮೊದಲು ಅಭಿವೃದ್ಧಿಯಾಗಬೇಕು ಎನ್ನುವುದು ಗಾಂಧೀಜಿಯವರ ಕನಸು ಆದ್ದರಿಂದ ವಿದ್ಯಾಥರ್ಿಗಳು ಹಳ್ಳಿಗಳಲ್ಲಿ ಮೊದಲು ಶಿಕ್ಷಣ, ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದರು.

ಮುಖ್ಯ ಅಥಿತಿಯಾಗಿ ಭಾಗವಹಿಸಿದ ರಾಜ್ಯ ನಿದರ್ೇಶನಾಲಯ ಪ್ರಶಸ್ತಿ ವಿಜೇತ ಉಪನ್ಯಾಸಕ ಹೆಚ್. ಶಿವಾನಂದ ಮಾಡನಾಡುತ್ತಾ ನಮ್ಮ ಬಿಡುವಿಲ್ಲದ ಹೋರಾಟದ ಬದುಕಿನಲ್ಲಿ ಎನ್.ಎಸ್.ಎಸ್ ಪ್ರಮುಖ ಪಾತ್ರವಹಿಸುತ್ತದೆ ವಿದ್ಯಾಥರ್ಿಗಳು ಪರಿಪೂರ್ಣ ವ್ಯಕ್ತಿತ್ವವನ್ನು ಪಡೆಯಲು ಬದುಕಿನ ವಿಷಣ್ಣತೆ, ನಿರಾಸೆ, ಸ್ವಾರ್ಥತೆ, ಕ್ಷುದ್ರತೆ, ಸಂಕುಚಿತ ಮನೋಭಾವಗಳನ್ನೂ ಹೊರ ದೂಡುವುದಲ್ಲದೆ ವಿದ್ಯಾಥರ್ಿಗಳನ್ನು ಉತ್ತಮ ಮೌಲ್ಯಗಳ ಸಾಕಾರ ಮೂತರ್ಿಯನ್ನಾಗಿ ಮಾಡಲು ಸಹಕಾರಿಯಾಗಿದೆ ಎಕೆಂದರೆ ಯುವ ಜನತೆ ದೇಶದ ದೊಡ್ಡಶಕ್ತಿ ಎನ್ ಎಸ್ ಎಸ್ ನಲ್ಲಿ ಎಲ್ಲಾ ರೀತಿಯ ಚಿಂತನೆಗೆ ಅವಕಾಶವಿದೆ ವಿದ್ಯಾಥರ್ಿಗಳ ಮನದಲ್ಲಿ ಸಾಮಾಜಿಕ ಸಾಂಸ್ಕೃತಿಕ ಆಸಕ್ತಿಯನ್ನು ಮೂಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಅಂದರೆ ಭಾಷೆ, ಭಾವೈಕ್ಯತೆ ಹಾಗೂ ಆತ್ಮವಿಶ್ವಾಸವನ್ನು ತುಂಬುವಕಾರ್ಯ ಈ ಯೋಜನೆ ನಿರ್ವಹಿಸುತ್ತಿದೆ ಹಾಗೂ ವಿದ್ಯಾಥರ್ಿಗಳು ಹೊಸ ಚಿಂತನೆಗಳಿಗೆ ಅವಕಾಶ ಸಿಗುವಂತಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಇಲ್ಲಿ ಪ್ರಾಯೋಗಿಕ ಅನುಭವವನ್ನು ಪಡೆದು ನಿಮ್ಮಲ್ಲಿರುವ ಪ್ರತಿಭೆ, ಬುದ್ಧಿವಂತಿಕೆಗಳನ್ನು ಹೊರ ಹೊಮ್ಮುವಂತೆ ಮಾಡಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳಲ್ಲಿಕ್ಕೆ ಈ ಯೋಜನೆ ಸಹಕಾರಿಯಾಗಿದೆ ಆದ್ದರಿಂದ  ಸಕರ್ಾರ ವಿಶೇಷ ಕಾಳಜಿವಹಿಸಿರುವುದು ಶ್ಲಾಘನೀಯ.

   ಪ್ರಾಸ್ತವಿಕವಾಗಿ ಮಾತನಾಡಿದ ಯೋಜನಾಧಿಕಾರಿ ಹೊನ್ನಮ್ಮನವರು ಮಾತನಾಡಿ ಮಹತ್ವ ಗಾಂಧಿಯವರ ಜನ್ಮ ಶತಾಬ್ದಿ ವರ್ಷವಾದ 1969ನ ಸೆಪ್ಟಂಬರ್ 24 ರಂದು ಆಗಿನ ಶಿಕ್ಷಣ ಮಂತ್ರಿಗಳಾದ ಡಾ. ವಿ. ಕೆ ವಿ. ಆರ್. ರಾವ್ ರವರಿಂದ ಪ್ರಾರಂಭವಾಯಿತು. ಅಂದು ಆರಂಭದಲ್ಲಿ 40 ಸಾವಿರ ವಿದ್ಯಾಥರ್ಿಗಳಿಂದ ಪ್ರಾರಂಬವಾದ ಈ ಯೋಜನೆ ಈಗ ನಮ್ಮ ರಾಷ್ಟ್ರದಲ್ಲಿ 33 ಲಕ್ಷ ವಿದ್ಯಾಥರ್ಿಹೊಂದಿದ್ದು ಇದರಲ್ಲಿ ಕನರ್ಾಟಕ ರಾಜ್ಯದಲ್ಲಿ 5 ಲಕ್ಷ ವಿದ್ಯಾಥರ್ಿಗಳನ್ನು ಹೊಂದಿದೆ ಎಂದರು.

     ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಪ್ರಕಾಶ ಬಸಪ್ಪನವರು ವಹಿಸಿಕೊಂಡಿದ್ದರು ಕಾರ್ಯಕ್ರಮದಲ್ಲಿ ಉಪಸ್ಥಿತಿ ಫ್ರೋ.ಬೀರಪ್ಪ ಜಿ.ಕೆ, ಫ್ರೋ. ರವೀಂದ್ರ ಬಣಕಾರ, ಫ್ರೋ. ಕಾಂತೇಶ ಅಂಬಿಗೇರ, ಫ್ರೋ. ಗೀತಾ ಫ್ರೋ. ಹೆಚ್. ಕುಮಾರಬೆಣ್ಣೆ ಮತ್ತಿತ್ತರರು ಸ್ವಾಗತವನ್ನು ಫ್ರೋ. ಕಾಂತೇಶ ಅಂಬಿಗೇರ ಸ್ವಾಗತಿಸಿದರು ನಿರೂಪಣೆಯನ್ನು ಅರುಣ ರಾಠೋಡ ನಿರೂಪಣೆ ಮಾಡಿದ್ದರು ವಂದನಾರ್ಪಣೆಯನ್ನು ಕಿರಣ ಕುಮಾರ ಎಸ್ ವಂದಿಸಿದರು