ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ
National Edible Oil Campaign
ಬ್ಯಾಡಗಿ 01 ಕೃಷಿ ಇಲಾಖೆ ಬ್ಯಾಡಗಿ ವತಿಯಿಂದ 2025-26ನೇ ಸಾಲಿನ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಯೋಜನೆಯಡಿ ಸೂರ್ಯಕಾಂತಿ 85 ಹಾಗೂ ಶೇಂಗಾ ಗಿ ತಳಿಗಳ ತರಬೇತಿ ಕಾರ್ಯಕ್ರಮ ಅರಬಗೊಂಡ ಗ್ರಾಮದಲ್ಲಿ ಶುಕ್ರವಾರ ನಡೆಯಿತು.ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ ಗಣೇಶ್ ಕಮ್ಮಾರ್ ಮಾತನಾಡಿ ದೇಶದಲ್ಲಿ ಎಣ್ಣೆ ಕಾಳು ಬೆಳೆಯುವ ಕ್ಷೇತ್ರ ಹಾಗೂ ರೈತರ ಪ್ರಮಾಣ ಕಡಿಮೆಯಾಗಿದೆ. ನಮ್ಮ ಬೇಡಿಕೆಗೆ ಅಗತ್ಯ ಇರುವಷ್ಟು ಎಣ್ಣೆ ಕಾಳು ಉತ್ಪಾದನೆ ಆಗುತ್ತಿಲ್ಲ. ಅದಕ್ಕೆ ಬೇರೆ ದೇಶದಿಂದ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆದ ಕಾರಣ ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುವಲ್ಲಿ ದೇಶದ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ದೇಶಿಯ ಎಣ್ಣೆಕಾಳು ಬೆಳೆಗಳ ಕ್ಷೇತ್ರ ವಿಸ್ತರಣೆ,ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವ ಹಾಗೂ ರೈತರ ಆದಾಯವನ್ನು ಸುಧಾರಿಸುವುದರೊಂದಿಗೆ ಆತ್ಮ ನಿರ್ಭರತೆಯನ್ನು ಸಾಧಿಸುವ ಉದ್ದೇಶದಿಂದ ಸರ್ಕಾರ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ-ಎಣ್ಣೆಕಾಳು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅದರಂತೆ ರೈತರಿಗೆ ಕೃಷಿ ಇಲಾಖೆಯಿಂದ ಉಚಿತವಾಗಿ ಬೀಜಗಳನ್ನು ವಿತರಿಸಲಾಗಿದೆ ಎಂದರು.ರೈತರು ಏಕ ಬೆಳೆ ಪದ್ಧತಿ ಬದಲಾಯಿಸಿ, ಪರ್ಯಾಯ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು.
ಮಣ್ಣು ಮತ್ತು ನೀರು ಸಂರಕ್ಷಣೆ, ತೇವಾಂಶ ನಿರ್ವಹಣೆ, ಸಾವಯವ ಗೊಬ್ಬರ ಬಳಕೆ, ಮಣ್ಣು ಸುಧಾರಕ ಜಿಪ್ಸಂ ಬಳಕೆ, ಹಸಿರೆಲೆ ಗೊಬ್ಬರ, ಲಘು ಪೋಷಕಾಂಶಗಳ ಬಳಕೆ ಮಾಡಬೇಕು. ರಾಸಾಯನಿಕ ಕಾಳು ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ದ್ರವ ರೂಪದ ಗೊಬ್ಬರಗಳಾದ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿ ಎ ಪಿ ಗೊಬ್ಬರ ಬಳಕೆ ಹಾಗೂ ಸಮಗ್ರ ಬೆಳೆ ನಿರ್ವಹಣೆ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ನಾಗರಾಜ್ ಬನ್ನಿಹಟ್ಟಿ ಮಾತನಾಡಿ ಶೇಂಗಾ ಬೆಳೆಯಲ್ಲಿ ಸೂರಳಿ ಪೂಚಿ (ಟಜಚಿಜಿ ಟಟಿಠ) ಬಾಧೆ ಕಂಡು ಬರುತ್ತಿದ್ದು, ಮರಿ ಕೀಟಗಳು ಚಿಗುರೆಲೆಗಳನ್ನು ಕೊರೆದು ಸುರಂಗ ಮಾಡಿ ಒಳಗಿನ ಹರಿತ್ತನ್ನು ತಿನ್ನುತ್ತದೆ.
ಅಧಿಕವಾದಾಗ ಪೂರ್ತಿ ಸುಟ್ಟಂತೆ ಕಾಣುತ್ತದೆ. ನವಣೆ ಅಥವಾ ಸಜ್ಜೆಯನ್ನು 4:1 ಅಂತರ ಬೆಳೆಯಾಗಿ ಬೆಳೆಯುವುದು ಸೂಕ್ತ. ಬೇವಿನ ಬೀಜದ ಕಷಾಯ (5ಅ) ವನ್ನು ಬಳಸುವದರಿಂದ ಇದರ ಹತೋಟಿ ಸಾಧ್ಯ. ಈ ಕೀಟದ ಬಾಧೆಯು ಆರ್ಥಿಕ ನಷ್ಟದ ರೇಖೆಯನ್ನು ದಾಟಿದಾಗ ಇದರ ನಿರ್ವಹಣೆಗೆ ಪ್ರೋಫೆನೋಫಾಸ್ 50 ಇ.ಸಿ. ಅ 2.0 ಮಿ.ಲೀ ಅಥವಾ ಪ್ಲೂಬೆಂಡಿಯಾಮೆಡ್ 39.35 ಎಸ್ ಸಿ ಅ 0.075 ಮಿ.ಲೀ ಅಥವಾ ಸ್ಟೈನೋಸಾಡ್ 45 ಎಸ್.ಸಿ. ಅ 0.12 ಮಿ.ಲೀ. ಪ್ರತಿ ಲೀ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ನಾಗರಾಜ್ ದೊಡ್ಡಕುರುಬರ, ಪಕ್ಕೀರ್ಪ ಕಿಳ್ಳಿ, ಉಡುಚಪ್ಪ ಹರಿಜನ, ಪ್ರಕಾಶ್ ಬಣಕಾರ, ದ್ಯಾವಪ್ಪ ಬರಡಿ, ಮಲ್ಲಪ್ಪ ಕಾಟೇನಹಳ್ಳಿ,ಮಾಲತೇಶ ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 