ಡಿಸೆಂಬರ್ 5 ಮತ್ತು 6 ರಂದು ಕೃಷಿ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಅಗ್ರಿ ಸ್ಟಾರ್ಟ್‌ಅಪ್ ಎಕ್ಸಪೋ 2025
National Agri Startup Expo 2025 at the Agricultural University on December 5th and 6th
ಧಾರವಾಡ 01: ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ 2025, ಡಿಸೆಂಬರ್ 5 ಮತ್ತು 6 ರಂದು ರಾಷ್ಟ್ರೀಯ ಅಗ್ರಿ ಸ್ಟಾರ್ಟ್‌ಅಪ್ ಎಕ್ಸಪೋ ಮೇಳವನ್ನು ಆಯೋಜಿಸಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೃಷಿಕ ಅಗ್ರಿ ಬಿಸಿನೆಸ್ ಇನ್ಕ್ಯೂಬೇಟರ್ ಯೋಜನೆ ಅಡಿಯಲ್ಲಿ ಕೃಷಿ ನಾವೀನ್ಯತೆ ಮತ್ತು ನವೋದ್ಯಮಿಗಳನ್ನು ಪ್ರೋತ್ಸಾಹಿಸುವ ಪ್ರಮುಖ ಉದ್ದೇಶವನ್ನು ಈ ಮೇಳ ಹೊಂದಿದ್ದು, ಮೇಳದಲ್ಲಿ 150 ಕೃಷಿ ಸ್ಟಾರ್ಟ್‌ಅಪ್‌ಗಳು ಭಾಗವಹಿಸಲಿವೆ.
ಈ ಸ್ಟಾರ್ಟ್‌ಅಪ್ ಮೇಳವನ್ನು ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಕೃಷಿ ಆಯುಕ್ತರಾದ ಡಾ. ಪಿ.ಕೆ. ಸಿಂಗ್ ಅವರು ಉದ್ಘಾಟಿಸಲಿದ್ದು, ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಪಿ. ಎಲ್. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ರಾಜ್ಯಗಳಿಂದ ವಿನೂತನ ಯಂತ್ರೋಪಕರಣಗಳು, ಮೌಲ್ಯವರ್ಧಿತ ಉತ್ಪನ್ನಗಳು, ಮಾರುಕಟ್ಟೆ ಹಾಗೂ ತಾಂತ್ರಿಕ ಮಾರ್ಗದರ್ಶನ, ಡಿಜಿಟಲ್ ಆಪ್, ಇತ್ಯಾದಿಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿದೆ. ವ್ಯವಹಾರ ಒಪಂ್ಪದ (ಃ2ಃ/ಃ2ಅ) ಮಾಡಲು ಅವಕಾಶವಿರುತ್ತದೆ. ನವೋದ್ಯಮ ಪ್ರೋತ್ಸಾಹಿಸಲು ಹ್ಯಾಕಥಾನ್ ಆಯೋಜಿಸಲಾಗಿದೆ.
ಮೇಳಕ್ಕೆ ಆಸಕ್ತ ರೈತರು, ಉದ್ಯಮೆದಾರರು ಹಾಗೂ ವಿದ್ಯಾರ್ಥಿಗಳು ಭೇಟಿ ನೀಡಿ ಪ್ರಯೋಜನ ಪಡೆಯಬೇಕೆಂದು ಯೋಜನೆಯ ಮುಖ್ಯಸ್ಥರಾದ ಡಾ. ಎಸ್.ಎಸ್.ಡೊಳ್ಳಿ ಕೋರಿರುತ್ತಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರದ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಹಾಗೂ ಮ್ಯಾನೇಜ್‌ಮೆಂಟ್ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು, ಆಸಕ್ತ ಸಾರ್ವಜನಿಕರು, ರೈತ ಉತ್ಪಾದಕ ಸಂಸ್ಥೆಗಳು ಸದಸ್ಯರು ಹಾಗೂ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಲಾಭ ಪಡೆಯಲು ವಿನಂತಿಸಲಾಗಿದೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 