ಬಸ್ ನಿಲ್ದಾದಲ್ಲಿ ನಾರಿ ಶಕ್ತಿ ಸಂಭ್ರಮಾಚರಣೆ ಕಾರ್ಯಕ್ರಮ

ಬಸ್ ನಿಲ್ದಾದಲ್ಲಿ ನಾರಿ ಶಕ್ತಿ ಸಂಭ್ರಮಾಚರಣೆ ಕಾರ್ಯಕ್ರಮ Nari Shakti celebration program at bus stand

ಬಸ್ ನಿಲ್ದಾದಲ್ಲಿ ನಾರಿ ಶಕ್ತಿ ಸಂಭ್ರಮಾಚರಣೆ ಕಾರ್ಯಕ್ರಮ 

ಕಾಗವಾಡ, 14 ; ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಪಂಚ್ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಕಳೆದ 2 ವರ್ಷಗಳಲ್ಲಿ ಮಹಿಳಾ ಪ್ರಯಾಣಿಕರು ದಾಖಲೆಯ 500 ಕೋಟಿ ಉಚಿತ ಪ್ರಯಾಣಗಳ ಗಡಿ ದಾಟಿದ್ದು, ದಾಖಲೆ ಸೃಷ್ಠಿಸಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಮಗದ ಅಧ್ಯಕ್ಷರು ಹಾಗೂ ಶಾಸಕರಾದ ರಾಜು ಕಾಗೆ ತಿಳಿಸಿದ್ದಾರೆ. 

ಅವರು, ಸೋಮವಾರ ದಿ. 14 ರಂದು ಪಟ್ಟಣದ ಬಸ್ ನಿಲ್ದಾದಲ್ಲಿ ನಾರಿ ಶಕ್ತಿ ಸಂಭ್ರಮಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಹಿಳಾ ಪ್ರಯಾಣಿಕರಿಗೆ ಸಿಹಿ ಹಂಚಿ, ಮಾತನಾಡುತ್ತಿದ್ದರು. ಶಕ್ತಿ ಯೋಜನೆ ಕೇವಲ ಉಚಿತ ಪ್ರಯಾಣ ಯೋಜನೆಯಲ್ಲ. ಇದು ಮಹಿಳಾ ಸಬಲೀಕರಣದ ಮಹತ್ವದ ಹೆಜ್ಜೆಯಾಗಿದ್ದು, ಆರ್ಥಿಕವಾಗಿ ಮಹಿಳೆಯರಿಗೆ ಸ್ವಾತಂತ್ರ್ಯ ನೀಡುವುದರ ಜೊತೆಗೆ, ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಅವರು ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳಲು ಈ ಯೋಜನೆ ನೇರವಾಗಿದೆ. 500 ಕೋಟಿ ಪ್ರಯಾಣಗಳ ಗಡಿ ದಾಟಿರುವುದು ಈ ಯೋಜನೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ ಎಂದು ಬಣ್ಣಿಸಿದರು. 

ಇದೇ ವೇಳೆ ಶಕ್ತಿ ಯೋಜನೆಯ ಯಶಸ್ಸಿಗೆ ಕಾರಣರಾದ ಸಾರಿಗೆ ಇಲಾಖೆಯ ಸಿಬ್ಬಂದಿ ಹಾಗೂ ಮಹಿಳಾ ಪ್ರಯಾಣಿಕರನ್ನು ಅಭಿನಂದಿದರು. ಅಲ್ಲದೆ, ಮಹಿಳಾ ಪ್ರಯಾಣಿಕರೊಂದಿಗೆ ಸಂವಾದ ನಡೆಸಿ, ಶಕ್ತಿ ಯೋಜನೆ ಕುರಿತು ಅವರ ಮುಕ್ತ ಅಭಿಪ್ರಾಯಗಳನ್ನು ಆಲಿಸಿದರು. ಮಹಿಳೆಯರ ಮುಖದಲ್ಲಿ ಮೂಡಿದ ಸಂತೋಷ ಮತ್ತು ಆತ್ಮವಿಶ್ವಾಸವು ಯೋಜನೆಯ ಸಾರ್ಥಕತೆಯನ್ನು ಬಿಂಬಿಸುತ್ತಿತ್ತು. ಇಡೀ ಕಾಗವಾಡ ಬಸ್ ನಿಲ್ದಾಣವು ಹಬ್ಬದ ವಾತಾವರಣದಂತೆ ಕಂಗೊಳಿಸಿತು. 

ವಾಯ್ಯವ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಚಿಕ್ಕೋಡಿ ಘಟಕದ ಡಿಸಿ ಶಶಿಧರ ಬಿ.ಎಂ. ಮಾತನಾಡಿ, ಕಳೆದ 2 ವರ್ಷಗಳಲ್ಲಿ ಶಕ್ತಿ ಯೋಜನೆಯಿಂದ ರಾಜ್ಯದ ಸುಮಾರು 350 ಕೋಟಿ ಮಹಿಳೆಯರು ಸಂಸ್ಥೆಯ ವಿವಿಧ ನಿಗಮಗಳ ಉಚಿತ ಬಸ್ ಪ್ರಯಾಣದ ಲಾಭ ಪಡೆದುಕೊಂಡಿದ್ದಾರೆಂದು ತಿಳಿಸಿದರು. 

ಈ ಸಂದರ್ಭದಲ್ಲಿ ತಾ.ಪಂ. ಇಓ ವೀರಣ್ಣಾ ವಾಲಿ, ಸಿಡಿಪಿಓ ಸಂಜೀವಕುಮಾರ ಸದಲಗಿ, ಪ.ಪಂ. ಮುಖ್ಯಾಧಿಕಾರಿ ಕೆ.ಕೆ. ಗಾವಡೆ, ಮುಖಂಡರಾದ ಸುಭಾಶ ಪಾಟೀಲ, ಭೀಮು ಅಕಿವಾಟೆ, ಉಮೇಶ ಪಾಟೀಲ, ಜ್ಯೋತಿಕುಮಾರ ಪಾಟೀಲ, ಸೌರಭ ಪಾಟೀಲ, ಕಾಕಾ ಪಾಟೀಲ, ಪ್ರಕಾಶ ಹೆಮಗೀರೆ, ಅಕ್ಷಯ ಪಾಟೀಲ, ವಿನಾಯಕ ಚೌಗುಲೆ, ರಮೇಶ ಚೌಗುಲೆ, ಚಿದಾನಂದ ಅವಟಿ, ಪವನ ಪಾಟೀಲ, ಸಾಗರ ಕಾಡಾಪೂರೆ, ಮುರಗೇಶ ಕುಂಬಾರ, ರಾವಸಾಬ ಪಾಟೀಲ, ಮಹಾಂತೇಶ ಬಡಿಗೇರ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿಜಗುಣಿ ಕೇರಿ, ಸುರೇಶ ಘಸ್ತಿ, ಎ.ಎಸ್‌. ಅಡಳ್ಳಿಮಠ, ಎಚ್‌.ಕೆ. ತೇಲಿ, ಎಂ.ಎಸ್‌. ಗೂಡನವರ, ಜೆ.ಎಲ್‌. ಕೋಳಿ ಸೇರಿದಂತೆ ಮುಖಂಡರು, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸರ್ವ ಸದಸ್ಯರು ಹಾಗೂ ನೂರಾರು ಪ್ರಯಾಣಿಕರು ಉಪಸ್ಥಿತರಿದ್ದರು.