ಶ್ರೀಶೈಲಕ್ಕೆ ನಂದಿ ಸೇನೆ ರಥಯಾತ್ರೆ ತೈಲ ಶಕ್ತಿಯಿಂದ ಭೂಮಿಯ ಜೀವಂತಿಕೆ ಸರ್ವನಾಶ

ಶ್ರೀಶೈಲಕ್ಕೆ ನಂದಿ ಸೇನೆ ರಥಯಾತ್ರೆ ತೈಲ ಶಕ್ತಿಯಿಂದ ಭೂಮಿಯ  ಜೀವಂತಿಕೆ ಸರ್ವನಾಶ  Nandi Sena Rath Yatra to Srisailam, the destruction of life on earth due to oil power

      ವಿಜಯಪುರ 04 : ನಂದಿ ಶಕ್ತಿಯಿಂದ ಭೂಮಿಯ ಜೀವಂತಿಕೆ ವಿಕಾಸ ಎಂಬ ವಿಷಯದ ಕುರಿತು ರಾಜ್ಯ ಮಟ್ಟದಲ್ಲಿ ಜನಜಾಗೃತಿ ಮೂಡಿಸಲು  ಶ್ರೀಶೈಲಕ್ಕೆ ಐತಿಹಾಸಿಕ ನಂದಿ ಸೇನೆ ರಥಯಾತ್ರೆ ಜರುಗಲಿದೆ ಎಂದು ನಂದಿ ಕೂಗು ಅಭಿಯಾನದ ಬಸವರಾಜ ಬಿರಾದಾರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆಯ ಅಡಿಯಲ್ಲಿ ಶ್ರೀಶೈಲ ಜಗದ್ಗುರುಗಳು ಮಾರ್ಗದರ್ಶನದಲ್ಲಿ ಜರಗುವ ನಂದಿ ಸೇನೆ ರಥಯಾತ್ರೆಯನ್ನು ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರು ವೀರಭದ್ರೇಶ್ವರ ದೇವಸ್ಥಾನದಿಂದ ಇದೇ ದಿ. 5 ರಂದು ಚಾಲನೆ ನೀಡಲಿದ್ದಾರೆ. ನಂದಿ ಸೇನೆ ರಥಯಾತ್ರೆ ಸಾಗುವ ಮಾರ್ಗದಲ್ಲಿ ಬರುವ ಪ್ರಮುಖ ಸ್ಥಳಗಳಲ್ಲಿ ರೈತ ಸಮಾವೇಶಗಳು ಜರಗುತ್ತಿವೆ.

       ಮಾರ್ಚ್‌ 5 ಕಾಗವಾಡ,  ಮಾರ್ಚ್‌ 6 ಅಥಣಿ, ಮಾರ್ಚ್‌ 7 ಹೊನವಾಡ, ಮಾರ್ಚ್‌ 8 ವಿಜಯಪುರ ಮತ್ತು ಮನಗೂಳಿ, ಮಾರ್ಚ್‌ 9 ಬಸವನಬಾಗೇವಾಡಿ  ಮತ್ತು ಹೂವಿನ ಹಿಪ್ಪರಗಿ, ಮಾರ್ಚ್‌ 10 ತಾಳಿಕೋಟಿ ಮತ್ತು ಹುಣಸಗಿ, ಮಾರ್ಚ್‌ 11 ದೇವದುರ್ಗ ಹಾಗೂ ಮಾರ್ಚ್‌ 12 ರಂದು ರಾಯಚೂರ ದಲ್ಲಿ ರೈತ ಸಮಾವೇಶಗಳು ಜರುಗಲಿವೆ ಎಂದರು. ಈ ಯಾತ್ರೆ ಇದೇ ದಿ.15 ರಂದು ಪಾವನ ಭೂಮಿ ಶ್ರೀಶೈಲಕ್ಕೆ ತಲುಪಲಿದೆ ಎಂದರು. ನಂದಿ ಸೇನೆ ರಥಯಾತ್ರೆ ತಲುಪಿದ ನಂತರ ಸಾವಿರಾರು ಗ್ರಾಮಗಳಿಂದ ಆಗಮಿಸಿದ ಜೋಡೆತ್ತಿನ ರೈತರ ಸಮ್ಮುಖದಲ್ಲಿ ಶ್ರೀಶೈಲ ಮಲ್ಲಯ್ಯನ ಸನ್ನಿಧಾನದಲ್ಲಿ ನಂದಿ ಸೇನೆ ರಥಯಾತ್ರೆಯ ಸಮಾರೋಪ ಸಮಾರಂಭ ಜರುಗಲಿದೆ ಎಂದರು. ನಂದಿ ಸೇನೆ ರಥ ಯಾತ್ರೆ ಸಾಗುವ ದಾರಿಯಲ್ಲಿ ಬರುವ ಗ್ರಾಮಗಳ ರೈತರು ಜೋಡೆತ್ತಿನ ಬಂಡಿಗಳಿಂದ ನಂದಿ ಸೇನೆ ರಥಯಾತ್ರೆಯನ್ನು ಸ್ವಾಗತಿಸಿ ಬೀಳ್ಕೊಡುವ ಮೂಲಕ ಶ್ರೀಶೈಲ ಮಲ್ಲಯ್ಯನಿಗೆ ಭಕ್ತಿ ಸೇವೆ ಸಲ್ಲಿಸಲಿರುವ ಐತಿಹಾಸಿಕ ಕ್ಷಣಕ್ಕೆ ನಂದಿ ಸೇನೆ ರಥಯಾತ್ರೆ ಸಾಕ್ಷಿಯಾಗಲಿದೆ.

      ರಾಜ್ಯದಲ್ಲಿರುವ 20 ಲಕ್ಷ ಜೋಡೆತ್ತಿನ ಕೃಷಿಕರು ನಂದಿ ಸೇನೆ ಎಂಬ ಸಂಘಟನೆ ಮೂಲಕ ಪ್ರತಿ ಗ್ರಾಮಗಳಲ್ಲಿ ಒಂದಾಗಲು ನಂದಿ ಸೇನೆ ರಥಯಾತ್ರೆ ಪ್ರೇರಕ ಶಕ್ತಿಯಾಗಲಿದೆ. ನಂದಿ ಶಕ್ತಿಯಿಂದ ಭೂಮಿಯ ಜೀವಂತಿಕೆ ಹೆಚ್ಚಾಗುವುದು ತೈಲ ಶಕ್ತಿಯಿಂದ ಭೂಮಿಯ ಜೀವಂತಿಕೆ ನಾಶವಾಗುವುದು. ಕರ್ನಾಟಕ ರಾಜ್ಯದ 60 ಭೂಮಿಯ ಸತ್ವ ನಾಶವಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದಕ್ಕೆ ಮೂಲ ಕಾರಣ ಕೇವಲ ತೈಲ ಶಕ್ತಿ ಅವಲಂಬಿತ ಕೃಷಿಗೆ ಆದ್ಯತೆ ನೀಡುತ್ತಿರುವುದಾಗಿದೆ. ತೈಲ ಶಕ್ತಿ ದೊರೆಯುವ ಪ್ರದೇಶದ ಜೀವಂತಿಕೆ ಕೂಡ ಕೊನೆಗೆ ನಾಶವಾಗುವುದು ಎಂಬುದು ಮಧ್ಯ ಪ್ರಾಚ್ಯದಲ್ಲಿ ಪ್ರಾರಂಬವಾದ ಯುದ್ಧದಿಂದ ತಿಳಿಯುತ್ತಿದೆ ಎಂದು ವಿಶ್ಲೇಷಿಸಿದರು.ಜೋಡೆತ್ತಿನ ಕೃಷಿ ಆಧಾರಿತ ಬಸವ ತತ್ವದಿಂದ ಸ್ವಾವಲಂಬಿ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಿಸಲು ಸಾಧ್ಯವಿದೆ ಎನ್ನುವುದು ಇತಿಹಾಸ, ವಚನ ಸಾಹಿತ್ಯ ಹಾಗೂ ವಿಜ್ಞಾನದಿಂದ ತಿಳಿಯುತ್ತಿದೆ.

       ಅದಕ್ಕಾಗಿ, ಜೋಡೆತ್ತಿನ ರೈತರು ನಿರ್ವಹಿಸುತ್ತಿರುವ ಸಾಮಾಜಿಕ ಜವಾಬ್ದಾರಿ ಕುರಿತು ಜನರಲ್ಲಿ ಅರಿವು ಮೂಡಿಸಿ ಕರ್ನಾಟಕ ರಾಜ್ಯದಲ್ಲಿರುವ 20 ಲಕ್ಷ ಜೋಡೆತ್ತಿನ ಕೃಷಿಕರನ್ನು ಒಗ್ಗೂಡಿಸುವುದು. ಜೋಡೆತ್ತಿನ ಕೃಷಿಕರನ್ನು ಬಸವ ತತ್ವದ ಮೂಲ ಬೇರುಗಳೆಂದು ಗುರುತಿಸಿ ಬಸವ ತತ್ವ ಪುನರುತ್ಥಾನಕ್ಕಾಗಿ 10ಅ ಬಡ್ಜೆಟ್ ಮೀಸಲಿಡುವ ಕಾನೂನು ಜಾರಿಗಾಗಿ ಹಾಗೂ ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ರೂ. 11000 ಪ್ತೋತ್ಸಾಹ ಧನ ನೀಡುವ ಯೋಜನೆ ಜಾರಿಗಾಗಿ ರಾಜ್ಯದ ಬಹು ಜನರ ಅಭಿಪ್ರಾಯ ಕ್ರೋಢೀಕರಿಸುವುದು ನಂದಿ ಸೇನೆ ರಥಯಾತ್ರೆಯ ಮೂಲ ಉದ್ದೇಶವಾಗಿದೆ ಎಂದರು. ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಸ್‌.ಜಿ. ನಾಡಗೌಡ, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಸಂಗಮೇಶ ಕಾಮನ್ನವರ, ಬಸವರಾಜ ಕೋನರಡ್ಡಿ, ಬಾಳಾಸೇಹಬ ಈಶ್ವರಗೊಂಡ, ಅಭಿಷೇಕ ಬಿರಾದಾರ ಪಾಲ್ಗೊಂಡಿದ್ದರು. ಧನ್ಯವಾದಗಳೊಂದಿಗೆ ತಮ್ಮ ವಿಶ್ವಾಸಿ ಬಸವರಾಜ ಬಿರಾದಾರ