ನಶಿಸುತ್ತಿರುವ ಭೂ ಫಲವತ್ತತೆ ಪುನರ್ ಸ್ಥಾಪನೆಗಾಗಿ ನಂದಿ ಭೂಷಿತ ಕಪ್ಪತ ಜ್ಯೋತಿಯಾತ್ರೆ
ಧಾರವಾಡ 27: ಭಾರತಿಯರಲ್ಲಿ ನಿಸರ್ಗದೇವತೆಯನ್ನುಆರಾಧಿಸುವ ಪರಂಪರೆಯಿದ್ದು ಪಾರಂಪರಿಕಕೃಷಿಯು ನಂದಿ ಆಧಾರಿತವಾಗಿದ್ದರಿಂದ ಸುಸ್ಥಿರ ಭೂ ಫಲವತ್ತತೆಯನ್ನು ಕಾಯ್ದುಕೊಳ್ಳುವ ಶಕ್ತಿ ಹೊಂದಿತ್ತುಎಂದುಗದಗಡೋಣಿಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನಮಠದ ಮ.ನಿ.ಪ್ರ. ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿಯ ಸಹಯೋಗದಲ್ಲಿ ನಂದಿಭೂಷಿತಕಪ್ಪತಜ್ಯೋತಿಯಾತ್ರೆ ‘ಚನ್ನಮ್ಮನಕಿತ್ತೂರಿನಿಂದಕಪ್ಪತಗುಡ್ಡದವರೆಗೆ’ ಅಂಗವಾಗಿ ಆಯೋಜಿಸಿದ್ದ ‘ನಂದಿ ಕೃಷಿ ಸಂಕಲ್ಪ’ ಕುರಿತ ಸಭೆಯಲ್ಲಿಅವರು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಈಗ ರಾಸಾಯನಿಕ ಕೃಷಿಯಿಂದಾಗಿ ನಶಿಸುತ್ತಿರುವ ಭೂ ಫಲವತ್ತತೆಯ ಪುನರ್ ಸ್ಥಾಪನೆಗಾಗಿ ಆಯೋಜಿಸಲಾಗಿರುವ ನಂದಿ ಭೂಷಿತಕಪ್ಪತಜ್ಯೋತಿಯಾತ್ರೆಯ ಮೂಲ ಉದ್ದೇಶ ಮಣ್ಣು ಸಂರಕ್ಷಣೆ, ಜಲ ಸಂರಕ್ಷಣೆಯೊಂದಿಗೆ ವಿಷಮುಕ್ತ, ರಾಸಾಯನಿಕ ಮುಕ್ತ ಆಹಾರಉತ್ಪಾದನೆಗಾಗಿರೈತರಲ್ಲಿಜಾಗೃತಿ ಮೂಡಿಸುವುದಾಗಿದೆಎಂದು ಶಿವಕುಮಾರ ಸ್ವಾಮೀಜಿ ಹೇಳಿದರು.
ಯಾತ್ರೆಯ ಪ್ರಧಾನ ಸಂಚಾಲಕ ಭಾಲಚಂದ್ರಜಾಬಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಯಾತ್ರೆಯ ಧ್ಯೇಯೋದ್ದೇಶಗಳನ್ನು ವಿವರಿಸುತ್ತಾಕಪ್ಪತಗುಡ್ಡದೊಂದಿಗೆಎಲ್ಲಕನ್ನಡಿಗರ ‘ಭಕ್ತಿ ಭಾವ ಬಂಧ’ ಬೆಸೆಯುವುದಾಗಿದ್ದು ಈ ಕೈಂಕರ್ಯದಲ್ಲಿ ಪ್ರತಿಯೊಬ್ಬರುಕೈಜೋಡಿಸಬೇಕೆಂದುಕರೆ ನೀಡಿದರು.
ಕಲಬುರ್ಗಿ ಸರ್ವೋದಯ ಸೇವಾ ಸಂಘದಅಧ್ಯಕ್ಷ ನಿವೃತ್ತ ಪ್ರಾಧ್ಯಾಪಕ ಶಂಕರರೆಡ್ಡಿ ಪಾಟೀಲ ಮಾತನಾಡುತ್ತಾ, ಪರಿಸರ ಸಂರಕ್ಷಣೆಗಾಗಿಕಂಕಣಬದ್ಧರಾಗಬೇಕೆಂದರು.ಭಾರತಿದೇವಿ ರಾಜಗುರು ಹಾಗೂ ಮಂಜುಳಾ ಹೊಸೂರವರು ಈ ಸಂದರ್ಭದಲ್ಲಿ ಮಾತನಾಡಿದರು. ವೀರಶೈವ ಮಹಿಳಾ ಜಾಗೃತ ವೇದಿಕೆಯ ಶಕುಂತಲಾ ಪಾಟೀಲ ಹಾಗೂ ಸಂಗಡಿಗರು ವಚನಗಳನ್ನು ಪ್ರಸ್ತುತಪಡಿಸಿದರು.
ಬಸವಕೇಂದ್ರದ ಬಸವಂತಪ್ಪತೋಟದ ಹಾಗೂ ಸಂಗಡಿಗರು ವಚನ ಪ್ರಾರ್ಥನೆಗೈದರು.ಶಂಕರ ಕುಂಬಿ ನಿರೂಪಿಸಿ, ಸ್ವಾಗತಿಸಿದರು.ಕೆ.ಎಚ್. ನಾಯಕ ವಂದಿಸಿದರು.
ಕಾರ್ಯಕ್ರಮದಲ್ಲಿ ವೀರಣ್ಣಒಡ್ಡೀನ, ಡಾ.ಧನವಂತ ಹಾಜವಗೋಳ, ಡಾ. ವಿಲಾಸ ಕುಲಕರ್ಣಿ, ಶಾಂತವೀರ ಬೆಟಗೇರಿ, ಅನಿಲ ಅಂಗಡಿ, ಮಹಾದೇವಿ ಕೊಪ್ಪದ, ವಿ.ವಿ. ಶೇರಿ ಮಹಾರಾಜನವರು, ಮಹಾಂತೇಶ ಪೂಜಾರ, ಸರಸ್ವತಿ ಪೂಜಾರ, ಸಿಸ್ಟರ್ ಲಿನೆಟ್.ಗೀತಾ ಕುಂಬಿ, ಸುರೇಶ ಹಾಲಭಾವಿ, ಎಸ್.ಜಿ. ಹಿರೇಮಠ, ಗಂಗಾಧರಗಿರಿಜಣ್ಣವರ, ಪ್ರೊ.ಬಾಬು ಮೊಟಗಿ, ಉಮಾ ಪುರಾಣಿಕ, ಸವಿತಾ ನಡಕಟ್ಟಿ, ರೂಪಾಅಡಕಿ, ಕೊಣ್ಣೂರ, ನಿಚ್ಚಣಕಿ, ಕಿತ್ತೂರ, ಧಾರವಾಡದ ವೀರಶೈವ ಲಿಂಗಾಯತಜಾಗೃತಿ ಸಮಿತಿಯ ಮಹಿಳೆಯರು, ಮುಂತಾದವರು ಭಾಗವಹಿಸಿದ್ದರು.