ನಾಗೇಶ್ ಜೆ. ಅವರಿಗೆ ರಾಯಣ್ಣ ಬರಹ ಮಾಣಿಕ್ಯ ರಾಜ್ಯ ಪ್ರಶಸ್ತಿ ಪ್ರದಾನ

ನಾಗೇಶ್ ಜೆ. ಅವರಿಗೆ ರಾಯಣ್ಣ ಬರಹ ಮಾಣಿಕ್ಯ ರಾಜ್ಯ ಪ್ರಶಸ್ತಿ ಪ್ರದಾನ  Nagesh J. presented with Rayanna Baraha Manikya State Award

ನಾಗೇಶ್ ಜೆ. ಅವರಿಗೆ ರಾಯಣ್ಣ ಬರಹ ಮಾಣಿಕ್ಯ ರಾಜ್ಯ ಪ್ರಶಸ್ತಿ ಪ್ರದಾನ  

ಸವದತ್ತಿ, 01 : ಪಟ್ಟಣದ ಶಿವಬಸವ ನಗರದ ಶಿಕ್ಷಕ, ಕವಿ, ವಿಮರ್ಶಕ ನಾಗೇಶ್ ಜೆ. ನಾಯಕ ಅವರಿಗೆ ರಾಜ್ಯಮಟ್ಟದ ‘ರಾಯಣ್ಣ ಬರಹ ಮಾಣಿಕ್ಯ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.  

ವಿಶ್ವ ಬಂಜಾರ ಕಲಾ ಸಾಹಿತ್ಯಿಕ ಸಂಘ ಅಮೀನಗಡದ ಬರಹವೇ ಶಕ್ತಿ ವೇದಿಕೆ ವತಿಯಿಂದ ಸೃಜನಶೀಲ ಬರಹಗಾರರಿಗೆ ಕೊಡಮಾಡುವ ರಾಜ್ಯಮಟ್ಟದ ಪ್ರಶಸ್ತಿ ಇದಾಗಿದ್ದು, ನಾಗೇಶ್ ನಾಯಕ ಅವರ ಸಾಹಿತ್ಯಿಕ ಸಾಧನೆಗೆ ಸಂದ ಗೌರವವಾಗಿದೆ. ಇತ್ತೀಚೆಗೆ ಬೈಲಹೊಂಗಲದ ಹೊಂಗನಸು ನಿಲಯದಲ್ಲಿ ಬರಹವೇ ಶಕ್ತಿ ವೇದಿಕೆಯ ರಾಜ್ಯಘಟಕದ ಪ್ರದಾನ ಕಾರ್ಯದರ್ಶಿಯಾದ ಮಂಜುಳಾ ಶೆಟ್ಟರ ನಾಗೇಶ್ ಜೆ. ನಾಯಕ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ರಾಜು ಹಕ್ಕಿ, ಯುವಕವಿಗಳಾದ ಬಸವರಾಜ ಪತ್ತಾರ ಉಪಸ್ಥಿತರಿದ್ದರು.   

ಕಳೆದ 25 ವರ್ಷಗಳಿಂದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರವಣಿಗೆ ಮಾಡುತ್ತಿರುವ ನಾಗೇಶ್ ನಾಯಕ 27 ಕೃತಿಗಳನ್ನು ರಚಿಸಿದ್ದಾರೆ. ದಸರಾ ಉತ್ಸವ, ರನ್ನ ಉತ್ಸವ, ಕಿತ್ತೂರು ಉತ್ಸವ, ಹಂಪಿ ಉತ್ಸವ, ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ದೂರದರ್ಶನ, ರೇಡಿಯೋ ಕಾರ್ಯಕ್ರಮ ಸೇರಿದಂತೆ ನಾಡಿನ ಅನೇಕ ಕಡೆಗಳಲ್ಲಿ ಕವಿತೆ ವಾಚನ ಮಾಡಿದ್ದಾರೆ. ನಾಡಿನ ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಸೇರಿದಂತೆ ಅನೇಕ ಪುಸ್ತಕ ಬಹುಮಾನ, ಗೌರವ ಪುರಸ್ಕಾರಗಳು ಸಂದಿವೆ. ಚಂದನ ಬೆಳಗು, ಶುಭೋದಯ ಕಾರ್ಯಕ್ರಮದ ನೇರ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ.