ಸಂಭ್ರಮದಿಂದ ನಾಗರ ಪಂಚಮಿ ಹಬ್ಬ ಆಚರಣೆ
Nagara Panchami festival celebrated with enthusiasm
ಸಂಭ್ರಮದಿಂದ ನಾಗರ ಪಂಚಮಿ ಹಬ್ಬ ಆಚರಣೆ
ಬೆಟಗೇರಿ 29: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸೋಮವಾರ ಜು.28 ಮತ್ತು ಮಂಗಳವಾರ ಜು.29 ರಂದು ನಾಗರ ಪಂಚಮಿ ಹಬ್ಬವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಿದರು.
ಹಿರಿಯ ನಾಗರಿಕ ಪತ್ರೆಪ್ಪ ನೀಲಣ್ಣವರ ಮಾತನಾಡಿ, ನಾಗರ ಪಂಚಮಿ ಹಬ್ಬ ನಾಡಿಗೆ ದೊಡ್ಡದಾಗಿದೆ, ಎಲ್ಲರ ಮನೆ-ಮನಗಳಲ್ಲಿ ಸಹೋದರತ್ವದ ಪ್ರತೀಕವಾಗಿದೆ ಎಂದರು.ಜು.28ರಂದು ಗ್ರಾಮದ ಹಲವಡೆವಿರುವ ಹಾವಿನ ಹುತ್ತಗಳಿಗೆ ಹಾಲಿನ ಅಭಿಷೇಕ, ಪೂಜೆ, ಪುನಸ್ಕಾರ ದೇವಸ್ಥಾನಗಳಲ್ಲಿಯೂ ಸಹ ಪುರಜನರಿಂದ ನಡೆದು, ಸಂಜೆ ಹೊತ್ತಿನಲ್ಲಿ ಎಲ್ಲರ ಮನೆಗಳಲ್ಲಿ ಮಣ್ಣಿನಿಂದ ರೂಪಿಸಿದ ನಾಗರ ಹಾವಿನ ಮೂರ್ತಿಗೆ ಹತ್ತಿ ಅರಳಿಯಿಂದ ಮಾಡಿದ ಹೊಂಗನೂಲು ಹಾಕಿ, ಭಕ್ತಿ ಭಾವದಿಂದ ಪೂಜೆ ಸಲ್ಲಿಸಿ, ಹಾಲಿನ ಅಭಿಷೇಕ ಮಾಡಿದ ಬಳಿಕ ರುಚಿಕರ ಉಂಡಿ, ತಿಂಡಿ ತಿನಿಸುಗಳನ್ನು ಆದಿಶೇಷನಿಗೆ ನೈವೇದ್ಯ ಸಮರ್ಿಸಿದ ಬಳಿಕ ಮನೆ ಮಂದಿಯಲ್ಲ ಒಟ್ಟೂಟ್ಟಿಗೆ ಕುಳಿತು ಸಿಹಿ ಸಿಹಿಯಾದ ತರತರಹದ ಉಂಡಿ, ತಿಂಡಿ ತಿನಸುಗಳನ್ನು ತಿಂದು ಆಸ್ವಾದಿಸಿದರು.
ಜು.29ರಂದು ಜಿಟಿ ಜಿಟಿ ಮಳೆಯ ಹನಿಯ ಮೋಜಿನಲ್ಲಿ ಹೆಣ್ಣು ಮಕ್ಕಳು ನವನವೀನ ಉಡುಗೆ-ತೊಡುಗೆ ತೊಟ್ಟು ಗ್ರಾಮದ ಮನೆಗಳಲ್ಲಿ ಕಟ್ಟಿದ ಜೋಕಾಲಿ ಹಾಗೂ ಊರಿನ ಹಲವಡೆ ಗಿಡ-ಮರಗಳ ರಂಬೆ-ಕೊಂಬೆಗಳಿಗೆ ಹಗ್ಗದಿಂದ ಕಟ್ಟಿದ ಜೋಕಾಲಿ ಜೀಕುವ ಹಾಗೂ ಬಾಲಕರು ಕೊಬರಿ ಬಟ್ಟಲಿನ ಬಿಂಗರಿಕೆ ಆಡಿಸುವ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲದೇ ಯುವಕ-ಯುವತಿಯರು, ವೃದ್ಧರು ಸೇರಿದಂತೆ ಬಾಲಕ-ಬಾಲಕಿಯರು ನಾಗರ ಪಂಚಮಿ ಹಬ್ಬದ ಪ್ರಯುಕ್ತ ಜೋಕಾಲಿ ಆಡಿ ನಲಿದು ಸಂಭ್ರಮಿಸಿದರು.
ಸ್ಥಳೀಯ ಹಿರಿಯ ನಾಗರಿಕ ಪುಂಡಲೀಕಪ್ಪ ಪಾರ್ವತೇರ ಅವರು, ನಾಗರ ಪಂಚಮಿ ಹಬ್ಬ ತಮ್ಮ ತಮ್ಮ ಬಂಧು ಬಳಗದವರಿಗೆ ಸಿಹಿಯಾದ ತಿಂಡಿಗಳನ್ನು ಹಂಚಿಕೊಳ್ಳುವ ಅವಿನಾಭಾವ ಸಂಬಂಧ ಬೆಸೆಯುವ ವೈಶಿಷ್ಟ್ಯ ಪೂರ್ಣ ಹಬ್ಬವಾಗಿದೆ ಎಂದು ನಾಗರ ಪಂಚಮಿ ಹಬ್ಬದ ವೈಶೀಷ್ಟ್ಯದ ಕುರಿತು ಹೇಳಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 