ಗುಲಾಬಿ ಹೂ ತೋಟ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾದ ಅಗಡಿ ಗ್ರಾಮದ ರೈತ ನಾಗಪ್ಪ ಶಾ ಹೋಳಿಕಟ್ಟಿ
ಹಾವೇರಿ 16: ಈ ಹಿಂದೆ ಗೋವಿನಜೋಳ ಬೆಳೆಯುತ್ತಿದ್ದ ರೈತರು ಹೂ ಬೆಳೆದು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಗೋವಿನ ಜೋಳ ದಿಂದ ನಷ್ಟ ಅನುಭವಿಸುತ್ತಿದ್ದ ಅನ್ನದಾತನಿಗೆ ಉದ್ಯೋಗ ಖಾತ್ರಿ ಯೋಜನೆ ವರವಾಗಿದೆ, ಇದೀಗ ತಿಂಗಳಿಗೆ ಉತ್ತಮ ಆದಾಯ ಪಡೆದು ಬೇರೆ ರೈತರಿಗೆ ಮಾದರಿಯಾಗಿದ್ದಾರೆ.
ಹಾವೇರಿ ತಾಲೂಕಿನ ಅಗಡಿ ಗ್ರಾಮದ ರೈತ ನಾಗಪ್ಪ ಎಂಬ ರೈತರೇ ಹೂ ಬೆಳೆದು ಲಾಭ ಪಡೆಯುತ್ತಿದ್ದಾರೆ.ಮೊದಲು ಗೋವಿನಜೋಳ ಬೆಳೆಯುತ್ತಿದ್ದವರು ಪರ್ಯಾಯವಾಗಿ ಬೇರೆ ಏನಾದರೂ ಬೆಳೆಯಬೇಕು ಎಂದುಕೊಂಡಿದ್ದರು.ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೂ ಬೆಳೆಯಲು ಗ್ರಾಮ ಪಂಚಾಯಿತಿ ಮತ್ತು ತೋಟಗಾರಿಕೆ ಇಲಾಖೆ ಸಹಾಯಧನ ನೀಡುತ್ತದೆ ಎಂದು ತಿಳಿದು ಈ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು ಭೇಟಿಯಾಗಿ ಯೋಜನೆ ಲಾಭ ಪಡೆದಿದ್ದಾರೆ.
1 ಎಕರೆಯಲ್ಲಿ ಬಟನ್ ರೋಜ್: ಗೋವಿನಜೋಳ ಬೆಳೆದಿದ್ದರೆ 1 ಎಕರೆಯಲ್ಲಿ 20ರಿಂದ 25 ಕ್ವಿಂಟಲ್ ಗೋವಿನ ಜೋಳ ಬೆಳೆಯಬಹುದಿತ್ತು. ಇದರಿಂದ ಬರುವ ಆದಾಯ ಕೇವಲ 20ರಿಂದ 25 ಸಾವಿರ ಆದರೆ, ಹೂ ಬೆಳೆದಿದ್ದರಿಂದ ಪ್ರತಿ 2 ದಿನಕ್ಕೆ 25 ರಿಂದ 30 ಕೆ.ಜಿ ತೂಕದ ಹೂವು ಬರುತ್ತಿದ್ದು 1500 ರೂಪಾಯಿ ಕನಿಷ್ಠ ಆದಾಯ ಪಡೆದು ತಿಂಗಳಿಗೆ 15 ರಿಂದ 20 ಸಾವಿರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ.
ಯೋಜನೆ ಕುರಿತು ಜನರಲ್ಲಿ ಜಾಗೃತಿ:ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುಷ್ಟಾನವು ಗ್ರಾಮೀಣ ಪ್ರದೇಶಕ್ಕೆ ವರದಾಮವಾಗಿದೆ. ಇದರ ಮಹತ್ವವನ್ನು ಐ,ಇ,ಸಿ, ಕಾರ್ಯಾಕ್ರಮದ ಮೂಲಕ ಜನರಿಗೆ ತಿಳಿಸಿಕೊಡುವುದರ ಮೂಲಕ ಹಾಗೂ ಮನೆ ಮನೆ ಭೇಟಿ ಮಾಡಿ ಜನರಿಗೆ ಈ ಯೋಜನೆಯಲ್ಲಿ ಇರುವ 21 ವಲಯ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಲಾಯಿತು.
ಜನರಿಗೆ ರೋಜ್‌ಗಾರ್ ದಿನಚಾರಣೆಯ ಮೂಲಕ ವೈಯಕ್ತಿಕ ಕಾಮಾಗಾರಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ ಸಮುದಾಯ ಕಾಮಗಾರಿಗಳನ್ನು ಮತ್ತು ವೈಯಕ್ತಿಕ ಕಾಮಗಾರಿಗಳನ್ನು ನಿರ್ಮಿಸಿಕೊಳ್ಳಲು ಸಣ್ಣ-ಅತಿಸಣ್ಣ ರೈತರಿಗೆ ಎಸ್.ಸಿ/ಎಸ್.ಟಿ ಕುಟುಂಬಗಳಿಗೆ ರೂ 5.00 ಲಕ್ಷ ರೂ ವರೆಗು ಸಹಾಯಧನ ನೀಡಲಾಗುತ್ತಿದೆ ಎಂದು ಗ್ರಾಮ ಪಂಚಾಯತಿ ಅವರು ಗ್ರಾಮಸ್ಥರಿಗೆ ಮಾಹಿತಿ ನೀಡಲಾಗಿದೆ.
ಯೋಜನೆ ಪ್ರಯೋಜನ ಹೇಗೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೈತರದು ಜಾಬ್ ಕಾರ್ಡ್ ಇರಬೇಕು.ಇಂಥವರು ಸಣ್ಣ ಅತಿಸಣ್ಣ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಈ ಯೋಜನೆ ಲಾಭ ಸಿಗುತ್ತದೆ.ಈ ಯೋಜನೆಯಲ್ಲಿ ಜಿವನ ಪರ್ಯಂತ 5.00 (ಒಂದೇ ಸಾರಿ) ಲಕ್ಷ ರೂ ವರೆಗೂ ಯೋಜನೆಯ ಲಾಭ ಪಡೆದುಕೊಳ್ಳಬಹುದು.
ನಾಗಪ್ಪ ಶಾ ಹೋಳಿಕಟ್ಟಿ ಪ್ರಸ್ತುತ ಈ ಗುಲಾಬಿ ಹೂವು ನಾಟಿ ಮಾಡಲು 60 ರಿಂದ 80 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಈಗ ನಿತ್ಯ 2 ದಿನಕ್ಕೋಮ್ಮೆ ಹೊಲದಲ್ಲಿ ಹೂವು ಕಟವ್ ಮಾಡುತ್ತಿರುವ ಕೂಲಿಕಾರರು ಕೂಲಿಯನ್ನು ವಾರಕ್ಕೆ ಒಂದು ಬಾರಿ ಉದ್ಯೋಗದಲ್ಲಿ ಪಡೆಯುತ್ತಿದ್ದಾರೆ. ಇದರಿಂದ ನಾವು ಕರ್ಚು ಮಾಡಿದ ಹಣವು ವಾಪಸ್ ಬರುತ್ತದೆ ಜೊತೆಗೆ ಇಲಾಖೆಯಿಂದ ಅನುದಾನ ಸಿಗುತ್ತದೆ ಎಂದು ರೈತ ನಾಗಪ್ಪ ಅವರು ಹೇಳುತ್ತಾರೆ.
ಹಬ್ಬದ ದಿನಗಳಲ್ಲಿ ತುಂಬಾ ಬೇಡಿಕೆ: ಹಬ್ಬದ ದಿನಗಳಲ್ಲಿ ತುಂಬಾ ಗುಲಾಬಿ ಹೂ ಬೇಡಿಕೆ ಇರುತ್ತದೆ. ಹಾಗೆಯೇ ಬೇರೆ ರಾಜ್ಯದವರಾದ ಮಹಾರಾಷ್ಟ್ರ ಗೋವಾ ಹರಿಯಾಣ ಮುಂತಾದವರು ಗುಲಾಬಿ ತೋಟಗಳನ್ನು ನೋಡಿಕೊಂಡು ಐದರಿಂದ ಆರು ವರ್ಷ ನಮಗೆ ಬೇಕು ಎಂದು ಎರಡರಿಂದ ಮೂರು ಲಕ್ಷದವರೆಗೂ ಅಡ್ವಾನ್ಸು ದುಡ್ಡನ್ನು ಕೊಟ್ಟು ಒಂದೇ ಮಾರ್ಕೆಟ್ ದರವನ್ನು ಮಾಡಿ ಹೋಗುತ್ತಿದ್ದಾರೆ ಇದರಿಂದ ತುಂಬಾ ಖುಷಿಯಾಗಿದೆ ರೈತ ನಾಗಪ್ಪ ಹೇಳುತ್ತಾನೆ.