45 ವರ್ಷಗಳಿಂದ ಅಥಣಿಯಲ್ಲಿ ನಿರಂತರವಾಗಿ ನಾಗದೇವತಾ ಜಾತ್ರಾ ಮಹೋತ್ಸವ

45 ವರ್ಷಗಳಿಂದ ಅಥಣಿಯಲ್ಲಿ ನಿರಂತರವಾಗಿ ನಾಗದೇವತಾ ಜಾತ್ರಾ ಮಹೋತ್ಸವ Nagadevata Jatra festival has been held continuously in Athani for 45 years.

45 ವರ್ಷಗಳಿಂದ ಅಥಣಿಯಲ್ಲಿ ನಿರಂತರವಾಗಿ ನಾಗದೇವತಾ ಜಾತ್ರಾ ಮಹೋತ್ಸವ

ಅಥಣಿ 29: ಶ್ರಾವಣ ಮಾಸದ ಮೊದಲನೆಯ ವಾರದ ನಾಗರ ಪಂಚಮಿ ನಿಮಿತ್ಯವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಾಗದೇವತಾ ವಿಶೇಷ ಜಾತ್ರಾ ಮಹೋತ್ಸವ ಹಾಗೂ ಸಹಸ್ರ  ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಜೊತೆಗೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ಅನ್ನಪ್ರಸಾದದ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ನಾಗದೇವತಾ ಕಾತ್ರಾ ಮಹೋತ್ಸವ ಕಮಿಟಿಯ ಉಪಾಧ್ಯಕ್ಷ, ಪುರಸಭಾ ಸದಸ್ಯ ಮಲ್ಲೇಶ ಹುದ್ದಾರ ಖುಷಿಯನ್ನು ವ್ಯಕ್ತಪಡಿಸಿದರು. ಬೆಳಗಾವಿ ಜಿಲ್ಲೆಯ ಅಥಣಿಯ ಶಿವಯೋಗಿ ಮುರುಘೇಂದ್ರ ಸ್ವಾಮಿ ಸರ್ಕಲ್ ನಲ್ಲಿರುವ  ನಾಗ ದೇವತಾ ಜಾತ್ರಾ ಮಹೋತ್ಸವ  ಕಮಿಟಿ ಹಾಗೂ ಶ್ರೀ ನಾಗರಾಜ್ ಯುವಕ ಮಂಡಳ ವತಿಯಿಂದ ಶ್ರೀ ನಾಗದೇವತ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜಾತಿ ಮತ, ಪಕ್ಷ ಬೇದ ಮರೆತು ನಾಗರ ಪಂಚಮಿ ಹಬ್ಬದ ನಿಮಿತ್ಯವಾಗಿ ನಾಗದೇವತಾ ಜಾತ್ರಾ ಮಹೋತ್ಸವದ ಜೊತೆಗೆ ಬೆಳಗ್ಗೆ 7 ರಿಂದ 9 ರವರೆಗೆ  ನಾಗ ದೇವರಿಗೆ  ಮಹಾ ರುದ್ರಾಭಿಷೇಕ ನಂತರ ಸುಮಂಗಳೆಯರಿಂದ ದೇವರಿಗೆ ಹಾಲು ಎಳೆಯುವ ಕಾರ್ಯಕ್ರಮ ನಂತರ ಬೆಳಗ್ಗೆ 10 ಗಂಟೆಯಿಂದ ಸಹಸ್ರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜೊತೆಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ  ಹತ್ತು ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ಅನ್ನಪ್ರಸಾದದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಜೊತೆಗೆ ನಾಗ ದೇವತೆಗೆ ಭಕ್ತಿಯಿಂದ ನಡೆದುಕೊಂಡವರಿಗೆ ಎಲ್ಲಾ ಸಿದ್ದಿಗಳಾಗಿದ್ದು ಎಷ್ಟೋ ಉದಾಹರಣೆಗಳಿವೆ ನಾಗರ ಪಂಚಮಿಯಲ್ಲಿ ವಿಶೇಷ ರೀತಿಯಲ್ಲಿ ಕಾರ್ಯಕ್ರಮವನ್ನು ಆಚರಿಸಿಕೊಂಡು ಬಂದಿದ್ದೇವೆ ಎಂದರು. ಈ ಸಂದರ್ಭದಲ್ಲಿ  ಗಣೇಶ ಬೋರಾಡೆ, ಶಿವಾನಂದ ದಿವಾನಮಾಳ,ಜಯದೇವ ನಿರಾಳೆ,ಜಗನಾಥ ಬಾಮನೆ,ರಾಜು ಇರಳೆ,ಅಶೋಕ ಹಡಪದ,ದೀಪಕ ಮೋಹಿತೆ,ಮುರಗೇಶ ಪಾಟೀಲ, ಮಹಾಂತೇಶ ಇರಳೆ, ಬಸವರಾಜ ಬಂಗಿ,ಗಜಾನನ ಪವಾರ, ಬಾಬು ಕಬಾಡಗಿ, ಅಪ್ಪಾಸಾಬ ಅಂಬುರೆ, ವಿನಯ ಪಾಟೀಲ,. ಸಿದ್ದು ಮಾಳಿ, ಬಸು ಮಾಳಿ, ರಾಹುಲ ಅಂಬೆಕರ, ಅಭಿಷೇಕ ಮಾಳಿ,ಉಮೇಶ ಕಟ್ಟಿಮನಿ,ಅಮೀತ ಮೋಹಿತೆ,ಲಾಡಜಿ ನದಾಪ,ದತ್ತಾ ವಾಸ್ಟರ,ಪ್ರಕಾಶ ಜುಳಜುಳೆ,ರವಿ ಶೇಡಶ್ಯಾಳೆ,ಮಲ್ಲಿಕಾರ್ಜುನ ಮಾಳಿ,ಶ್ರೀಮಂತ ಅಡಹಳ್ಳಿ, ಸುಭಾಷ್ ಅಡಹಳ್ಳಿ,ಚೇತನ ಕೋಕಾಟೆ,ಮಲ್ಲಿಕಾರ್ಜುನ ಕಣ್ಣೂರ, ನಾಗದೇವತಾ ಮಹಿಳಾ ಕಮಿಟಿಯ ಎಲ್ಲಾ ಸದಸ್ಯೆಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು..