ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ನಡಾಲ್
nadal
ಮೆಲ್ಬೊರ್ನ್, ಜ. 25- ವಿಶ್ವದ ನಂಬರ್ 1 ಆಟಗಾರ ಸ್ಪೇನ್ ರಫೇಲ್ ನಡಾಲ್ ಅವರು ಇಲ್ಲಿ ನಡೆಯುತ್ತಿರುವ ವರ್ಷದ ಮೊದಲ ಗ್ರ್ಯಾನ್ ಸ್ಲ್ಯಾಮ್ ಆಸ್ಟ್ರೇಲಿಯನ್ ಓಪನ್ ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ಸ್ ತಲುಪಿದ್ದಾರೆ.
ರೋಡ್ ಲಾವೆರ್ ಅರೇನಾದಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್ ಮೂರನೇ ಸುತ್ತಿನ ಪಂದ್ಯದಲ್ಲಿ ನಡಾಲ್ 6-1, 6-2, 6-4 ರಿಂದ ತಮ್ಮದೇ ದೇಶದ ಪ್ಯಾಬ್ಲೊ ಕ್ಯಾರೆನೊ ಬುಸ್ಟಾ ಅವರನ್ನು ಒಂದು ಗಂಟೆ 38 ನಿಮಿಷದ ಹೋರಾಟದಲ್ಲಿ ಮಣಿಸಿದರು. ನಡಾಲ್ 11ನೇ ಬಾರಿಗೆ ಟೂರ್ನಿಯ 16ನೇ ಘಟ್ಟ ಪ್ರವೇಶಿಸಿದ್ದಾರೆ.
ಉಳಿದಂತೆ ಡೇನಿಲ್ ಮೆಡ್ವೆಡೆವ್ 6-4, 6-3, 6-2 ರಿಂದ ಅಲೆಕ್ಸಿ ಪಾಪಿರಿನ್ ಅವರನ್ನು, ಡೋಮಿನಿಕ್ ಥೀಮ್ 6-2, 6-4, 6-7, 6-4 ರಿಂದ ಅಮೆರಿಕದ ಟೇಲರ್ ಫ್ರಿಡ್ಜ್ ಅವರನ್ನು, ಎಳನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೆವ್ 6-2, 6-2, 6-4 ರಿಂದ ಫರ್ನಾಂಡೊ ವರ್ಡಾಸ್ಕೊ ಅವರನ್ನು ಮಣಿಸಿದರು. ಸ್ವಿಟ್ಜರ್ ಲೆಂಡ್ ನ ಸ್ಟಾನಿಸ್ಲಾಸ್ ವಾವ್ರಿಂಕ 6-4, 4-1 ರಿಂದ ಮುನ್ನುಗುತ್ತಿದ್ದಾಗ ಜಾನ್ ಇಸ್ನರ್ ಗಾಯಕ್ಕೆ ತುತ್ತಾಗಿ ಅಂಗಳದಿಂದ ಹೊರ ನಡೆದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 